Select Your Language

Notifications

webdunia
webdunia
webdunia
webdunia

ಪ್ರೀತಿ ಜಿಂಟಾ ವಿವಾಹವಾಗುವ ಬಾಯ್‌ಫ್ರೆಂಡ್ ಯಾರು ಗೊತ್ತಾ?

ಪ್ರೀತಿ ಜಿಂಟಾ ವಿವಾಹವಾಗುವ ಬಾಯ್‌ಫ್ರೆಂಡ್ ಯಾರು ಗೊತ್ತಾ?
ಮುಂಬೈ , ಸೋಮವಾರ, 23 ನವೆಂಬರ್ 2015 (16:45 IST)
ನಗರದಲ್ಲಿ ಬಾಲಿವುಡ್ ನಟ ನಟಿಯರ ವಿವಾಹಗಳು ರಂಗೇರುತ್ತಿವೆ. ಬಾಲಿವುಡ್ ಹಾಟ್ ನಟಿ ಪ್ರೀತಿ ಜಿಂಟಾ, ತನ್ನ ಅಮೆರಿಕನ್ ಗೆಳೆಯನೊಂದಿಗೆ ಸಪ್ತಪದಿ ತುಳಿಯಲು ಸಿದ್ದವಾಗಿದ್ದಾರೆ.  
ಪ್ರೀತಿ ಜಿಂಟಾ ಅಮೆರಿಕಕ್ಕೆ ತೆರಳಿ ಗೆಳೆಯ ಗೆನೆ ಗೂಡೆನ್ಫ್‌ರನ್ನು ಸೇರಿಕೊಳ್ಳಲಿದ್ದಾರೆ. ವಿವಾಹ ಸಮಾರಂಭಕ್ಕೆ ಆತ್ಮಿಯ ಗೆಳೆಯರು ಮತ್ತು ಕುಟುಂಬದ ಸದಸ್ಯರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. 
 
ಮತ್ತೊಂದು ವರದಿಯ ಪ್ರಕಾರ, ಗಿನೆ ಗೂಡೆನ್ಫ್‌ ಪ್ರೀತಿ ಜಿಂಟಾಳ ಬಾಯ್‌ಫ್ರೆಂಡ್ ಅಲ್ಲ. ಉತ್ತಮ ಗೆಳೆಯ ಮಾತ್ರ. ಜಿಂಟಾ ಸಹೋದರ ಮತ್ತು ಆತನ ಪತ್ನಿ ಅಮೆರಿಕದಲ್ಲಿರುವುದರಿಂದ ಜಿಂಟಾ ಪದೇ ಪದೇ ಭೇಟಿ ನೀಡುತ್ತಿರುತ್ತಾಳೆ. ಆದ್ದರಿಂದ, ಆಕೆಗೆ ಅಮೆರಿಕದಲ್ಲಿ ತುಂಬಾ ಗೆಳೆಯರಿರಬಹುದು ಎಂದು ಹೇಳಲಾಗುತ್ತಿದೆ.  
 
ಆದರೆ ಜಿಂಟಾ ಆತ್ಮಿಯ ವಲಯಗಳ ಪ್ರಕಾರ, ಪ್ರೀತಿ ಜಿಂಟಾ ಶೀಘ್ರದಲ್ಲಿ ಸಪ್ತಪದಿ ತುಳಿಯುವುದು ಖಚಿತ ಎನ್ನಲಾಗಿದೆ.
 
ಹರಭಜನ್ ಸಿಂಗ್ ನಂತರ ಇದೀಗ ಪ್ರೀತಿ ಜಿಂಟಾ ವಿವಾಹದ ಸರದಿ ಬಂದಿರಬಹುದು. 
 

Share this Story:

Follow Webdunia kannada