Select Your Language

Notifications

webdunia
webdunia
webdunia
webdunia

ಪ್ರಜ್ವಲ್ ತೂಕ ಕಡಿಮೆ ಮಾಡಿಕೊಂಡಿದ್ಯಾಕೇಂದ್ರೆ!

ಪ್ರಜ್ವಲ್ ತೂಕ ಕಡಿಮೆ ಮಾಡಿಕೊಂಡಿದ್ಯಾಕೇಂದ್ರೆ!
, ಶನಿವಾರ, 17 ಮೇ 2014 (11:39 IST)
ಇತ್ತೀಚೆಗೆ ಹೀರೋ ಹಿರೋಯಿನ್ಗಳಿಗೆ ಅದರಲ್ಲೂ ಕನ್ನಡದವರಿಗೆ ತಮ್ಮ ತೂಕ ಕಡಿಮೆ ಮಾಡಿಕೊಳ್ಳುವ  ಪೈಪೋಟಿ ಆರಂಭ ಆಗಿದೆ. ಸ್ವಲ್ಪ ದಪ್ಪಗೆ ಇದ್ದರು ಸಾಕು ಸಣ್ಣ ಆಗುವತ್ತ ತಮ್ಮ ಗಮನ ನೀಡುತ್ತಿದ್ದಾರೆ. ಅದರಲ್ಲಿ ದೇವರಾಜ್ ಅವರ ಪುತ್ರ, ಪ್ರಜ್ವಲ್ ದೇವರಾಜ್ ಸಹ ಸೇರಿದ್ದಾರೆ. ತಮ್ಮ 27  ನೇ ಬರ್ತ ಡೇ ಗೆಂದು ವಿಶೇಷವಾಗಿ ದೇಹದ ಆಕೃತಿಯನ್ನು ಶೇಪ್ ಮಾಡಿಕೊಳ್ಳುತ್ತಿದ್ದಾರೆ ಪ್ರಜ್ವಲ್.  
 
ಇವರ ಹೋಂ ಬ್ಯಾನರಿನಲ್ಲಿ ತಯಾರಾಗುತ್ತಿರುವ ನೀ ನಾದೆ ನಾ ಚಿತ್ರವು ಅವರ ಜನ್ಮದಿನ ಜುಲೈ 4ರಂದು ಬಿಡುಗಡೆ ಆಗುತ್ತಿದೆ. ಆ ಚಿತ್ರದಲ್ಲಿ ಪ್ರಜ್ವಲ್ ಶಾಲಾ ಬಾಲಕನಾಗಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆಂದು ಅವರು ಸುಮಾರು 9  ಕೆಜಿ ಗಳಷ್ಟು ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಸಾಕಷ್ಟು ನೀರಿಕ್ಷೆಗಳಿರುವ ಈ ಚಿತ್ರವೂ ಪ್ರಜ್ವಲ್ ಗೆ ಬ್ರೇಕ್ ನೀಡೇ ನೀಡುತ್ತದೆ ಎನ್ನುವ ಅಮಿತವಾದ ನಂಬಿಕೆ ಹೊಂದಿದ್ದಾರೆ ಅವರ ಕುಟುಂಬದವರು .. ಕಾದು ನೋಡುವ ಪ್ರೇಕ್ಷಕರು ಏನು ಮಾಡ್ತಾರೋ ಅಂತ ! 

Share this Story:

Follow Webdunia kannada