Select Your Language

Notifications

webdunia
webdunia
webdunia
webdunia

ಶಿವನಾದ ಸಿಸಿಎಲ್ ಸ್ಟಾರ್ ಪ್ರದೀಪ್

ಶಿವನಾದ ಸಿಸಿಎಲ್ ಸ್ಟಾರ್ ಪ್ರದೀಪ್
, ಬುಧವಾರ, 26 ಆಗಸ್ಟ್ 2015 (11:27 IST)
ನಟ ಪ್ರದೀಪ್ ನಿಮಗೆ ಗೊತ್ತೇ ಇದೆ ಅಲ್ವಾ.  ಸಿಲ್ವರ್ ಸ್ಕ್ರೀನ್ ನಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳದಿದ್ರೂ ಸಿಸಿಎಲ್ ಕ್ರಿಕೆಟ್ ನ ಸ್ಟಾರ್ ಆಟಗಾರ. ಸಿಸಿಎಲ್ ನಿಂದಲೇ ಪ್ರದೀಪ್ ಕನ್ನಡಿಗರಿಗೆ ಚಿರಪರಿಚಿತ. ಇದೀಗ ಹೊಸ ಅವತಾರದಲ್ಲಿ ಪ್ರದೀಪ್ ಎಂಟ್ರಿಕೊಡ್ತಿದ್ದಾರೆ. ಟೈಗರ್ ಅನ್ನೋ ಟೈಟಲ್ ಇಟ್ಟುಕೊಂಡು ಸ್ಪೆಷಲ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರನ್ನ ಚಿತ್ರದ ಯಶಸ್ಸಿನ ಸೂತ್ರಧಾರ ನಿರ್ದೇಶಕ ನಂದಕೀಶೋರ್  ಟೈಗರ್ ಪ್ರಾಜೆಕ್ಟ್ ಅನ್ನ ಕೈಗೆತ್ತಿಕೊಂಡಿದ್ದಾರೆ. ಇನ್ನು ಇಂಚರಾ ಶಿವರಾಂ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.  
 
ಇದೀಗ ಟೈಗರ್ ಚಿತ್ರಕ್ಕಾಗಿ ಭರ್ಜರಿ ಫೋಟೋ ಶೂಟ್ ಮಾಡಲಾಗಿದೆ. ಇದ್ರಲ್ಲಿ ಬುಲೆಟ್ ಏರಿರೋ ಪ್ರದೀಪ್ ಶಿವನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಲವ್ವರ್ ಬಾಯ್ ಇಮೇಜ್ ನಲ್ಲಿದ್ದ ಪ್ರದೀಪ್ ಸಖತ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಸಿಸಿಎಲ್ ಹೀರೋ 7ತಿಂಗಳಿನಿಂದ ಸಖತ್ ವರ್ಕ್ ಔಟ್ ಮಾಡ್ತಿದ್ದಾರೆ. ಡ್ಯಾನ್ಸ್, ಫೈಟ್, ಜೊತೆಗೆ ಜಿಮ್ ಗೆ ಹೋಗಿ ಬೆವರಿಳಿಸ್ತಿದ್ದಾರೆ. ಖಡಕ್ ಪಾತ್ರವಾಗಿರೋದ್ರಿಂದ ಮೈಯನ್ನ ಹುರಿಗಟ್ಟಿಸೋದಕ್ಕೆ ದೇಹದಂಡನೆ ಶುರುಮಾಡಿದ್ದಾರೆ.
    
ಟೈಗರ್ ನ ಜೊತೆ ಸವಾರಿ 2 ಚಿತ್ರದ ನಾಯಕಿ ಮಧುರಿಮಾ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಇನ್ನು ಪ್ರದೀಪ್ ಮಾವ ಕೆ. ಶಿವರಾಂ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಫೋಟೋ ಶೂಟ್ ನೋಡಿದ್ರೆ ಚಿತ್ರ ಎಷ್ಟು ಅದ್ದೂರಿಯಾಗಿ ಬರ್ತಿದೆ ಅನ್ನೋದು ಗೊತ್ತಾಗುತ್ತೆ. ಇನ್ನು ಪ್ರದೀಪ್ ಶಿವನ ಅವತಾರದಲ್ಲಿ ಕಾಣಿಸಿಕೊಂಡಿರೋದ್ರಿಂದ ಸಾಕಷ್ಟು ಕುತೂಹಲ ಮೂಡಿಸಿದೆ. ಒಟ್ಟಾರೆ ಟೈಗರ್ ಸಿನಿಮಾ ಗಾಂಧಿನಗರದಲ್ಲಿ ಡಿಫರೆಂಟ್ ಆಗಿ ಬರೋದ್ರಲ್ಲಿ ಎರಡು ಮಾತೇ ಇಲ್ಲ. ಪ್ರದೀಪ್ ಬರ್ತ್ ಡೆ ಗೆ ಚಿತ್ರವನ್ನ ರಿಲೀಸ್ ಮಾಡುವ ಯೋಜನೆಯನ್ನ ಹಾಕಿಕೊಳ್ಳಲಾಗಿದೆ.  

Share this Story:

Follow Webdunia kannada