Webdunia - Bharat's app for daily news and videos

Install App

ಪಟಾಕಿ ಸಿನಿಮಾದ ಪೋಸ್ಟರ್ ರಿಲೀಸ್

Webdunia
ಬುಧವಾರ, 1 ಜುಲೈ 2015 (10:44 IST)
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಿರುವ ಬುಗುರಿ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗುತ್ತಿರುವ ಬೆನ್ನಲ್ಲೇ ಗಣಿ ಅಭಿಮಾನಿಗಳಿಗೊಂದು ಬಿಗ್ ಸಪ್ರೈಸ್ ನೀಡಿದ್ದಾರೆ. ಗಣೇಶ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಪಟಾಕಿ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ.
ಈಗಾಗಲೇ ಸಿನಿಮಾದ ಪೋಸ್ಟರ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಇನ್ನು ಪಟಾಕಿ ಸಿನಿಮಾ ತೆಲುಗಿನ ಪಟಾಸ್ ಚಿತ್ರದ ರಿಮೇಕ್ ಆಗಿದ್ದು, ತೆಲುಗಿನಲ್ಲಿ ನಂದಮೂರಿ ಕಲ್ಯಾಣ್ ನಿರ್ವಹಿಸಿದ ಪಾತ್ರವನ್ನು ಇದೀಗ ಕನ್ನಡದಲ್ಲಿ ಗಣಿ ನಿರ್ವಹಿಸುತ್ತಿದ್ದಾರೆ.ಇನ್ನು ಟಾಲಿವುಡ್ ನಲ್ಲಿ ಈ ಸಿನಿಮಾ ನಂದಮೂರಿ ಕಲ್ಯಾಣ್ ಗೆ ಭಾರೀ ಹೆಸರು ತಂದು ಕೊಟ್ಟಿತ್ತು. ಹಾಗಾಗಿ ಈ ಗಣೇಶ್ ಪಾತ್ರದ ಬಗ್ಗೆಯೂ ಸಾಕಷ್ಟು ನಿರೀಕ್ಷೆಗಳಿವೆ.
 
ಇನ್ನು ಸಿನಿಮಾದಲ್ಲಿ ಗಣೇಶ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಪೋಸ್ಟರ್ ನಲ್ಲಿಯೂ ಕೈಯಲ್ಲೊಂದು ಲಾಠಿ ಹಿಡಿದು ಪೊಲೀಸ್ ಡ್ರೆಸ್ ನಲ್ಲಿ ಸಖತ್ತಾಗಿಯೇ ಫೋಸ್ ಕೊಟ್ಟಿದ್ದಾರೆ. ಇನ್ನು ಈಗಗಾಲೇ ಸಾಮಾಜಿಕ ಜಾಲ ತಾಣಗಳಲ್ಲೂ ಪೋಸ್ಟರ್ ಬಗ್ಗೆ ಸಾಕಷ್ಟು ಮೆಚ್ಚುಗೆಯ ಅಭಿಪ್ರಾಯಗಲು ವ್ಯಕ್ತವಾಗಿವೆ.ಇನ್ನು ಇದರ ಜೊತೆಗೆ ಸ್ಟೈಲ್ ಕಿಂಗ್ ಅನ್ನೋ ಸಿನಿಮಾ ಕೂಡ ಗಣೇಶ್ ಜೇಬಿನಲ್ಲಿದ್ದು ಇದು ಕೂಡ ಇದೇ ವರ್ಷ ಬಿಡುಗಡೆಯಾಗಲಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments