Webdunia - Bharat's app for daily news and videos

Install App

ಮೂರು ಭಿನ್ನ ಪಾತ್ರಗಳಲ್ಲಿ ನಟಿಸಲು ಪೂಜಾಗಾಂಧಿ ಸಿದ್ಧತೆ

Webdunia
ಮಂಗಳವಾರ, 19 ಮೇ 2015 (10:21 IST)
ಪೂಜಾಗಾಂಧಿ ನಿರ್ಮಾಣ ಹಾಗೂ ಅಭಿನಯದ ಅಭಿನೇತ್ರಿ ಚಿತ್ರ ಆರಂಭವಾದ ದಿನದಿಂದ ಅದು ಬಿಡುಗಡೆಯ ದಿನದ ವರೆಗೂ ಅನೇಕಾನೇಕ ರೀತಿಯಲ್ಲಿ ವಿವಾದ ಎದುರಿಸಿತ್ತು. ಈಗ ಪೂಜಾ ಕೈಲಿ ಸಿನಿಮಾಗಳೇ ಇಲ್ಲ ಎನ್ನುವ ಸುದ್ದಿ ಹೆಚ್ಚು ಸುದ್ದಿಯಾಗಿತ್ತು. ಆದರೆ ಈಗ ತಿಳಿದುಬಂದಿರುವ ಸುದ್ದಿ ಪ್ರಕಾರ ಪೂಜಾಗಾಂಧಿಗೆ ವಿಭಿನ್ನ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಇದನ್ನು ಲಕ್ಕಿ ಶಂಕರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಶಿವಶಂಕರ್ ಫಿಲಿಂ ನಿರ್ಮಾಣ ಮಾಡಲಿದೆಯಂತೆ. ಈ ಸಿನಿ ಪ್ರೊಡಕ್ಷನ್ ಹೌಸ್ ನಿಂದ ಈಗಾಗಲೇ ದೇವ್ರಾಣೆ ಮತ್ತು ಸಿಗರೇಟ್ ಚಿತ್ರಗಳು ನಿರ್ಮಾಣಗೊಂಡಿದೆ.  
ಈ ಚಿತ್ರದಲ್ಲಿ ಪೂಜಾ ಮೂರು ಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರಂತೆ. ಇದು ಹಾಸ್ಯದ ಹೊಳೆ ಹರಿಸುವ ಚಿತ್ರವಾಗಿದೆಯಂತೆ.ಇದರಲ್ಲಿ ಪೂಜಾ ತ್ರಿಪಾತ್ರಗಳಿಗೆ ಮೂರು ಹೀರೋಗಳು ಇರ್ತಾರಂತೆ. ಇದರಲ್ಲಿ ಅನೇಕ ಪ್ರಸಿದ್ಧ ಕಾಮಿಡಿ ನಟರು ಇರುತ್ತಾರೆ ಎನ್ನುವ ಸಂಗತಿಯನ್ನು ನಿರ್ದೇಶಕ ಲಕ್ಕಿ ಶಂಕರ್ ಹೇಳಿದ್ದಾರೆ. ಪೂಜಾ ಹೊಸ ಚಿತ್ರ  ಜೂನ್ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆ ಇದೆ ಎನ್ನುವ ಸಂಗತಿ ಚಿತ್ರತಂಡದಿಂದ ತಿಳಿದು ಬಂದಿದೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments