Webdunia - Bharat's app for daily news and videos

Install App

ಮಳೆ ಹುಡುಗಿ ಪೂಜಾ ಗಾಂಧಿಗೆ ಮದುವೆಯಂತೆ!

Webdunia
ಮಂಗಳವಾರ, 29 ನವೆಂಬರ್ 2016 (06:16 IST)
ಬೆಂಗಳೂರು: ಮುಂಗಾರು ಮಳೆ ಖ್ಯಾತಿಯ ಅಭಿನೇತ್ರಿ ಪೂಜಾ ಗಾಂಧಿಗೆ ಕೊನೆಗೂ ಜೋಡಿ ಸಿಕ್ಕಿದೆಯಂತೆ. ಸದ್ಯದಲ್ಲೇ ಮದುವೆಯಾಗುತ್ತಿದ್ದಾರಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮನೆಗೆ ತಮ್ಮ ಜಿಲೇಬಿ ಚಿತ್ರದ ಪ್ರಚಾರಕ್ಕಾಗಿ ಹೋಗಿದ್ದ ಅವರು ಸ್ಪರ್ಧಿಗಳೊಂದಿಗೆ ಈ ವಿಚಾರ ಹೇಳಿಕೊಂಡಿದ್ದಾರೆ. ಅಲ್ಲದೆ ತಮ್ಮ ಮದುವೆಗೆ ನೀವೆಲ್ಲಾ ಬರಬೇಕು ಎಂದೂ ಸ್ಪರ್ಧಿಗಳಿಗೆ ಆಹ್ವಾನವಿತ್ತಿದ್ದಾರೆ. ಆದರೆ ಹುಡುಗ ಯಾರು, ಎಲ್ಲಿಯವನು ಎಂಬ ಬಗ್ಗೆ ಏನೂ ಹೇಳಿ್ಲ್ಲ.

ತಮ್ಮ ಕೈಯಲ್ಲಿ ಹಚ್ಚೆ ಹಾಕಿಸಿಕೊಂಡಿರುವ ಪೂಜಾ ಅದರಲ್ಲಿ ಪ್ರಶಾಂತ್ ಎಂಬು ಬರೆಸಿಕೊಂಡಿದ್ದಾರೆ. ಹಾಗಾಗಿ ಮದುವೆಯಾಗುತ್ತಿರುವ ಹುಡುಗನ ಹೆಸರು ಪ್ರಶಾಂತ್ ಇರಬೇಕೆಂದು ಎಲ್ಲರೂ ಊಹೆ ಮಾಡಿದ್ದಾರೆ. ಅಂತೂ ‘ಜಿಲೇಬಿ’ ಹುಡುಗಿ ಹೋಳಿಗೆ ಊಟ ಹಾಕಿಸುವ ಕಾಲ ಬಂದಿದೆ.

ಕಳೆದ ಬಿಗ್ ಬಾಸ್ ಆವೃತ್ತಿಯಲ್ಲಿ ಭಾಗವಹಿಸಿದ್ದ ಪೂಜಾ ಆಗಾಗ ತಮ್ಮ ಏಕಾಂಗಿತನದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದುಂಟು. ಅಲ್ಲದೆ ಸಹ ಸ್ಪರ್ಧಿ ಅಯ್ಯಪ್ಪ ಜತೆಗೆ ಅವರ ಹೆಸರು ಕೇಳಿಬಂದಿತ್ತು. ಆದರೆ ಇದೆಲ್ಲಾ ಬಿಗ್ ಬಾಸ್ ಗಿಮಿಕ್ ಎಂದೂ ಹೇಳಲಾಗಿತ್ತು. ಇದಕ್ಕಿಂತ ಮೊದಲು ಪೂಜಾ ಆನಂದ್ ಗೌಡ ಎಂಬ ರಿಯಲ್ ಎಸ್ಟೇಟ್ ಉದ್ಯಮಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರ ಅದು ಮುರಿದು ಬಿದ್ದಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಮ್ಮನ ಹುಟ್ಟುಹಬ್ಬಕ್ಕೆ ಹೊಸ ಯೋಜನೆ ಕೈಗೊಂಡ ನಟ ಕಿಚ್ಚ ಸುದೀಪ್

ಗಂಡನ ಕೈಚಳಕದಲ್ಲೇ ಸೆರೆಯಾಗಲಿದೆ ಬಿಗ್‌ಬಾಸ್ ಖ್ಯಾತಿಯ ಗೌತಮಿ ಜಾಧವ್ ಮುಂದಿನ ಸಿನಿಮಾ‌‌

ಕಿಚ್ಚ ಸುದೀಪ್ ಬರ್ತ್ ಡೇ ಹಿಂದಿನ ದಿನ ಇಲ್ಲಿ ಅಭಿಮಾನಿಗಳಿಗೆ ಸಿಗ್ತಾರೆ

ನಟ ದರ್ಶನ್ ಗೆ ಮುಂದೆ ಎಲ್ಲಿ ಜೈಲೂಟ, ಇಂದು ನಿರ್ಧಾರ

ಮೈಸೂರು ದಸರಾ ಆನೆ ಮಾವುತರ ಕುಟುಂಬಕ್ಕೆ ಕುಕ್ಕರ್ ಕೊಟ್ಟು ಊಟ ಹಾಕಿಸಿದ ವಿಜಯಲಕ್ಷ್ಮಿ ದರ್ಶನ್

ಮುಂದಿನ ಸುದ್ದಿ
Show comments