Select Your Language

Notifications

webdunia
webdunia
webdunia
webdunia

ಸಿಕ್ರೇಟ್ ರೂಮ್ ಸೇರಿದ ಪೂಜಾಗಾಂಧಿ

ಸಿಕ್ರೇಟ್ ರೂಮ್ ಸೇರಿದ ಪೂಜಾಗಾಂಧಿ
ಬೆಂಗಳೂರು , ಮಂಗಳವಾರ, 1 ಡಿಸೆಂಬರ್ 2015 (14:08 IST)
ಬಿಗ್ ಬಾಸ್ ಮನೆಯಿಂದ ಕಳೆದ ವಾರ ಯಾರು ಹೊರ ಬರುತ್ತಾರೆ ಅನ್ನೋ ಕುತೂಹಲ ಹಿಂದಿನ ವಾರಗಳಿಗಿಂತ ಕಳದೆ ವಾರ ಹೆಚ್ಚಾಗಿತ್ತು. ಅದರಂತೆ ಪೂಜಾ ಗಾಂಧಿ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದದ್ದು ಅಭಿಮಾನಿಗಳಿಗೆ ಶಾಕ್ ನೀಡಿತ್ತು. ರೆಹಮಾನ್ ಅಥವಾ ನೇಹಾ ಮನೆಯಿಂದ ಹೊರ ಬರುತ್ತಾರೆ ಅಂದುಕೊಂಡವರ ಆಲೋಚನೆಗಳೆಲ್ಲವೂ ಉಲ್ಟಾ ಆಗಿದ್ದವು.
 
  ಪೂಜಾ ಗಾಂಧಿ ಕೂಡ ನಾನು ನೇರವಾಗಿ ಮನೆ ಸೇರುತ್ತೇನೆ ಅಂದುಕೊಂಡಿದ್ರು.ಆದ್ರೆ ಆಗಿದ್ದೇ ಬೇರೆ ಪೂಜಾ ಅವರನ್ನು ಬಿಗ್ ಬಾಸ್ ಮನೆಗೆ ಕಳುಹಿಸಲ್ಲ. ಬದಲಾಗಿ ಅವರನ್ನು ಸಿಕ್ರೇಟ್ ರೂಮ್ ನಲ್ಲಿ ಇರಿಸಲಾಗಿದೆ.ಇದರಿಂದ ಪೂಜಾಗೆ ಬಿಗ್ ಬಾಸ್ ಮನೆಯಲ್ಲಿ ಏನಾಗುತ್ತಿದೆ ಅನ್ನೋದು ಗೊತ್ತಾಗಲಿದೆ.ಆದ್ರೆ ಉಳಿದ ಸ್ಪರ್ಧಿಗಳಿಗೆ ಪೂಜಾ ಸಿಕ್ರೇಟ್ ರೂಮ್ ನಲ್ಲಿ ಇದ್ದಾರೆ ಅನ್ನೋದು ಗೊತ್ತಿಲ್ಲ.ಆದ್ರೆ ಪೂಜಾ ಕೆಲ ದಿನಗಳ ನಂತರ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ.ಆಗ ಅಷ್ಟರಲ್ಲಿ ಅವರಿಗೆ ಎಲ್ಲರ ಅಸಲಿ ಮುಖದ ಪರಿಚಯವಾಗಲಿದೆ.
 
ಈ ಹಿಂದಿನ ಬಿಗ್ ಬಾಸ್ ಸೀಸನ್ -2 ನಲ್ಲಿ ನೀತು ಅವರನ್ನು ಇದೇ ರೀತಿ ಸಿಕ್ರೇಟ್ ರೂಮ್ ನಲ್ಲಿ ಇರಿಸಲಾಗಿತ್ತು. ಸೀಸನ್ – 3 ನಲ್ಲಿ ಪೂಜಾ ಗಾಂಧಿ ಸರದಿ. ಮೊದಲೇ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಮೈಮನಸ್ಸು ಜೋರಾಗಿದೆ. ಇನ್ನು ಸಿಕ್ರೇಟ್ ರೂಮ್ ನಲ್ಲಿ ಕುಳಿತು ಪೂಜಾ ಗಾಂಧಿ ನೋಡುವ ಹಾಗೂ ಕೇಳುವ ವಿಷಯಗಳು ಅವರು ಬಿಗ್ ಬಾಸ್ ಮನೆಗೆ ವಾಪಸ್ ಬಂದ ಮೇಲೆ ಯಾವ ರೀತಿ ಟ್ವಿಸ್ಟ್ ಕೊಡುತ್ತೆ ಅನ್ನೋದನ್ನು ಕಾದು ನೋಡ್ಬೇಕು.
 

Share this Story:

Follow Webdunia kannada