Select Your Language

Notifications

webdunia
webdunia
webdunia
webdunia

ಮೊದಲ ಮೂರು ದಿನದಲ್ಲೇ ರಾಶಿ ರಾಶಿ ಗಳಿಕೆ ಮಾಡಿದ ಪೀಕೆ

ಮೊದಲ ಮೂರು ದಿನದಲ್ಲೇ ರಾಶಿ ರಾಶಿ ಗಳಿಕೆ ಮಾಡಿದ ಪೀಕೆ
, ಮಂಗಳವಾರ, 23 ಡಿಸೆಂಬರ್ 2014 (11:08 IST)
ಕಳೆದ ಶುಕ್ರವಾರ ಆಮೀರ್ ಖಾನ್  ಅವರ ಬಹು ನಿರೀಕ್ಷಿತಚಿತ್ರ ಪೀಕೆ ಬಿಡುಗಡೆ ಆಯ್ತು. ಆಚಿತ್ರದ ಬಗ್ಗೆ ಚಿತ್ರತಂಡ ಮತ್ತು ಆಮೀರ್ ಅವರ ಅಭಿಮಾನಿಗಳು ಯಾವರೀತಿ ನಿರೀಕ್ಷೆಯನ್ನು ಹೊಂದಿದ್ದರೋ ಅದೇರೀತಿಯ ಫಲಿತಾಂಶ ಕಂಡು ಬಂದಿದೆ.
ಅದೇ ರೀತಿ ತನ್ನ ಗಳಿಕೆಯ ಕಾರಣದಿಂದಲೂ ಈಗ ಎಲ್ಲರ ಗಮನ ಸೆಳೆದಿದೆ. ಪೀಕೆ ಚಿತ್ರವೂ ಮೊದಲ ಮೂರು ದಿನಗಳಲ್ಲಿ ಗಳಿಸಿದ ಮೊತ್ತ  95.21ಕೋಟಿ ರೂಪಾಯಿಗಳು. ಮೊದಲ ದಿನದ ಗಳಿಕೆ 26.63ಕೋಟಿಗಳು, ಆನಂತರದ ದಿನದಲ್ಲಿ 30.34 ಕೋಟಿಗಳು, ಭಾನುವಾರ ಗಳಿಸಿದ ಮೊತ್ತ  38.24 ಕೋಟಿಗಳು. ಈ ಸಂಗತಿಯನ್ನು ಆ ಚಿತ್ರದ ನಿರ್ಮಾಣ ಸಂಸ್ಥೆ ಪ್ರಕಟಪಡಿಸಿದೆ. 
 
ಅನೇಕ ಕಾರಣಗಳಿಂದ ಈ ಚಿತ್ರ ವಿವಾದ ಎದುರಿಸಿತ್ತು. ಆದರೆ ಅವೆಲ್ಲ ಒತ್ತಡ ದೂರ ಮಾಡುವಂತೆ ಗೆಲುವನ್ನು ಸಾಧಿಸುತ್ತಿದೆ ಈ ಚಿತ್ರ. ಆಮೀರ್ ಖಾನ್  ಮತ್ತು ಅನುಷ್ಕ ಶರ್ಮ ಅಭಿನಯದ ಈ ಚಿತ್ರವನ್ನು  ರಾಜ್ ಕುಮಾರ್ ಹಿರಾನಿ ನಿರ್ದೇಶಿಸಿದ್ದಾರೆ , ವಿಧು ವಿನೋದ್ ಚೋಪ್ರ ನಿರ್ಮಾಣ ಮಾಡಿದ್ದಾರೆ. 

Share this Story:

Follow Webdunia kannada