Webdunia - Bharat's app for daily news and videos

Install App

ನಂಗೆ ಕೆಲಸ ಸಿಕ್ತಾ ಇಲ್ಲ ಎಂದು ಅಂದುಕೊಂಡಿದ್ದರು: ನಟಿ ವೈಷ್ಣವಿ ಗೌಡ

Webdunia
ಗುರುವಾರ, 29 ಜೂನ್ 2023 (08:20 IST)

ಬೆಂಗಳೂರು: ಕಿರುತೆರೆಯ ಸೂಪರ್ ಸ್ಟಾರ್ ನಟಿ ವೈಷ್ಣವಿ ಗೌಡ ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಅಗ್ನಿಸಾಕ್ಷಿ ಧಾರವಾಹಿ ಬಳಿಕ ವೈಷ್ಣವಿ ನಟಿಸುತ್ತಿರುವ ಧಾರವಾಹಿ ಸೀತಾರಾಮ.

ಜುಲೈ 17 ರಿಂದ ಧಾರವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆರಂಭಿಸಲಿದೆ. ವೈಷ್ಣವಿಗೆ ಜೋಡಿಯಾಗಿ ಗಗನ್ ಚಿನ್ನಪ್ಪ ಅಭಿನಯಿಸುತ್ತಿದ್ದಾರೆ. ಒಂದು ಪ್ರಬುದ್ಧ ಪಾತ್ರದ ಮೂಲಕ ವೈಷ್ಣವಿ ಕಾಣಿಸಿಕೊಳ್ಳಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು ಇಷ್ಟು ದಿನ ನನಗೆ ಕೆಲಸ ಸಿಕ್ತಾ ಇಲ್ಲ. ಅದಕ್ಕೆ ನಾನು ಅಭಿನಯಿಸುತ್ತಿಲ್ಲ. ಖಾಲಿ ಕೂತಿದ್ದೇನೆ ಎಂದು ಕೆಲವರು ಮಾತಾಡಿಕೊಳ್ಳುತ್ತಿದ್ದರು. ಅವರೆಲ್ಲರಿಗೂ ಉತ್ತರ ಈ ಪ್ರಾಜೆಕ್ಟ್. ಟೈಟಲ್ ಹಾಡನ್ನು ನೋಡಿದ ಮೇಲೆ ಇಷ್ಟು ದಿನ ನಾವು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎನಿಸುತ್ತಿದೆ. ಒಳ್ಳೆ ಕೆಲಸ ನಿಧಾನವಾಗುತ್ತದೆ ಎಂದು ಹೇಳುತ್ತಾರಲ್ಲಾ? ಅದು ಇದನ್ನು ನೋಡಿದರೆ ನಿಜವೆನಿಸುತ್ತದೆ  ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪಂಜಾಬಿ ನಟಿ ತಾನಿಯಾ ಮಲತಂದೆ ಮೇಲೆ ಹಲ್ಲೆ, ಆರೋಗ್ಯ ಸ್ಥಿತಿ ಗಂಭೀರ

ಕೋಟ್ಯಂತರ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣ: ನಿರ್ಮಾಪಕ ಅಲ್ಲು ಅರವಿಂದ್‌ಗೆ ಜಾರಿ ನಿರ್ದೇಶನಾಲಯ ಶಾಕ್‌

ಮಕ್ಕಳಾಗೋದಿಕ್ಕೆ ಮದುವೆಯೇ ಆಗ್ಬೇಕಾ: ನಟಿ ಭಾವನಾ ರಾಮಣ್ಣ ಪ್ರಶ್ನೆ

ಕಿಚ್ಚ ಸುದೀಪ್ ಮುಂದಿನ ಸಿನಿಮಾಗೆ ವರ್ಷಗಟ್ಟಲೆ ತೆಗೆದುಕೊಳ್ಳಲ್ಲ: ಹೊಸ ಟ್ರೆಂಡ್ ಶುರು ಮಾಡ್ತಾರಾ ಕಿಚ್ಚ

ಸಿನಿಮಾಗೆ ಬಂದ ಮೊದಲ ಕೊಡವ ನಟಿ ನಾನೇ: ರಶ್ಮಿಕಾ ಮಂದಣ್ಣ ವಿವಾದ

ಮುಂದಿನ ಸುದ್ದಿ
Show comments