Select Your Language

Notifications

webdunia
webdunia
webdunia
webdunia

ಊಟಿಯಲ್ಲಿ ಆರಾಮವಾಗಿ ನಡೆಯುತ್ತಿರುವ ಪಾಪು ಚಿತ್ರದ ಚಿತ್ರೀಕರಣ

ಊಟಿಯಲ್ಲಿ ಆರಾಮವಾಗಿ ನಡೆಯುತ್ತಿರುವ ಪಾಪು ಚಿತ್ರದ ಚಿತ್ರೀಕರಣ
, ಶುಕ್ರವಾರ, 24 ಜುಲೈ 2015 (10:43 IST)
ಮೈ ಹಾರ್ಟ್‌ಬೀಟ್ಸ್ ಯುವರ್ ನೇಮ್  ಎನ್ನುವ ಟ್ಯಾಗ್ ಲೈನ್ ಹೊಂದಿರುವ ಶ್ರೀನಗರ ಕಿಟ್ಟಿ, ಕೃತಿ ಕರಬಂಧ  ನಟಿಸುತ್ತಿರುವ ಚಿತ್ರ  ಪಾಪು. ಇದನ್ನು ಎಸ್ ಮಹೇಂದರ್ ನಿರ್ದೇಶಿಸುತ್ತಿದ್ದಾರೆ.  ಯುಟಿಸಿ ಎಂಟರ್ಟೈನರ್ಸ್ ಲಾಂಛನದಲ್ಲಿ ಗಂಗಹನುಮಯ್ಯ.ಬಿ.ಪಿ ನಿರ್ಮಾಣದಲ್ಲಿ  ಪಾಪು  ಚಿತ್ರ ಚಿತ್ರೀಕರಣ ಆಗುತ್ತಿದೆ. ಊಟಿಯಲ್ಲಿ ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಸಲಾಗುತ್ತಿದೆ. ಇಲ್ಲಿ  ಚಿತ್ರೀಕರಣ ಆಗುತ್ತಿರುವ ಸನ್ನಿವೇಶಗಳಲ್ಲಿ  ಶ್ರೀನಗರ ಕಿಟ್ಟಿ, ಕೃತಿ ಕರಬಂಧ  ಮುಂತಾದ ಕಲಾವಿದರು ಅಭಿನಯಿಸುತ್ತಿದ್ದಾರೆ.
ಜೆ.ಎಸ್.ವಾಲಿ ಅವರ ಛಾಯಾಗ್ರಹಣ,ಅರ್ಜುನ್ ಜನ್ಯ ಸಂಗೀತ, ಕೆ.ಎಂ.ಪ್ರಕಾಶ್  ಸಂಕಲನ,ಇಸ್ಮಾಯಿಲ್ ಕಲೆ, ಡಿಫರೆಂಟ್ ಡ್ಯಾನಿ ಸಾಹಸ , ಮುರಳಿ  ನೃತ್ಯ ಈ ಚಿತ್ರಕ್ಕಿದೆ . ಶ್ರೀನಗರ ಕಿಟ್ಟಿ, ಕೃತಿ ಕರಬಂಧ ಜೊತೆಗೆ  ಸುಹಾಸಿನಿ, ಶರತ್‌ಬಾಬು, ರಂಗಾಯಣ ರಘು. ಸಾಧು  ಕೋಕಿಲ, ತಬಲಾನಾಣಿ, ವೀಣಾ ಸುಂದರ್ ಮುಂತಾದವರು ಈ ಚಿತ್ರದ ಭಾಗವಾಗಿದ್ದಾರೆ.

Share this Story:

Follow Webdunia kannada