Select Your Language

Notifications

webdunia
webdunia
webdunia
webdunia

ಶಾರೂಖ್ ಖಾನ್ ಮುಂದಿನ ಚಿತ್ರಕ್ಕೆ ಪಾಕಿಸ್ತಾನಿ ನಟಿ ಮಹಿರಾ ಆಯ್ಕೆ

ಶಾರೂಖ್ ಖಾನ್ ಮುಂದಿನ ಚಿತ್ರಕ್ಕೆ ಪಾಕಿಸ್ತಾನಿ ನಟಿ ಮಹಿರಾ ಆಯ್ಕೆ
, ಬುಧವಾರ, 17 ಡಿಸೆಂಬರ್ 2014 (10:32 IST)
ಬಾಲಿವುಡ್ ನಲ್ಲಿ ಪಾಕಿಸ್ತಾನದ ಕಲಾವಿದರು ಬಂದು ಅಭಿನಯಿಸುವುದು ಸಾಮಾನ್ಯ ಸಂಗತಿ. ಮುಖ್ಯವಾಗಿ ಆ ದೇಶದ ಭಾಷೆ  ಅದೂ ಇದೂ ಮುಖ್ಯವಾಗಿ ಮೊದಲು ನಮ್ಮ ದೇಶದ ಪರಂಪರೆಯ ಭಾಗವಾಗಿತ್ತು ಎನ್ನುವುದನ್ನು ಇಲ್ಲಿ ನಾವು ಮರೆಯಲೇ ಬಾರದು. 
ಪಾಕಿಸ್ತಾನದ ಗಾಯಕಿಯರು ಮತ್ತು ಎಲ್ಲ ರಂಗದ ಕಲಾವಿದರು ಸಹಿತ ಈಗಾಗಲೇ ಭಾರತೀಯ ಚಿತ್ರರಂಗದ ಬಾಗಿಲು ತಟ್ಟಿದ್ದಾರೆ. ಮಹಿರ ಎನ್ನುವ ಮುದ್ದು ಸುಂದರಿ ಸಹಿತ ಈಗಾಗಲೇ ಭಾರತದತ್ತ ಬಂದು ಹೋಗಿ ಆಗಿದೆ. ಶಾರುಖ್ ಖಾನ್ ಅವರ ಮುಂದಿನ ಚಿತ್ರದಲ್ಲಿ ನಟಿಸಲು ಮತ್ತೆ ಈಕೆ ಅವಕಾಶ ಪಡೆದಿದ್ದಾಳೆ. 
 
ಈ ನಟಿ 2011ರಲ್ಲಿ ಬಿಡುಗಡೆಯಾದ ಬೋಲ್ ಚಿತ್ರದಲ್ಲಿ ನಟಿಸಿದ್ದಳು. ಮಹಿರ ತನ್ನ ಕಾಲೇಜು ಸಹಪಾಠಿ ಅಲಿ ಅಸ್ಕರಿ ಯನ್ನು ಮದುವೆ ಆಗಿ ಮಕ್ಕಳ ತಾಯಿಯಾಗಿದ್ದಾಳೆ ಈ ಭಾಮೆ. ಪಾಕಿಸ್ತಾನದ ಪ್ರಸಿದ್ಧ ಟೀವಿ ಚಾನೆಲ್ ನಲ್ಲಿ ಪ್ರಸಾರ ಆಗುತ್ತಿರುವ ಷೋ ನಲ್ಲಿ ಈಕೆಯದ್ದೇ ಮುಖ್ಯಭೂಮಿಕೆ. ಅಲ್ಲಿನ ಟೀವಿ ನಟಿಗೆ ಭಾರತದ ಸ್ಟಾರ್ ನಟನ ಜೊತೆ ನಟಿಸುವ ಸೌಭಾಗ್ಯ. ಪ್ರಸ್ತುತ ಶಾರುಖ್ ಖಾನ್  ಯಶ್ ರಾಜ್ ಚೋಪ್ರ ನಿರ್ಮಾಣದ ಫ್ಯಾನ್ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಅದಾದ ಬಳಿಕ ಅವರ ರಯಿಸ್ ಆರಂಭವಾಗುತ್ತದೆ ಪಾಕಿಸ್ತಾನಿ ಮಹಿರ ಜೊತೆ. ಈ ಚಿತ್ರದ ಶೂಟಿಂಗ್ ಮುಂಬೈ ಹಾಗೂ ಗುಜರಾಜ್ ನ ಕೆಲವು ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗುತ್ತದೆಯಂತೆ. 

Share this Story:

Follow Webdunia kannada