Webdunia - Bharat's app for daily news and videos

Install App

'ಬಲಗಂ' ಚಿತ್ರದ ಹಾಡಿನಿಂದ ಮನೆಮಾತಾಗಿದ್ದ ಪದ್ಮಶ್ರಿ ಪುರಸ್ಕೃತ ಮೊಗಿಲಯ್ಯ ಇನ್ನಿಲ್ಲ

Sampriya
ಗುರುವಾರ, 19 ಡಿಸೆಂಬರ್ 2024 (18:31 IST)
Photo Courtesy X
ತೆಲಂಗಾಣ: ಖ್ಯಾತ ಜನಪದ ಕಲಾವಿದ, ಪದ್ಮಶ್ರಿ ಪ್ರಶಸ್ತಿ ಪುರಸ್ಕೃತ ಪಾಸ್ತಮ್ ಮೊಗಿಲಯ್ಯ ಅವರ ಇಂದು ಅನಾರೋಗ್ಯದಿಂದ ನಿಧನರಾದರು.

ಇವರಿಗೆ ವೇಣು ಯೆಲ್ದಂಡಿ ನಿರ್ದೇಶನದ ಮತ್ತು ದಿಲ್ ರಾಜು ಅವರ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ 'ಬಲಗಂ' ಚಿತ್ರದ ತೊಡುಗ ಮಾ ತೊಡುಂಡಿ ಹಾಡು ಭಾರೀ ಜನಮನ್ನಣೆಯನ್ನು ತಂದುಕೊಟ್ಟಿತು. ಈ ಹಾಡು ತೆಲಂಗಾಣದಲ್ಲಿ ಭಾರಿ ಪ್ರಭಾವವನ್ನು ಸೃಷ್ಟಿಸಿತು.

ಈ  ಹಾಡಿನ ಮೂಲಕ ವಾರಂಗಲ್ ಜಿಲ್ಲೆಯ ಕೊಮ್ರಮ್ಮ ಮತ್ತು ಮೊಗಿಲಯ್ಯ ದಂಪತಿಗಳು ರಾಜ್ಯಾದ್ಯಂತ ಹೆಸರುವಾಸಿಯಾದರು.

ಮೊಗಿಲಯ್ಯ ಗುರುವಾರ ಬೆಳಿಗ್ಗೆ ಆರೋಗ್ಯ ಸಮಸ್ಯೆಗಳಿಂದ ನಿಧನರಾದರು. ಮೊಗಿಲಯ್ಯನವರ ಚಿಕಿತ್ಸಾ ವೆಚ್ಚಕ್ಕಾಗಿ ಚಿತ್ರದ ನಿರ್ದೇಶಕ ವೇಣು ಯೆಲ್ದಂಡಿ ಚಿತ್ರತಂಡ ಮತ್ತು ಸರ್ಕಾರದೊಂದಿಗೆ ಆರ್ಥಿಕ ನೆರವು ನೀಡಿದ್ದರು.

ಇತ್ತೀಚೆಗಷ್ಟೇ ಪೊನ್ನಂ ಸತ್ಯಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವ ಪೊನ್ನಂ ಪ್ರಭಾಕರ್ ಅವರು ಮೊಗಿಲಯ್ಯನವರ ಕುಟುಂಬಕ್ಕೆ ಮನೆ ನಿವೇಶನ ಹಾಗೂ ಮನೆ ನಿರ್ಮಿಸಿಕೊಡುವುದಾಗಿ ಹಾಗೂ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದ್ದರು.

ಸ್ಪೀಕರ್ ಗದ್ದಂ ಪ್ರಸಾದ್ ಅವರು ₹ 1 ಲಕ್ಷ ಆರ್ಥಿಕ ನೆರವು ನೀಡಿದರು.  ಇತ್ತೀಚೆಗೆ, ಮೆಗಾಸ್ಟಾರ್ ಚಿರಂಜೀವಿ ಅವರು ಮೊಗಿಲಯ್ಯ ಅವರ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿದು ಹೈದರಾಬಾದ್‌ನ NIMS ಆಸ್ಪತ್ರೆಯಲ್ಲಿ ಮೂತ್ರಪಿಂಡಕ್ಕೆ ಸಂಬಂಧಿಸಿದ ಚಿಕಿತ್ಸೆಯ ಸಮಯದಲ್ಲಿ ಹಣಕಾಸಿನ ನೆರವು ನೀಡಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments