`ಒನ್ ಟೈಮ್’...ಮಿಸ್ ಮಾಡ್ಕೊಳ್ಳದೆ ನೋಡಿ

Webdunia
ಮಂಗಳವಾರ, 13 ಡಿಸೆಂಬರ್ 2016 (12:25 IST)
ಪ್ರೀತಿಯನ್ನು ಗಳಿಸಿದ ಪ್ರೇಮಿಗಳು ತಮಗೆ ಸಿಕ್ಕಿರೋ ಹಿರಿಯರ ನಿಷ್ಕಲ್ಮಶ ಪ್ರೇಮದ ಬಗ್ಗೆ ಸಹ ಎಚ್ಚರವಹಿಸಬೇಕು. ಪ್ರೀತಿ ಮಾಡಿ ಓಡಿಹೋಗಬೇಡಿ, ಹಿರಿಯರನ್ನು ಒಪ್ಪಿಸಿ ಮದುವೆ ಆಗಿ ಎಂಬಂಥಾ ಸಂದೇಶ ಇರುವ `ಒನ್ ಟೈಮ್’ ಚಿತ್ರ ರಾಜ್ ಅವರ ನಿರ್ದೇಶನದಲ್ಲಿ ಡಿಯೋಕ್ಸ್ ಎಂಟರ್ಟೈನ್ಮೆಂಟ್ ಅಡಿಯಲ್ಲಿ ಮೂಡಿ ಬಂದಿದೆ. 
 
ಕಿರಣ್ ವಾಸುದೇವನ್ ಈ ಚಿತ್ರದ ನಿರ್ಮಾಪಕರು. `ಒನ್ ಟೈಮ್’...ಮಿಸ್ ಮಾಡ್ಕೊಬೇಡಿ ಸಿನಿಮಾದಲ್ಲಿ ಪೂನಾದಲ್ಲಿ ನಡೆಯುವ ಡರ್ಟ್ ರೇಸ್ ಬಹು ಮುಖ್ಯ ಆಕರ್ಷಣೆ. ಕನ್ನಡ ಚಿತ್ರ ರಂಗದ ಹೆಸರಾಂತ 14 ನಿರ್ದೇಶಕರುಗಳು ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಹಿರಿಯರಾದ ಎಸ್ ಕೆ ಭಗವಾನ್, ಕೆ ಎಸ್ ಎಲ್ ಸ್ವಾಮಿ, ಪಿ ಎನ್ ಸತ್ಯ, ವಿಜಯಲಕ್ಷ್ಮಿ ಸಿಂಗ್, ವಿಕ್ಟರಿ ವಾಸು, ಗಡ್ಡ ವಿಜಯ್ ಮತ್ತಿತರೆ ನಿರ್ದೇಶಕರಿಲ್ಲಿ ಕಾಣಿಸಿಕೊಂಡಿದ್ದಾರೆ.
 
 ತೇಜಸ್ ಹಾಗೂ ನೇಹಾ ಸಕ್ಸೇನ ಮುಖ್ಯ ತಾರಾಗಣದಲ್ಲಿದ್ದಾರೆ. ಅಭಿಮನ್ ರಾಯ್ ಅವರ ಸಂಗೀತದ ಮಾಧುರ್ಯಪೂರ್ಣ ಹಾಡುಗಳು ಜನ ಮೆಚ್ಚುಗೆ ಪಡೆದಿವೆ. ಸೂರ್ಯಕಾಂತ್ ಹೊನ್ನಳ್ಳಿ ಅವರ ಛಾಯಾಗ್ರಹಣ, ರಘು ಎಸ್ ಸಂಕಲನ, ತ್ರಿಭುವನ್, ಮಹೇಶ್ ಕುಮಾರ್ ಹಾಗೂ ರಾಜ್ ಅವರ ನೃತ್ಯ ನಿರ್ದೇಶನ, ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ. ಡಾ ವಿ ನಾಗೇಂದ್ರ ಪ್ರಸಾದ್, ಅಭಿಮನ್ ರಾಯ್, ರೋಶನ್ ರಾಯ್, ರಾಜ್ ಅವರು ಗೀತ ಸಾಹಿತ್ಯ ಒದಗಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟಿ ಶಿಲ್ಪಾಗೆ ಮುಗಿಯದ ಸಂಕಷ್ಟ, ತಾಯಿ ಸುನಂದಾ ಶೆಟ್ಟಿ ಆಸ್ಪತ್ರೆಗೆ ದಾಖಲು

ಸುಶಾಂತ್ ಸಿಂಗ್‌ನದ್ದು ಆತ್ಮಹತ್ಯೆಯಲ್ಲ ಇಬ್ಬರಿಂದ ಕೊಲೆ ನಡೆದಿದೆ: ಸಹೋದರಿ ಶ್ವೇತಾ ಸಿಂಗ್‌

ವಧು ವರರ ಲುಕ್‌ನಲ್ಲಿ ದರ್ಶನ್, ಪವಿತ್ರಾ ಗೌಡ, ವೈರಲ್ ಫೋಟೋ ಹಿಂದಿನ ಗುಟ್ಟು ಇದೇನಾ

ದರ್ಶನ್ ಆಂಡ್ ಗ್ಯಾಂಗ್ ಗೆ ತಾತ್ಕಾಲಿಕ ರಿಲೀಫ್: ದೋಷಾರೋಪಪಟ್ಟಿ ಮುಂದೂಡಿಕೆ

ಮಗ ವಿನೀಶ್ ಹುಟ್ಟುಹಬ್ಬದಂದೇ ದರ್ಶನ್ ಗೆ ಅಗ್ನಿಪರೀಕ್ಷೆ: ದಾಸನಿಗೆ ಎದೆಯಲ್ಲಿ ಢವ ಢವ

ಮುಂದಿನ ಸುದ್ದಿ
Show comments