Select Your Language

Notifications

webdunia
webdunia
webdunia
webdunia

ನಟ ಓಂ ಪುರಿ ದಾಂಪತ್ಯದಲ್ಲಿ ಬಿರುಕು

ನಟ ಓಂ ಪುರಿ ದಾಂಪತ್ಯದಲ್ಲಿ ಬಿರುಕು
, ಬುಧವಾರ, 10 ಫೆಬ್ರವರಿ 2016 (10:54 IST)
ಬಾಲಿವುಡ್ ನಲ್ಲಿ ಅದೇಕೋ ಗೊತ್ತಿಲ್ಲ ಇತ್ತೀಚೆಗೆ ನಟ ನಟಿಯರ  ವೈವಾಹಿಕ ಬದುಕು ಹಾದಿ ತಪ್ಪುತ್ತಿದೆ. ಮೊನ್ನೆಯಷ್ಟೇ ನಟ ಫರ್ಹಾನ್ ಅಖ್ತರ್ ಪತ್ನಿ ಅಧುನಾ ಅವರಿಂದ ದೂರವಾಗಿ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದರು. ಇದೀಗ ನಟ ಓಂ ಪುರಿ ಸಾಂಸಾರಿಕ ಜೀವನ ಕೂಡ ತಾಳ ತಪ್ಪಿದೆ.
 
ಹೌದು... ರಣ್ರೀಬ್ ಕಪೂರ್ ಕತ್ರೀನಾ ಕೈಫ್, ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ, ಬಳಿಕ ಇದೀಗ ಹಿರಿಯ ನಟ ಓಂ ಪರಿ ಹಾಗೂ ಪತ್ನಿ ನಂದಿತಾ ಪರಸ್ಪರ ದೂರವಾಗೋ ನಿರ್ಧಾರ ಮಾಡಿದ್ದಾರೆ.ಆ ಮೂಲಕ ತಮ್ಮ 26 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ಅಂತ್ಯ ಹಾಡಲು ಹೊರಟಿದ್ದಾರೆ ಓಂ ಪುರಿ ಹಾಗೂ ನಂದಿತಾ. ಇನ್ನು ಓಂ ಪುರಿ ಅವರ ಸಂಸಾರದಲ್ಲಿ ಬಿರುಕು ಮಾಡೋದಕ್ಕೆ ಕಾರಣ ಅವರ ಪತ್ನಿ ನಂದಿತಾ ಅವರು ಬರೆದಿರೋ ಪುಸ್ತಕ ಅಂತಾ ಹೇಳಲಾಗ್ತಿದೆ.
 
ನಂದಿತಾ ಓಂ ಪುರಿ ಅವರ ಜವನದ ಕುರಿತು ಅಲ್ ಲೈಕ್ಲಿ ಹೀರೋ ಅನ್ನೋ ಪುಸ್ತಕವೊಂದನ್ನು ಬರೆದಿದ್ದರು. ಅದರಲ್ಲಿ ಓಂ ಪುರಿ ತಮ್ಮ 14 ನೇ ವಯಸ್ಸಿನಲ್ಲೇ ಮಹಿಳೆಯೊಬ್ಬರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದರು ಎಂದು ಬರೆದ್ದಿದ್ದರಂತೆ. ಇದೇ ವಿಚಾರ ದಂಪತಿಯ ನಡುವೆ ವೈಮನಸ್ಸಿಗೆ ಕಾರಣವಾಗಿ ಅವರಿಬ್ಬರು ಪರಸ್ಪರ ದೂರವಾಗಿದ್ದಾರೆ ಅಂತಾ ಹೇಳಲಾಗ್ತಿದೆ.

Share this Story:

Follow Webdunia kannada