Select Your Language

Notifications

webdunia
webdunia
webdunia
webdunia

ಶಿವರಾಜ್ ಅಭಿಮಾನಿಗಳಿಗೆ ಮತ್ತೆ ಲಭ್ಯವಾದ ಓಂ...?!

ಶಿವರಾಜ್ ಅಭಿಮಾನಿಗಳಿಗೆ ಮತ್ತೆ ಲಭ್ಯವಾದ ಓಂ...?!
, ಸೋಮವಾರ, 9 ಮಾರ್ಚ್ 2015 (10:41 IST)
ಕನ್ನಡ ಚಲನ ಚಿತ್ರದಲ್ಲಿ ಈಗಾಗಲೇ ಸುಮಾರು 81  ವರ್ಷಗಳು  ಪೂರ್ಣ ವಾಗಿದೆ ಮಾತಿನ ಚಿತ್ರಗಳು ಬಂದು. ಆದರೆ ಸಂಖ್ಯೆಯಲ್ಲಿ ಬಹಳಷ್ಟು ಮುಂದೆ ಇರುವ ಚಿತ್ರ ಓಂ. ಅದು ಚಿತ್ರಮಂದಿರದಲ್ಲಿ ಅನೇಕಾನೇಕ ಬಾರಿ ಪ್ರದರ್ಶನಗೊಂಡಿದೆ. ಪ್ರತಿ ಬಾರಿಯೂ ಅತ್ಯುತ್ತಮ ಪ್ರಮಾಣದಲ್ಲಿ ಹಣ ಗಳಿಕೆಯನ್ನು ಮಾಡಿದೆ ಎಂದು ಹೇಳ ಬಹುದಾಗಿದೆ. ಈ ಚಿತ್ರ ಮೊಟ್ಟ ಮೊದಲ ಬಾರಿಗೆ 19.05.1995ರಲ್ಲಿ ಬಿಡುಗಡೆ ಆಗಿತ್ತು. ಅದಾದ ಬಳಿಕ ಅದು ಸುಮಾರು 550ಬಾರಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.  
ಈ ಚಿತ್ರ ಪ್ರತಿ ಎರಡು ವಾರಕ್ಕೊಮ್ಮೆ ಬಿಡುಗಡೆ ಆಗಿ ಜನರನ್ನು ರಂಜಿಸಿದೆ. ಅನೇಕ ಚಿತ್ರಮಂದಿರಗಳು, ಕೆಲವು ಒಂದೇ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಜನರನ್ನು ರಂಜಿಸಿದೆ. ಈ ಚಿತ್ರ ಸುಮಾರು 400 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ ಎಂದು ಸಿನಿಮಾ ವಿಶ್ಲೇಷಣೆಯಿಂದ ತಿಳಿದು ಬಂದಿದೆ. ಪ್ರತಿಬಾರಿ ಈ ಚಿತ್ರ ಬಿಡುಗಡೆ ಆದಾಗಲೂ, ಅದೇ ಸಮಯದಲ್ಲಿ ಬೇರೆ ಹೊಸ ಚಿತ್ರ ಬಿಡುಗಡೆ ಆಗುತ್ತಿತ್ತು. ವಿಶೇಷ ಅಂದ್ರೆ ಆ ಹೊಚ್ಚ ಹೊಸ ಚಿತ್ರಕ್ಕಿಂತ ಈ ಚಿತ್ರದ ಗಳಿಕೆ ಅಭೂತಪೂರ್ವಾಗಿರುತ್ತಿತ್ತು. 
 
ಇದನ್ನು ನಟ ನಿರ್ದೇಶಕ ಉಪೇಂದ್ರ ಅವರು ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್ ಅವರು ಮುಖ್ಯ ಪಾತ್ರಧಾರಿ ಆಗಿದ್ದಾರೆ. ಪ್ರೇಮ ಇವರ ಜೊತೆಗೆ ನಟಿಸಿರುವ ಈ ಚಿತ್ರವೂ ಕನ್ನಡ ಪ್ರೇಕ್ಷಕರು ಮರೆತಿಲ್ಲ ಅಷ್ಟೊಂದು ಮನ ಸೆಳೆದಿತ್ತು. ವಿಶೇಷ ಅಂದ್ರೆ ಈ ಚಿತ್ರದ  ಸ್ಯಾಟಲೈಟ್ ಹಕ್ಕು ಯಾರಿಗೂ ನೀಡಿಲ್ಲ ರಾಜ್ ಕುಮಾರ್ ಕುಟುಂಬ. ಅದ್ಧೂರಿಯ ಚಿತ್ರ ಇದಾಗಿದ್ದು, ಇದನ್ನು ಡಾ. ರಾಜ್ ಕುಮಾರ್ ಅವರ ಕುಟುಂಬ 1994-95ರಲ್ಲಿ ನಿರ್ಮಿಸಿತ್ತು. ಈ ಚಿತ್ರ 8 ಕೋಟಿಗಳಿಗೆ ಬಿಡುಗಡೆಯ ಹಕ್ಕು   ಚಾನೆಲ್ ಒಂದು ಕೇಳಿತ್ತಾದರೂ ಆ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. 
 

Share this Story:

Follow Webdunia kannada