Select Your Language

Notifications

webdunia
webdunia
webdunia
webdunia

ಹಳೆಯ ಕಾಲದ ಚಿತ್ರಗಳಲ್ಲಿ ಹೀರೋ-ಹೀರೋಯಿನ್ ಗಳ ಕಷ್ಟ ಕಂಡು ಮರುಗಿದ ನೀನಾಸಂ ಸತೀಶ್

ಹಳೆಯ ಕಾಲದ ಚಿತ್ರಗಳಲ್ಲಿ ಹೀರೋ-ಹೀರೋಯಿನ್ ಗಳ ಕಷ್ಟ ಕಂಡು ಮರುಗಿದ ನೀನಾಸಂ ಸತೀಶ್
ಬೆಂಗಳೂರು , ಸೋಮವಾರ, 24 ನವೆಂಬರ್ 2014 (12:17 IST)
ಕರೆಂಟು ಹೋದ ಟೈಮ್ ನಲ್ಲಿ ಎಂದು ಬಾಲಿವುಡ್ ಹಿರಿಯ ಸಂಗೀತ ನಿರ್ದೇಶಕ ಮತ್ತು ಹಾಡುಗಾರ ಬಪ್ಪಿ ಲಹರಿ ಕನ್ನಡ ಲವ್ ಇನ್ ಮಂಡ್ಯ ಚಿತ್ರದಲ್ಲಿ ಹಾಡಿದ್ದಾರೆ. ಆ ಹಾಡು ಅನೇಕ ಬಗೆಯ ಆಕರ್ಷಕ ಹಾಗೂ ಇಷ್ಟ ಪಡುವ ಟ್ಯೂನ್ನಿಂದ ಕೂಡಿದೆ. ರೆಟ್ರೋ ಟ್ರಾಕ್ ಒಂದು ಅಪರೂಪದ ಗಾನ ಹಾಡು ಸಹಿತ ಅತ್ಯಂತ ಆಕರ್ಷಕವಾಗಿದೆ ಎಂದು ಚಿತ್ರತಂಡದವರ ಅಭಿಮತವಾಗಿದೆ. 
 
ಈ ಶಾಟ್ ಸಹಿತ ಎಂಬತ್ತರ ದಶಕದಲ್ಲಿ ಇರುವ ವಾತಾವರಣದಂತೆ  ನಿರ್ಮಿಸಲಾಗಿದ್ದು, ಅದು ನೈಜವಾಗಿ ಬರುವಂತೆ ಶೂಟ್ ಮಾಡಿದ್ದಾರೆ ಛಾಯಾಗ್ರಾಹಕ ಸುಗುಣನ್ 
 
ಈ ಬಗ್ಗೆ ನೀನಾಸಂ  ಸತೀಶ್ ಈ ಬಗ್ಗೆ ಮಾತನಾಡುತ್ತ ಈ ಹಾಡಿನ ಚಿತ್ರೀಕರಣ ಆಗುವಾಗ ಇಡಿ ತಂಡ ನಗುವುದನ್ನು ನಿಲ್ಲಿಸಿರಲಿಲ್ಲ. ಆ ಹಾಡಲ್ಲಿ ಎಂಬತ್ತರ ದಶಕದ ಶೈಲಿ ಇದ್ದು, ರೆಟ್ರೋ ಕಾಸ್ಟೂಮ್ ನ್ನು ಧರಿಸಿ ಆ ಹಾಡಿಗೆ ನಮ್ಮನ್ನು ತೊಡಗಿಸಿಕೊಂಡೆವು. ಎಂಬತ್ತರ ದಶಕದಲ್ಲಿ ಅಂಬರೀಶ್ , ರಾಜ್ ಕುಮಾರ್, ವಿಷ್ಣು ಸರ್, ಶಿವಣ್ಣ ಮತ್ತು ಶಂಕರ್  ಚಿತ್ರಗಳನ್ನು ಹೋಲುವಂತೆ ಚಿತ್ರೀಕರಣ ಮಾಡಲಾಯಿತು.
 
ಈ  ಹಾಡಲ್ಲಿ ನಾನು ಹಾಗು ಸಿಂಧು ಆರು ಅಡಿ ಚೇರಿಂದ ಜಿಗಿದೆವು, ಬೆಟ್ಟದ ಮೇಲಿಂದ ಉರುಳಿದೆವು. ಇವೆಲ್ಲ ಚಿತ್ರದಲ್ಲಿ ನೋಡುವಾಗ ಚಂದ ಅನ್ನಿಸುತ್ತದೆ. ಆದರೆ ನಿಜಕ್ಕೂ ಅಂತಹ  ಶೂಟಿಂಗ್ ನಲ್ಲಿ ಭಾಗವಹಿಸುವುದು ಮಾತ್ರ ಅತ್ಯಂತ ತ್ರಾಸದಾಯಕ ಎಂದು ಈ ಸಮಯದಲ್ಲಿ ಹೇಳಿದ್ದಾರೆ ಸತೀಶ್. ಈ ಚಿತ್ರದ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದ್ದು. ಆಗಿನ ಕಾಲದ ಕಲಾವಿದರು ಯಾವ ರೀತಿ ಕಠಿಣ ಶ್ರಮ ವಹಿಸುತ್ತಿದ್ದರು ಎನ್ನುವುದು ಸ್ಪಷ್ಟ ಪಡಿಸುತ್ತದೆ ಎನ್ನುವ ಮಾತು ನೀನಾಸಂ ಸತೀಶ್ ಅವರಿಂದ ಹೊರ ಬಂದಿದೆ. ಆದ್ದರಿಂದ ತಾನೆ ಹಳೆಯ ಚಿತ್ರಗಳು ಜನರ ಮನದಲ್ಲಿ ಸ್ಥಿರವಾಗಿರುವುದು!
 

Share this Story:

Follow Webdunia kannada