Webdunia - Bharat's app for daily news and videos

Install App

ಕನ್ನಡ ಚಲನ ಚಿತ್ರ ಲೋಕಕ್ಕೆ ಈಗ ಮತ್ತೆ ಚೈತ್ರಕಾಲ

Webdunia
ಮಂಗಳವಾರ, 27 ಡಿಸೆಂಬರ್ 2016 (10:38 IST)
ಎನ್ . ಆರ್. ವಿಶುಕುಮಾರ್
 
ಕನ್ನಡ  ಬೆಳ್ಳಿ ತೆರೆಗೆ ಈಗ ಒಳ್ಳೆಯ ಕಾಲ. ಅದು ಎಂಬತ್ತರ ದಶಕ . ಕನ್ನಡ ಚಲನ ಚಿತ್ರ ಲೋಕಕ್ಕೆ ಚೈತ್ರಕಾಲ . ಸಂಸ್ಕಾರ, ಕಾಡು, ನಾಂದಿ, ಘಟಶ್ರಾದ್ಧ , ಪಲ್ಲವಿ, ವಂಶವೃಕ್ಷ. ಹೀಗೆ ಸಾಲು ಸಾಲು ಕನ್ನಡ ಚಿತ್ರಗಳು ರಾಷ್ಟ್ರ ಮಟ್ಟದಲ್ಲಿ ಕನ್ನಡದ ಕಹಳೆಯನ್ನು ಮೊಳಗಿಸಿದವು.
 
ಕನ್ನಡ ಚಲನಚಿತ್ರ ರಂಗದ  ಈ ಸಾಧನೆಯ ಹಿಂದೆ ಸರ್ಕಾರದ ಬೆಂಬಲವಿತ್ತು, ಒತ್ತಾಸೆಯಿತ್ತು. ಪ್ರತಿಭಾನ್ವಿತ ನಿರ್ದೇಶಕರಿಗೆ, ಸಾಹಸಿ ನಿರ್ಮಾಪಕರಿಗೆ ಕರ್ನಾಟಕ ಸರ್ಕಾರ ಸಹಾಯ ಧನದ ನೆರವು ನೀಡಿ ಪ್ರೋತ್ಸಾಹ ಒದಗಿಸಿದೆ. ಇಡೀ ಭಾರತ ದೇಶದಲ್ಲಿ ಚಲನಚಿತ್ರಗಳಿಗೆ ಸಹಾಯ ಧನದ ನೆರವು ಒದಗಿಸಿದ ಮೊದಲ ರಾಜ್ಯ ಕರ್ನಾಟಕ ಎನ್ನುವ ಹೆಮ್ಮೆ ನಮ್ಮ ರಾಜ್ಯಕ್ಕಿದೆ. ಈ ಪರಂಪರೆಯನ್ನು ನಮ್ಮ ಎಲ್ಲ ಸರ್ಕಾರಗಳು ಹಾಗೆಯೇ ಮುಂದುವರಿಸಿಕೊಂಡು ಬರುತ್ತಿವೆ.
 
ಈ ನಿಟ್ಟಿನಲ್ಲಿ ಪ್ರಸ್ತುತ ಸಿದ್ದರಾಮಯ್ಯನವರ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡ ಚಿತ್ರ ರಂಗಕ್ಕೆ ಪ್ರೋತ್ಸಾಹ , ಬೆಂಬಲ , ಸಹಾಯ ಧನ ಹೀಗೆ ಸಾಲು ಸಾಲು ಸಹಾಯಗಳ ಸುರಿಮಳೆಯನ್ನೇ ಸುರಿಸಿದೆ. ಕಳೆದ ಮೂರು ವರ್ಷಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಸರ್ಕಾರ ನೀಡಿರುವ ನೆರವನ್ನು ನೋಡಿ ಚಿತ್ರ ರಂಗವೇ ಅಚ್ಚರಿಯ ಬೆರುಗು ನೋಟ ಬೀರುತ್ತಿದೆ.
 
ಈ ಸರ್ಕಾರ 2013 ರಲ್ಲಿ ಬರುವ ತನಕ   ಕೇವಲ 75 ಗುಣಾತ್ಮಕ ಕನ್ನಡ ಚಲನ ಚಿತ್ರಗಳಿಗೆ ಮಾತ್ರ ತಲಾ ಹತ್ತು ಲಕ್ಷ ರೂಗಳ. ಸಹಾಯ ಧನವನ್ನು ನೀಡಲಾಗುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಮೊದಲ ವರ್ಷವೇ ನೂರು ಚಲನಚಿತ್ರಗಳಿಗೆ ಸಹಾಯ ಧನ ನೀಡುವುದಾಗಿ ಘೋಷಿಸಿದರು. ಮರುವರ್ಷ ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ನೆರವಾಗುವಂತೆ ಬೆಂಗಳೂರಿನ ಹೆಸರಘಟ್ಟದಲ್ಲಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಚಿತ್ರನಗರಿ ನಿರ್ಮಿಸುವುದಾಗಿ ಭರವಸೆ ನೀಡಿದರು. 
 
ಆದರೆ ನ್ಯಾಯಾಲಯ ಈ ಸ್ಥಳದಲ್ಲಿ ಚಿತ್ರನಗರಿ  ನಿರ್ಮಾಣಕ್ಕೆ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಅನುಮತಿ ನೀಡಲು ನಿರಾಕರಿಸಿದಾಗ ಅದರಿಂದ  ಎದೆಗುಂದದೆ ಮೈಸೂರು ಬಳಿ ನೂರು ಎಕರೆ ಪ್ರದೇಶದಲ್ಲಿ ಚಿತ್ರನಗರಿ ನಿರ್ಮಿಸುವುದಾಗಿ ಘೋಷಿಸಿದರು. ನುಡಿದಂತೆ ನಡೆದು ಈಗ ಚಿತ್ರನಗರಿ  ನಿರ್ಮಾಣಕ್ಕೆ ಜಮೀನು  ಮಂಜೂರು  ಮಾಡಿದ್ದಾರೆ. ನಿರ್ಮಾಣ ಕಾರ್ಯ ಇಷ್ಟರಲ್ಲೇಶುರುವಾಗಲಿದೆ.
 
ಈಗ ಕನ್ನಡ ಚಲನ ಚಿತ್ರಗಳಿಗೆ ನೀಡುವ ಸಹಾಯಧನದ ಚಿತ್ರಗಳ ಸಂಖ್ಯೆ 100 ಕ್ಕೆ ಏರಿದೆ . ಕನ್ನಡ ಚಿತ್ರಗಳು ಬಿಡುಗಡೆಯ ಸಮಯದಲ್ಲಿ ಎದಿರುಸುತ್ತಿದ್ದ ಚಿತ್ರ ಮಂದಿರಗಳ ಕೊರತೆಯನ್ನು ನಿವಾರಿಸಲು ಜನತಾ ಚಿತ್ರಮಂದಿರಗಳ ನಿರ್ಮಾಣಕ್ಕೆ  ಐವತ್ತು  ಲಕ್ಷ ರೂಗಳ ಪ್ರೋತ್ಸಾಹ ಧನ ನೀಡುವ ನೀತಿಯನ್ನು ಜಾರಿಗೆ ತಂದಿದ್ದಾರೆ. ಇಲ್ಲಿ ಕೇವಲ ಕನ್ನಡ ಚಿತ್ರಗಳನ್ನು ಮಾತ್ರ  ಪ್ರದರ್ಶಿಸಬೇಕು ಎನ್ನುವುದು ಕಡ್ಡಾಯ .
 
ಪ್ರತಿ ವರ್ಷ ಚಲನ ಚಿತ್ರ ವಾರ್ಷಿಕ ಪ್ರಶಸ್ತಿಗಳನ್ನು ಕನ್ನಡ ಚಿತ್ರ ರಂಗದ ದೃವತಾರೆ ಡಾ. ರಾಜ್ ಕುಮಾರ್ ಅವರ ಜನ್ಮ ದಿನಾಚರಣೆಯಾದ ಏಪ್ರಿಲ್ 24 ರಂದು ಪ್ರದಾನ ಮಾಡುವ ಸರ್ಕಾರಿ  ಆದೇಶವನ್ನು ಹೊರಡಿಸಿ ರಾಜ್ ಕುಮಾರ್ ಅವರಿಗೆ ಗೌರವ ಸಮರ್ಪಿಸಲಾಗಿದೆ.
 
ಕನ್ನಡ ಚಿತ್ರ ರಂಗದ ಮೇರು ಪ್ರತಿಭೆ ನಟಸಾರ್ವಬೌಮ  ಡಾ. ರಾಜ್ ಕುಮಾರ್ ಅವರ ಸ್ಮಾರಕವನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗಿದೆ. ಮತ್ತೊಬ್ಬ ಮೇರು ನಟ  ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಮೈಸೂರಿನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದೆ .
 
ಇನ್ನು ಖುದ್ದು ಸಿದ್ದರಾಮಯ್ಯನವರೇ ಆಸಕ್ತಿ ವಹಿಸಿ ಬೆಂಗಳೂರು ಅಂತರಾಷ್ಟ್ರ್ರೀಯ ಚಲನ ಚಿತ್ರೋತ್ಸವಕ್ಕೆ ನಾಲ್ಕು ಕೋಟಿ ರೂಗಳ ಅನುದಾನ ನೀಡಿ ಏಕಕಾಲಕ್ಕೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಚಿತ್ರೋತ್ಸವ ಏರ್ಪಡಿಸಲು ಒತ್ತಾಸೆ ನೀಡಿದ್ದಾರೆ. ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ  ಒಂದು ಸರ್ಕಾರದಿಂದ ಇದಕ್ಕಿಂತ ಹೆಚ್ಚಿನ ನೆರವು , ಪ್ರೋತ್ಸಾಹ , ಒತ್ತಾಸೆ ನಿರೀಕ್ಷಿಸುವುದು ಅತಿ ಆಸೆಯಾಗುತ್ತದೆ. (ಲೇಖಕರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಿರ್ದೇಶಕರು)

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments