Select Your Language

Notifications

webdunia
webdunia
webdunia
webdunia

ಬಿಪಾಶಾ ಬಸು ಈಗ ಅಲೋನ್ ಅಲ್ಲವೇ ಅಲ್ಲ

ಬಿಪಾಶಾ ಬಸು ಈಗ ಅಲೋನ್ ಅಲ್ಲವೇ ಅಲ್ಲ
, ಗುರುವಾರ, 26 ಫೆಬ್ರವರಿ 2015 (11:55 IST)
ಬಿಪಾಸ ಬಸು ಬಗ್ಗೆ ದಿನಕ್ಕೊಂದು ಹೊಸ ಬಗೆಯ ಸುದ್ದಿಗಳು ಇದ್ದೆ ಇರುತ್ತವೆ. ಆಕೆ ಇರುವ ಕಡೆ ಸುದ್ದಿಗಳ ಬಿರುಗಾಳಿ ಅಂತಾನೆ ಹೇಳ ಬಹುದು. ಆರಂಭದಲ್ಲಿ ಜಾನ್ ಅಬ್ರಹಾಂ ಜೊತೆ ಪ್ರೀತಿಸಿ ವರ್ಷಾನುಗಟ್ಟಲೆ ಒಟ್ಟಿಗೆ ವಾಸ ಮಾಡಿದ್ದವಳು, ಇದ್ದಕ್ಕಿದ್ದ ಹಾಗೆ ಆತನ ಸಾಮೀಪ್ಯ ಬಿಟ್ಟು ಆಯ್ಕೆ ಮಾಡಿಕೊಂಡಿದ್ದು ಹರ್ಮನ್ ಬವೇಜಾರನ್ನು ಆತನ ಸ್ನೇಹಕೂ ಸೋಡಾಚೀಟಿ ನೀಡಿದ ಬಳಿಕ ಅಲೋನ್ ಚಿತ್ರದಲ್ಲಿ ಸಹನಟರಾಗಿದ್ದ ಕರಣ್ ಸಿಂಗ್ ಅವರ ಜೊತೆ ಸ್ನೇಹ ಬೆಳೆಸಿಕೊಂಡಿದ್ದಾಳೆ ಬಿಪ್. ಇತ್ತೀಚೆಗೆ ಕರಣ್ ಅವರ ಜೊತೆಗೆ ಆತನ 33ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಜೋಡಿ ಆತನ ಹುಟ್ಟು ಹಬ್ಬವನ್ನು ಸಮುದ್ರ ತೀರದಲ್ಲಿ ಆಚರಿಸಿದರಂತೆ.. 
ಆಕೆ ತನ್ನ ಪ್ರಿಯಕರನ ಹುಟ್ಟು ಹಬ್ಬಕ್ಕೆಂದು ಮುಂಬೈ ನಲ್ಲಿ ಇರುವ ತನ್ನ ಸ್ನೇಹಿತರ ಫ್ಲೈಟ್‌ನಲ್ಲಿ ನೇರವಾಗಿ ಗೋವಾದಲ್ಲಿ ಇಳಿದು  ಮಿಡ್ ನೈಟ್ ಆತನಿಗೆ ಸರ್ಪ್ರೈಸ್ ನೀಡ ಬೇಕು ಎನ್ನುವ ನಿರ್ಧಾರ ಮಾಡಿದ್ದಳು. ಆದರೆ ಆಕೆಗೆ ನಿದ್ರೆಪ್ರಿಯೆಯಾದ್ದರಿಂದ ಕಾರ್ಯಕ್ರಮ ಅತ್ತಿತ್ತ ಹೋಗಿ ರಾತ್ರಿ ಒಟ್ಟಾರೆ ಅರ್ಧ ರಾತ್ರಿಯಷ್ಟರಲ್ಲಿ ಆಕೆ ತನ್ನ ಪ್ರಿಯತಮನಿಗೆ ಹುಟ್ಟುಹಬ್ಬದ ವಿಶ್ ಮಾಡಿದ್ದುದರ ಬಗ್ಗೆಮಾಹಿತಿ ಬಂದಿದೆ. ಬಾಯ್ ಫ್ರೆಂಡ್ ಜೊತೆ ಬಿಪ್ ತನ್ನ ಕ್ಲೋಸ್ ಫ್ರೆಂಡ್ಸ್ ಗಳಾದ ಡಿಸೈನರ್ ರಾಕಿ, ಫಿಟ್ನೆಸ್ ಎಕ್ಸ್ಪರ್ಟ್ ಡೇನ್ ಪಾಂಡೆ,ಮಾಡೆಲ್ ಕ್ಯಾನ್ಡೀಸ್ ಪಿಂಟೋ ಜೊತೆ ಲಾಂಗ್ ಡ್ರೈವ್ ಮಾಡಿದ ಬಗ್ಗೆ ಆಂಗ್ಲ ಪತ್ರಿಕೆ ವರದಿ ಮಾಡಿದೆ.  
 

Share this Story:

Follow Webdunia kannada