Webdunia - Bharat's app for daily news and videos

Install App

ನನ್ನ ತಪ್ಪೇನಿಲ್ಲ, ಯಾವ ಬೆದರಿಕೆಗೂ ಬಗ್ಗುವುದಿಲ್ಲ: ಗಂಭೀರ ಆರೋಪಕ್ಕೆ ಗೋಲ್ಡ್ ಸುರೇಶ್ ಪ್ರತಿಕ್ರಿಯೆ

Sampriya
ಗುರುವಾರ, 19 ಜೂನ್ 2025 (15:50 IST)
ಬೆಂಗಳೂರು:  ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿ ಗೋಲ್ಡ್‌ ಸುರೇಶ್ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿತ್ತು. ಇದೀಗ ಈ ಸಂಬಂಧ ಅವರು ಪ್ರತಿಕ್ರಿಯಿಸಿದ್ದಾರೆ. 

ಕೇಬಲ್‌ ಚಾನೆಲ್‌ ಸೆಟ್‌ಅಪ್‌ ಮಾಡಿಕೊಡುವುದಾಗಿ ಹೇಳಿ ವಂಚನೆ ಮಾಡಿದ್ದಾರೆಂದು ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಮೈನುದ್ದಿನ್ ಎಂಬುವವರು ಸುರೇಶ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದರು. 

ಈ ಸಂಬಂಧ ಪ್ರತಿಕ್ರಿಯಿಸಿದ ಅವರು, ನನ್ನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. 2018ರಲ್ಲಿ ಸ್ನೇಹಿತನ ಮೂಲಕ ಪರಿಚಯವಾದ ವ್ಯಕ್ತಿಗೆ ನಾನು ಕೆಲಸ ಮಾಡಿಕೊಟ್ಟಿದ್ದೇನೆ.  ನಾನು ಯಾರಿಗೂ ಯಾವುದೇ ಹಣ ಕೊಡಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

ಇದು ನಡೆದಿರುವುದು 2018ರಲ್ಲಿ. ಈಗ್ಯಾಕೆ ನನ್ನ ವಿರುದ್ಧ ಬಂದ್ರು ಗೊತ್ತಿಲ್ಲ. ಈ ಸಂಬಂಧ ಅವರ ಬಳಿ ಸೂಕ್ತ ದಾಖಲೆಗಳು ಇದ್ರೆ ದೂರು ನೀಡಲಿ. ಇದನ್ನು ನೋಡಿದಾಗ ಹಣಕ್ಕಾಗಿ ಈ ಕೆಲಸ ಮಾಡಿದ್ದಾರೆ ಎಂದು ಗೊತ್ತಾಗುತ್ತದೆ. 

ಹಣ ನೀಡದಿದ್ದರೆ ಮಾಧ್ಯಮದ ಮುಂದೆ ಹೋಗುವುದಾಗಿ ಬೆದರಿಕೆ ಹಾಕುತ್ತಾರೆ. ನಾನು ಇದಕ್ಕೆಲ್ಲ ತಲೆಬಾಗುವದೇ ಇಲ್ಲ. ನನ್ನ ಹೆಸರನ್ನು ಹಾಳು ಮಾಡುವ ಉದ್ದೇಶ ಬಿಟ್ರೆ, ಬೇರೆನಿಲ್ಲ ಎಂದರು.  <>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಡೆನೂರು ಮನು ವಿರುದ್ಧದ ರೇಪ್‌ ಕೇಸ್‌ನಲ್ಲಿ ನಡೆ ಬದಲಾಯಿಸಿದ ಸಂತ್ರಸ್ತ ನಟಿ

ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಮೇಲಿನ ದಾಳಿಗೆ ನಟ ಪ್ರಕಾಶ್ ರಾಜ್‌ ಖಂಡನೆ, ವಿಡಿಯೋ

ಸು ಫ್ರಮ್ ಸೋ ಸಿನಿಮಾ ಕೊನೆಗೂ ಮಾಡಿತು ಆ ದಾಖಲೆ

ಸುಪ್ರೀಂ ಆದೇಶದ ಆತಂಕದ ಬೆನ್ನಲ್ಲೇ ನಾಡದೇವಿಯ ಮೊರೆ ಹೋದ ದರ್ಶನ್‌ ತೂಗುದೀಪ್‌

ನಾನು ಒಬ್ಬಂಟಿ ಪೋಷಕಿ, ನನಗೆ ಮಗಳಿದ್ದಾಳೆ: ಜಾಮೀನು ರದ್ದು ಮಾಡಬೇಡಿ ಎಂದ ಪವಿತ್ರಾ

ಮುಂದಿನ ಸುದ್ದಿ
Show comments