Select Your Language

Notifications

webdunia
webdunia
webdunia
webdunia

ತಮಿಳು ಅಡಲ್ಟ್ ಚಿತ್ರದಲ್ಲಿ ಐಟಂ ಗರ್ಲ್ ನೋರಾ ಫತೇಹಿ

ತಮಿಳು ಅಡಲ್ಟ್ ಚಿತ್ರದಲ್ಲಿ ಐಟಂ ಗರ್ಲ್ ನೋರಾ ಫತೇಹಿ
, ಮಂಗಳವಾರ, 30 ಜೂನ್ 2015 (10:13 IST)
ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಒಂದೆರಡು ಬಾರಿ ಸ್ಯಾಂಡಲ್ ವುಡ್ ನಲ್ಲಿ ತನ್ನ ಮಾದಕ ರೂಪದ ಮೂಲಕ ಜನರ ಗಮನ ಸೆಳೆದ ಐಟಂ ಗರ್ಲ್ ಮುಮೈತ್ ಖಾನ್. ಆಕೆಯು ಹೀರೋಯಿನ್ ಆಗಿ ಸಹಿತ ನಟಿಸಿದ್ದರು. ಅದಾದ ಬಳಿಕ ಆಗಾಗ ಸನ್ನಿ ಲಿಯೋನ್, ಪೂನಂ ಪಾಂಡೆ ಬಂದು ಹೋದರು ಸಹ ಹೆಚ್ಚು ಸಮಯ ಇಲ್ಲಿ ಉಳಿಯುವುದಕ್ಕೆ ಆಗದಂತಹ ಪರಿಸ್ಥಿತಿ ಅವರಿಗೆ. ಆದರೆ ಈಗ ಮತ್ತೊಬ್ಬ ಮಾದಕ ಚೆಲುವೆ ತಮ್ಮ ಛಾಪು ಮೂಡಿಸಲು ಸಿದ್ಧರಾಗಿದ್ದಾರೆ. ಪ್ರಸ್ತುತ ಪೂರಿ ಜಗನ್ನಾಥ್  ಅವರ ಸಿನಿಮಾ ಟೆಂಪರ್ ನಲ್ಲಿ ಜೂನಿಯರ್ ಎಂಟಿಆರ್ ಜೊತೆ ನರ್ತಿಸಿ ಪಡ್ಡೆ ಹೃದಯಗಳ ಬಡಿತ ಹೆಚ್ಚಿಸಿದ್ದರು.ಆ ಐಟಂ ಗರ್ಲ್  ಹೆಸರು ನೋರಾ ಫತೇಹಿ. ಈಕೆ ಈಗ ದಕ್ಷಿಣ ಭಾರತದಲ್ಲಿ ಒಂದು ಹಾಟ್ ಕಂಟೆಂಟ್ ಚಿತ್ರದಲ್ಲಿ ನಟಿಸಲು ಸಿದ್ಧರಾಗಿದ್ದಾರೆ. 
ನೋರಾ ಫತೇಹಿ  ಈಗಾಗಲೇ ಹಿಂದಿ ಚಿತ್ರಗಳಾದ ರೋರ , ಕ್ರೇಜಿ ಕುಕ್ಕಾದ್ ಫ್ಯಾಮಿಲಿ ಮಿಸ್ಟರ್ ಎಕ್ಸ್ ಚಿತ್ರಗಳಲ್ಲಿ ತಮ್ಮ ಅಭಿನಯ ಚಾತುರ್ಯ ತೋರಿಸಿದ್ದಾರೆ. ಈಗ ಟೆಂಪರ್ ಮೂಲಕ ದಕ್ಷಿಣ ಭಾರತಕ್ಕೆ ಅದರಲ್ಲೂ ಟಾಲಿವುಡ್ ಗೆ ಎಂಟ್ರಿ ಆಗಿರುವ ಈಕೆಗೆ ಈಗ ತೆಲುಗು ಮಂದಿ ಹೇರಳ ಅವಕಾಶಗಳನ್ನು  ನೀಡುತ್ತಿದ್ದಾರೆ. 
 
ಒಂದು ಅಡಲ್ಟ್ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ನಟಿಸಲು ಆಕೆ ಕಡೆಯಿಂದ ಹಸಿರುನಿಶಾನೆ ಸಿಕ್ಕಿದೆಯಂತೆ. ಅದರಲ್ಲಿ ನೋರ ಸಿಕ್ಕಾಪಟ್ಟೆ ಹಾಟ್ ಎಕ್ಸ್ ಪೋಜಿಂಗ್ ಮಾಡುತ್ತಾರಂತೆ. ಅದರಲ್ಲೂ ಹದಿನೈದು ನಿಮಿಷಗಳು ಆಕೆ ಸೆಮಿ ನ್ಯೂಡ್ ಆಗಿ ಕಾಣುತ್ತಾರಂತೆ. ಇದು ತಮಿಳಿನಲ್ಲಿ ಸಿದ್ಧವಾಗುತ್ತಿರುವ ಚಿತ್ರವಾಗಿದೆ. 
 

Share this Story:

Follow Webdunia kannada