Select Your Language

Notifications

webdunia
webdunia
webdunia
webdunia

ಮಾನಸಿಕ ಖಿನ್ನತೆಗೆ ಮಿತಿಯಿಲ್ಲ: ದೀಪಿಕಾ ಪಡುಕೋಣೆ

ಮಾನಸಿಕ ಖಿನ್ನತೆಗೆ ಮಿತಿಯಿಲ್ಲ: ದೀಪಿಕಾ ಪಡುಕೋಣೆ
, ಸೋಮವಾರ, 12 ಅಕ್ಟೋಬರ್ 2015 (11:38 IST)
ನಟಿ ದೀಪಿಕಾ ಪಡುಕೋಣೆ ಅವರ ಬಹು ದಿನದ ಆಸೆ ಕೊನೆಗೂ ಈಡೇರಿದೆ. ಮಾನಸಿಕ ಖಿನ್ನತೆಗೊಳಗಾದವರನ್ನು ಅದರಿಂದ ಹೊರತರವುದಕ್ಕಾಗಿ ದೀಪಿಕಾ ಆರಂಭಿಸಿದ ಲೀವ್ ಲವ್ ಲಾಫ್ ಆರ್ಗನೈಸೇಷನ್ ನಿನ್ನೆ ಉದ್ಘಾಟನೆಗೊಂಡಿದೆ.    
ಕೆಲ ದಿನಗಳ ಕಾಲ ಸ್ವತಃ ದೀಪಿಕಾ ಪಡುಕೋಣೆ ಮಾನಸಿಕ ಖಿನ್ನತೆಗೆ ಒಳಗಾಗಿ ಪರದಾಡಿದ್ರು. ಅದರಿಂದ ಹೊರ ಬರಲು ಒದ್ದಾಡಿದ್ರು. ಹಾಗಾಗಿ ಈ ಬಗ್ಗೆ ಸ್ವತಃ ಅರಿವಿದ್ದರಿಂದ ದೀಪಿಕಾ ಈ ಸಂಸ್ಥೆಯನ್ನು ಆರಂಭಿಸಿದ್ದಾರೆ. ಇನ್ನು ನಿನ್ನೆ ವಿಶ್ವ ಮಾನಸಿಕ ಆರೋಗ್ಯ ದಿನವಾದ್ದರಿಂದ ದಿಪ್ಪಿ ನಿನ್ನೆಯೇ ತಮ್ಮ ಕನಸಿನ ಸಂಸ್ಥೆಯನ್ನು ಆರಂಭಿಸಿದ್ದಾರೆ.
 
ಇನ್ನು ಈ ಬಗ್ಗೆ ಮಾತನಾಡಿದ ದೀಪಿಕಾ ಮಾನಸಿಕ ಖಿನ್ನತೆ ಅನ್ನೋದು ಯಾರಿಗೆ ಬೇಕಾದ್ರೂ ಬರಬಹುದು. ಅದಕ್ಕೆ ನಿರ್ದಿಷ್ಟ ವ್ಯಕ್ತಿಯೇ ಆಗಬೇಕಿಂದಿಲ್ಲ. ನಾನು ಅದನ್ನೂ ಅನುಭವಿಸಿದ್ದೇನೆ. ಹಾಗಾಗಿ ನನಗೆ ಆ ನೋವು ಗೊತ್ತು ಎಂದ್ರು. ಆದ್ರೆ ತಾವ್ಯಾಕೆ ಖಿನ್ನತೆಗೆ ಒಳಗಾಗಿದ್ರು ಅನ್ನೋದನ್ನು ದೀಪಿಕಾ ಬಾಯ್ಬಿಟ್ಟಿಲ್ಲ. ಇನ್ನು ಕಾರ್ಯಕ್ರಮದಲ್ಲಿ ಶಾರುಖ್ ಪತ್ನಿ ಗೌರಿ ಖಾನ್ ಉಪಸ್ಥಿರಿದ್ದರು. ಅಲ್ಲದೇ ಮುಂದಿನ ದಿನಗಳಲ್ಲಿ ಖಿನ್ನತೆ ವಿರುದ್ಧ ನಾವು ನಡೆಸುತ್ತಿರುವ ಪ್ರಯತ್ನಕ್ಕೆ ಸರ್ಕಾರ ಕೂಡ ಬೆಂಬಲ ನೀಡಿದ್ರೆ ಚೆನ್ನಾಗಿರುತ್ತೆ ಅಂತಾ ದೀಪಿಕಾ ಹೇಳಿದ್ದಾರೆ.

Share this Story:

Follow Webdunia kannada