Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಜೊತೆ ನಿತ್ಯಮೆನನ್ ಗೆ ನಟಿಸುವ ಚಾನ್ಸ್

ಕಿಚ್ಚ ಸುದೀಪ್ ಜೊತೆ ನಿತ್ಯಮೆನನ್ ಗೆ ನಟಿಸುವ ಚಾನ್ಸ್
, ಶುಕ್ರವಾರ, 31 ಜುಲೈ 2015 (10:30 IST)
ಅನೇಕ ದಿನಗಳಿಂದ  ಆಸಕ್ತಿಯನ್ನು ಹುಟ್ಟಿಸಿದ್ದ ಚಿತ್ರಕ್ಕೆ ಈಗ ಜೀವ ಬಂದಿದೆ. ಕಿಚ್ಚ ಸುದೀಪ್ ಅಭಿನಯದ ಕೆ ಎಸ್ ರವಿಕುಮಾರ್ ನಿರ್ದೇಶನದ ಹಾಗೂ ಸೂರಪ್ಪ ಬಾಬು ಅವರ ನಿರ್ಮಾಣದ  ಚಿತ್ರ ಈಗ ಒಂದು ಹಂತಕ್ಕೆ ತಲುಪಿದೆ.  
ಈ ಚಿತ್ರದಲ್ಲಿ ಸುಪರ್ ಸ್ಟಾರ್ ಕಿಚ್ಚ ಸುದೀಪ್ ಅವರ ಜೊತೆ ಯಾರು ಡ್ಯುಯೆಟ್ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ನಿತ್ಯ ಮೆನನ್ ಅವರು ಈಗ ಈ ಚಿತ್ರದ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ. ನಿತ್ಯ ಈ ಚಿತ್ರಕ್ಕೆ ಸಹಿ ಹಾಕಿದ್ದಾರೆ. ದಕ್ಷಿಣ ಭಾರತದ ಈ ಮುದ್ದಾದ ನಟಿ ಈಗ ಸುದೀಪ್ ಅವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 
 
ನಿತ್ಯ ಮೆನನ್ ಅವರು ಕನ್ನಡ ಸಿನಿಮಾಗಳಲ್ಲಿ ಈಗಾಗಲೇ ತಮ್ಮ ಪ್ರತಿಭೆ ತೋರಿದ್ದಾರೆ. ಜೊತೆಗೆ ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿ ಸಹಿತ ತನ್ನ ಅಭಿನಯ ಚಾತುರ್ಯ ತೋರಿಸಿರುವ ಈ ತಾರೆ  ಮೈನಾ ಚಿತ್ರದಲ್ಲಿ ಅಪರೂಪದ ನಟನೆ ಮೂಲಕ ಎಲ್ಲರ ಮನ ಗೆದ್ದಿದ್ದರು. ಈಗ ಮತ್ತೆ ಕನ್ನಡದಲ್ಲಿ ಕಿಚ್ಚ ಸುದೀಪ್ ಅವರ ಜೊತೆ ನಟಿಸುತ್ತಿದ್ದಾರೆ. 
 

Share this Story:

Follow Webdunia kannada