Webdunia - Bharat's app for daily news and videos

Install App

ನಿರೂಪ್ ಭಂಡಾರಿ ‘ವಿಂಡೋಸೀಟ್’ ಫಸ್ಟ್ ಲುಕ್ ಇದೇ 24ಕ್ಕೆ ರಿಲೀಸ್..!!

Webdunia
ಬುಧವಾರ, 23 ಸೆಪ್ಟಂಬರ್ 2020 (14:30 IST)
ಶೀತಲ್ ಶೆಟ್ಟಿ ನಿರ್ದೇಶನದ, ನಿರೂಪ್ ಭಂಡಾರಿ ನಾಯಕ ನಟನಾಗಿ ಅಭಿನಯಿಸಿರುವ ‘ವಿಂಡೋ ಸೀಟ್’ ಚಿತ್ರ ಸ್ಯಾಂಡಲ್ವುಡ್ನಲ್ಲಿ ಸಖತ್ ನಿರೀಕ್ಷೆ ಹುಟ್ಟುಹಾಕಿದೆ. ಇಲ್ಲಿವರೆಗೂ ಚಿತ್ರದ ಬಗ್ಗೆ ಗುಟ್ಟು ಬಿಟ್ಟುಕೊಡದ ಟೀಂ ವಿಂಡೋಸೀಟ್ ಇದೀಗ ಫಸ್ಟ್ ಲುಕ್ ರಿಲೀಸ್ ಮಾಡಲು ಫ್ಯಾನ್ ಮಾಡಿಕೊಂಡಿದೆ. 24ರಂದು ವಿಂಡೋ ಸೀಟ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ. 
=
‘ವಿಂಡೋಸೀಟ್’ ಎಂಬ ಟೈಟಲ್ಲೇ ಶೀತಲ್ ಹಾಗೂ ನಿರೂಪ್ ಭಂಡಾರಿ ಅಭಿಮಾನಿಗಳಲ್ಲಿ ಸಖತ್ ಕ್ಯೂರಿಯಾಸಿಟಿ ಬಿಲ್ಡ್ ಮಾಡಿತ್ತು. ಅಲ್ದೆ, ರೋಮ್ಯಾಂಟಿಕ್ ಥ್ರಿಲ್ಲರ್  ಸಬ್ಜೆಕ್ಟ್ ಅಂದಾಗಲೇ ಸಹಜವಾಗೇ ಅಭಿಮಾನಿಗಳಲ್ಲಿ  ನಿರೀಕ್ಷೆ, ಕುತೂಹಲ ದುಪ್ಪಟ್ಟಾಗಿತ್ತು. ಇದೀಗ ಅಭಿಮಾನಿಗಳ ಕುತೂಹಲ ತಣಿಸಲು ಸಜ್ಜಾಗಿರೋ ಟೀಂ ವಿಂಡೋ ಸೀಟ್ ಫಸ್ಟ್ಲುಕ್ ರಿವೀಲ್ ಮಾಡುವ ಮೂಲಕ  ಮತ್ತಷ್ಟು ಬಝ್ ಕ್ರಿಯೇಟ್ ಮಾಡಲು ಹೊರಟಿದೆ.
 
ನಾಯಕ ನಟನಾಗಿ ‘ವಿಂಡೋ ಸೀಟ್’ ಏರಿರುವ ನಿರೂಪ್ ಭಂಡಾರಿ ಚಿತ್ರಕ್ಕಾಗಿ ಸಖತ್ ಎಫರ್ಟ್ ಹಾಕಿದ್ದಾರೆ. ಶೀತಲ್ ಶೆಟ್ಟಿ ಕೂಡ ತಮ್ಮ ಮೊದಲ ಚಿತ್ರ ತಾವಂದು ಕೊಂಡಂತೆ ತೆರೆ ಮೇಲೆ ತರಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಲಾಕ್ ಡೌನ್ಮುಗಿಯುತ್ತಿದ್ದಂತೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಲದಲ್ಲಿ ಬ್ಯುಸಿಯಾಗಿದ್ದ ನಿರ್ದೇಶಕಿ ಶೀತಲ್ ಶೆಟ್ಟಿ  ಫಸ್ಟ್ ಲುಕ್ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಲು ರೆಡಿಯಾಗಿದ್ದಾರೆ. 
ಜಾಕ್ ಮಂಜು ನಿರ್ಮಾಣದಲ್ಲಿ ಮೂಡಿ ಬರ್ತಿರೋ ರೋಮ್ಯಾಂಟಿಕ್ ಥ್ರಿಲ್ಲರ್ ಚಿತ್ರದಲ್ಲಿ ಅಮೃತ ಐಯ್ಯಂಗಾರ್, ಸಂಜನಾ ಆನಂದ್ ನಾಯಕಿಯರಾಗಿ  ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವಿಘ್ನೇಶ್ ರಾಜ್ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಟೈಟಲ್ ಮೂಲಕ ಸದ್ದು ಮಾಡಿದ್ದ ‘ವಿಂಡೋಸೀಟ್’ ಚಿತ್ರ ಫಸ್ಟ್ಲುಕ್ ಮೂಲಕ ಯಾವ ರೀತಿ ಗಮನ ಸೆಳೆಯಲಿದೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments