Select Your Language

Notifications

webdunia
webdunia
webdunia
webdunia

ಕನ್ನಡದಲ್ಲಿ ಸಲ್ಲದೆ ತಮಿಳು ಕಡೆಗೆ ಹೊರಟ ನಿಕಿತ ತುಕ್ರಾಲ್

ಕನ್ನಡದಲ್ಲಿ ಸಲ್ಲದೆ ತಮಿಳು ಕಡೆಗೆ ಹೊರಟ ನಿಕಿತ ತುಕ್ರಾಲ್
, ಮಂಗಳವಾರ, 21 ಏಪ್ರಿಲ್ 2015 (11:31 IST)
ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ದಕ್ಷಿಣ ಭಾರತ ಬಹುತೇಕ ಎಲ್ಲ ಚಿತ್ರರಂಗದಲ್ಲೂ ಸಹಿತ ತನ್ನ ಅಭಿನಯದ ಮೂಲಕ ಗಮನ ಸೆಳೆದ ನಟಿ ನಿಕಿತ ತುಕ್ರಾಲ್. ಆದರೆ ಆಕೆ ಕನ್ನಡ ಸಿನಿ ಪ್ರಿಯರಿಗೆ ಹೆಚ್ಚು ಗೊತ್ತಾದಳು. ಆ ಕಾರಣದಿಂದ ಆಕೆಗೆ ಬಿಗ್ ಬಾಸ್  ಮೊದಲ ಅವತರಣಿಕೆಯಲ್ಲಿ ಭಾಗವಹಿಸುವ ಅವಕಾಶ ಹುಡುಕಿಕೊಂಡು ಬಂದಿತ್ತು. 

ತಮಿಳಿನಲ್ಲಿ ನಿಕಿತ ನಟಿಸಿದ ಕೊನೆ ಚಿತ್ರ ಅಲೆಕ್ಸ್ ಪಾಂಡಿಯನ್. ಈ ಚಿತ್ರದಲ್ಲಿ ಸಂತಾನಂ ಸಹೋದರಿಯಾಗಿ ಪಾತ್ರ ಮಾಡಿ ಕಾರ್ತಿ ಜೊತೆ ನಟನೆ ಮಾಡಿದ್ದ ನಿಕಿತಾ ಈಗ ನಟ ವಿಶಾಲ್ ಜೊತೆ ಡ್ಯಾನ್ಸ್ ಮಾಡಿದ್ದಾಳೆ. ಸುಶೀಂದ್ರನ್ ಅವರ ನಿರ್ದೇಶನದಲ್ಲಿ ವಿಶಾಲ್ ಅವರ ನಟನೆಯ ಪಾಯುಂ ಪುಲಿ ಎನ್ನುವ ಚಿತ್ರದಲ್ಲಿ ಕಾಜಲ್ ಅಗರವಾಲ್ ವಿಶಾಲ್ ಜೋಡಿಯಾಗಿದ್ದಾಳೆ. 
 
ವಿಶಾಲ್ ಅಂಡರ್ ಕವರ್ ಪೊಲೀಸ್ ಆಗಿ ಅತ್ಯಂತ ಗಟ್ಟಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಒಂದು ಐಟಂ ಹಾಡಿಗೆ ನಿಕಿತ ಹೆಜ್ಜೆ ಹಾಕಿದ್ದಾಳೆ. ಈ ಹಾಡನ್ನು ಇಲ್ಲಿನ ಬಿನ್ನಿ ಮಿಲ್ ನಲ್ಲಿ ಅತಿ ದೊಡ್ಡ ಮಾರ್ಕೆಟ್ ಸೆಟ್ ಹಾಕಿ ಚಿತ್ರೀಕರಿಸಿದ್ದಾರೆ. 
 
ಸಂಗೀತ ನಿರ್ದೇಶಕ ಇಮಾನ್ ರಚನೆಯ ಈ ಹಾಡು ಈ ಚಿತ್ರದ  ಹೈಲೈಟ್ ಆಗುತ್ತದೆ ಎಂದಿದ್ದಾರೆ ಚಿತ್ರತಂಡ. ಇದನ್ನು ಐಟಂ ಸಾಂಗ್ ಎಂದು ಹೇಳಬಾರದು ಇದು ಪೆಪ್ಪಿ ಸಾಂಗ್ ಎಂದಿರುವ ನಿಕಿತ ಕನ್ನಡದಲ್ಲಿ ಅವಕಾಶ ಇಲ್ಲದೆ ಇದ್ದರೂ ಬೇರೆ ಭಾಷಿಗರು ಹೀಗಾದ್ರು ಚಾನ್ಸ್ ಕೊಟ್ಟು ಆಕೆಯನ್ನು ಕಾಪಾಡಲಿ ಎನ್ನುವ ಆಶಯ ಆಕೆಯ ಅಭಿಮಾನಿಗಳದ್ದು. ಹಾಗೇ ಆಗಲೆನ್ನುವ ಹಾರೈಕೆ ನಮ್ಮದು. 

Share this Story:

Follow Webdunia kannada