Select Your Language

Notifications

webdunia
webdunia
webdunia
webdunia

ನೆಸ್‌ ವಾಡಿಯಾ ವಿಷ್ಯ ನನಗೆ ಗೊತ್ತಿಲ್ಲ ಎಂದು ನುಲಿದ ಪ್ರೀತಿ ಜಿಂಟಾ

ನೆಸ್‌ ವಾಡಿಯಾ ವಿಷ್ಯ ನನಗೆ ಗೊತ್ತಿಲ್ಲ ಎಂದು ನುಲಿದ ಪ್ರೀತಿ ಜಿಂಟಾ
, ಬುಧವಾರ, 22 ಅಕ್ಟೋಬರ್ 2014 (12:19 IST)
ಮಾಜಿ ಬಾಯ್ ಫ್ರೆಂಡ್ ನೆಸ್ ವಾಡಿಯ ತನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿಕೇಸು ದಾಖಲು ಮಾಡಿರುವ ಪ್ರೀತಿಯ ಈ ನಡವಳಿಕೆ ಸಾಕಷ್ಟು ಸುದ್ದಿಯಾಗಿತ್ತು ಕೆಲವು ತಿಂಗಳುಗಳ ಹಿಂದೆ. ಆಕೆಯ ಮಾಜಿ ಪ್ರಿಯಕರ ನೆಸ್ ಮೇಲೆ ಹಾಕಿರುವ ಕೇಸ್ ಎಷ್ಟು ದೂರ ಬಂದಿದೆ ಎನ್ನುವ ಪ್ರಶ್ನೆ ಕೇಳಿದ ಮೀಡಿಯ ಮಂದಿಗೆ ಪ್ರೀತಿ ಸಿಟ್ಟಿನಿಂದ ಆ ವಿಷಯವನ್ನು ಪೊಲೀಸರ ಬಳಿ ಕೇಳಿ ಎಂದು ಹೇಳಿದ್ದಾಳೆ. 
 
ನೆಸ್ ವಾಡಿಯ ತನ್ನ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನ ಪಟ್ಟ ಎಂದು ಪ್ರೀತಿ ದೂರು  ನೀಡಿದ್ದಾಳೆ. ಗುಳಿ ಗಲ್ಲದ ಈ ಚೆಲುವೆ ಮುಂಬೈ ಸಿನಿ ನಗರದಲ್ಲಿ ಫಿಲಿಂ ಫೆಸ್ಟಿವಲ್ ನಲ್ಲಿ ಭಾಗವಹಿಸುವಾಗ ಆಕೆಯ ಬಳಿ ಬಂಡ ಕೆಲವು ಮಾಧ್ಯಮ ಪ್ರತಿನಿಧಿಗಳು ಆ ಕೇಸ್ ಬಗ್ಗೆ ಮಾಹಿತಿ ಕೇಳಿ ಆಕೆಯ ಸಹನೆಯನ್ನು ದೂರ ಮಾಡಿದರು. 
 
ಇದರಿಂದ ಸಿಟ್ಟಾದ ಈ ಚೆಲುವೆ ತನ್ನನ್ನು ಸಾಧಕಿ ಎಂದು ಕರೆದರೂ ಸಹ ನಾನು ಒಬ್ಬ ಸಾಮಾನ್ಯ ಹೆಣ್ಣುಮಗಳು. ಈಗ ವಿಚಾರಣೆಯಲ್ಲಿ ಇರುವ ಕೇಸ್ ಬಗ್ಗೆ ಏನು ಮಾತನಾಡಲಾರೆ ಎಂದು ನೇರವಾಗಿ ಹೇಳಿದ್ದಾಳೆ. 
 

Share this Story:

Follow Webdunia kannada