Webdunia - Bharat's app for daily news and videos

Install App

ಸ್ವಂತ ಪರಿಶ್ರಮದಿಂದ ಮನೆ ಕಟ್ಟಿದ ಅನುಪಮಾ ಗೌಡ: ಭಾವುಕರಾದ ಗೆಳತಿ ನೇಹಾ ಗೌಡ

Krishnaveni K
ಶುಕ್ರವಾರ, 11 ಅಕ್ಟೋಬರ್ 2024 (10:01 IST)
Photo Credit: Instagram
ಬೆಂಗಳೂರು: ಕಿರುತೆರೆ, ರಿಯಾಲಿಟಿ ಶೋಗಳ ಮೂಲಕ ಮಿಂಚುತ್ತಿರುವ ನಟಿ ಅನುಪಮಾ ಗೌಡ ಈಗ ತಮ್ಮ ಸ್ವಂತ ದುಡಿಮೆಯಿಂದ ಮನೆಯೊಂದು ಕಟ್ಟಿ ಗೃಹಪ್ರವೇಶ ಮಾಡಿಕೊಂಡಿದ್ದಾರೆ. ಈ ಸಂಭ್ರಮದ ಕ್ಷಣವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೆಣ್ಣು ಮಕ್ಕಳಿಗೆ ತಮ್ಮದೇ ದುಡಿಮೆಯಲ್ಲಿ ಮನೆ ಕಟ್ಟುವ ಸಂಭ್ರಮವೇ ಬೇರೆ. ಅನುಪಮಾ ಕೂಡಾ ಸ್ವಂತ ಪರಿಶ್ರಮದಿಂದ ಮೇಲೆ ಬಂದವರು. ಅವರ ಮನೆಗೆ ಅವರೇ ಆರ್ಥಿಕ ಶಕ್ತಿ. ಈಗ ತಮ್ಮದೇ ದುಡಿಮೆಯಿಂದ ಮನೆಯೊಂದನ್ನು ಕಟ್ಟಿಸಿಕೊಂಡಿದ್ದಾರೆ. ಈ ಮನೆಯ ಗೃಹಪ್ರವೇಶ ಸಮಾರಂಭ ನಡೆದಿದೆ.

ತಮ್ಮ ಕನಸಿನ ಮನೆಗೆ ಅನುಪಮಾ ‘ನಮ್ಮ ಮನೆ’ ಎಂದು ಹೆಸರಿಟ್ಟಿದ್ದಾರೆ. ಇದರ ಗೃಹಪ್ರವೇಶ ಸಮಾರಂಭಕ್ಕೆ ಹಿರಿಯ ನಟಿ ಶ್ರುತಿ ಸೇರಿದಂತೆ ಸ್ಯಾಂಡಲ್ ವುಡ್, ಕಿರುತೆರೆ ಕಲಾವಿದರು ಬಂದು ಶುಭ ಕೋರಿದ್ದಾರೆ. ಅನುಪಮಾ ನೆಚ್ಚಿನ ಸ್ನೇಹಿತ ನೇಹಾ ತುಂಬು ಗರ್ಭಿಣಿಯಾಗಿದ್ದರೂ ಗೃಹಪ್ರವೇಶಕ್ಕೆ ಬಂದು ಭಾವುಕರಾಗಿ ಸಂದೇಶ ಬರೆದುಕೊಂಡಿದ್ದಾರೆ.

ನಿನ್ನ ಜೀವನದ ವಿಶೇಷ ಸಾಧನೆಯಿದು, ನೀನು ನನಗೆ ಹಲವಾರು ವಿಚಾರದಲ್ಲಿ ಸ್ಪೂರ್ತಿ. ನಿನ್ನ ಈ ಕನಸಿನ ಮನೆಗೆ ನನ್ನ ಶುಭ ಹಾರೈಕೆಗಳು ಎಂದಿದ್ದಾರೆ. ಅನುಪ್ರಭಾಕರ್, ದಿವ್ಯ ಉರುಡುಗ, ಕಿಶನ್ ಸೇರಿದಂತೆ ಅನೇಕರು ಬಂದು ಅನುಪಮಾಗೆ ಶುಭ ಹಾರೈಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸುಮ್ಮನೇ ಬಿಡುವ ಮಾತೇ ಇಲ್ಲ: ದರ್ಶನ್ 43 ಅಭಿಮಾನಿಗಳಿಗಾಗಿ ಹುಡುಕಾಟ

ರಮ್ಯಾಗೆ ಫ್ಯಾನ್ಸ್ ಅಶ್ಲೀಲ ಮೆಸೇಜ್ ನಿಂದ ಸಂಕಷ್ಟಕ್ಕೆ ಸಿಲುಕುತ್ತಾರಾ ದರ್ಶನ್

ಡಿ ಫ್ಯಾನ್ಸ್, ರಮ್ಯಾ ಜಟಾಪಟಿಯಲ್ಲಿ ಹೊಸ ತಿರುವು, ದರ್ಶನ್ ಫ್ಯಾನ್ಸ್‌ಗೆ ನಡುಕ ಶುರು

ಡಿ ಫ್ಯಾನ್ಸ್ ವಿರುದ್ಧ ಕ್ರಮಕ್ಕೆ ಆಗ್ರಹ: ನಟ ಚೇತನ್ ಕುಮಾರ್‌ಗೆ ನಟಿ ರಮ್ಯಾ ಧನ್ಯವಾದ

ತಮ್ಮ ಕುಟುಂಬದಲ್ಲೇ ಇಷ್ಟೆಲ್ಲಾ ನಡೆಯುವಾಗ ಸುಮ್ಮನಿದ್ರು: ಯುವ ಮಾಜಿ ಪತ್ನಿ ಪೋಸ್ಟ್ ವೈರಲ್

ಮುಂದಿನ ಸುದ್ದಿ
Show comments