Select Your Language

Notifications

webdunia
webdunia
webdunia
webdunia

ನಯನತಾರಾ ಮದುವೆಗೆ ಭರದ ಸಿದ್ಧತೆ: ವರ ಯಾರು ಗೊತ್ತೇ ?

ನಯನತಾರಾ ಮದುವೆಗೆ ಭರದ ಸಿದ್ಧತೆ: ವರ ಯಾರು ಗೊತ್ತೇ ?
, ಶುಕ್ರವಾರ, 24 ಏಪ್ರಿಲ್ 2015 (10:11 IST)
ನಯನತಾರ ಬಗ್ಗೆ ಮತ್ತೊಮ್ಮೆ ಸಂಚಲನಾತ್ಮಕ ಸುದ್ದಿ ಹೊರ ಬಂದಿದೆ. ಈ ಮಲೆಯಾಳಿ ಹೆಣ್ಣುಮಗಳ  ಮನೋಸ್ಥೈರ್ಯ  ಅಧಿಕವೆಂದು ಮತ್ತೆ ಮತ್ತೆ ಸ್ಪಷ್ಟವಾಗಿದೆ ಎಂದೇ ಹೇಳ ಬಹುದಾಗಿದೆ. ಏಕೆಂದರೆ ಆಕೆಯ  ಬದುಕಲ್ಲಿ ಎರಡು ಬಾರಿ ಪ್ರೀತಿ ವಿಫಲವಾದರೂ ಸಹಿತ ಆಕೆ ಮಾತ್ರ ಈವರೆಗೂ ತನಗಿರುವ ನಂಬರ್ ಒನ್ ಸ್ಥಾನದಿಂದ ದೂರವಾಗಿಲ್ಲ.   
ಈಗ ಸೂರ್ಯ, ವಿಜಯ ಸೇತುಪತಿ, ಕಾರ್ತಿಯಂತಹ ಯುವ ನಟರ ಜೊತೆ ಅಭಿನಯಿಸಿದ್ದಾಳೆ. ಒಟ್ಟಾರೆ ಯಾವುದೇ ಭೇದಭಾವ ಇಲ್ಲದೆ ಆಕೆ ತನ್ನ ಅಭಿನಯದ ಬಗ್ಗೆ ಹೆಚ್ಚು ಗಮನ ನೀಡಿದ್ದಾಳೆ. ಈಗ ಕಾರ್ತಿ ಜೊತೆ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾಳೆ.ಕಾಶ್ಮೊರ ಆ ಚಿತ್ರದ ಹೆಸರು. ಈಗ ಸೂರ್ಯ ಅವರ ಜೊತೆ ಮಾಸ್ ಸಿನಿಮಾದಲ್ಲಿ ಸಹಿತ ನಟಿಸುತ್ತಿದ್ದಾಳೆ ಈ ಭಾಮೆ. 
 
ಶೂಟಿಂಗ್ ಪೂರ್ಣವಾದ ತಕ್ಷಣ ಹೋಟೆಲ್ ಗೆ ಹೊರಡುವ ಪರಿಪಾಠ ಹೊಂದಿದ್ದ ನಯನ್ ಈಗ ಸಿನಿತಂಡದ ಜೊತೆ ಆರಾಮವಾಗಿ ಮಾತನಾಡುತ್ತಿರುತ್ತಾಳಂತೆ. ತನ್ನ ಚಿತ್ರಗಳು ಗೆಲುವು ಆದರೆ ಆದರೆ ನಟಿಸಿದ ಇನ್ನಿತರ ಕಲಾವಿದರ ಜೊತೆ ಸಮಯವನ್ನು ಖುಷಿಯಾಗಿ ಕಳಿಯುತ್ತಿದ್ದಾರಂತೆ. 
 
ಈ ರೀತಿಯ ಬದಲಾವಣೆಗೆ ಕಾರಣವೇನು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡಿದಾಗ ಆಕೆಯ ಆಪ್ತ ವರ್ಗದಿಂದ ತಿಳಿದ ಸಂಗತಿ ಏನೆಂದರೆ ಆಕೆ ನಟಿ  ಖುಷ್ಬೂ ರೀತಿಯಲ್ಲಿ ತಮಿಳು ಕುಟುಂಬದ ಸೊಸೆ ಆಗುತ್ತಿದ್ದಾಳಂತೆ. ಆದರೆ ಸಧ್ಯಕ್ಕೆ ವರ ಯಾರು ಎನ್ನುವ ವಿಷಯ ನೋಬಡಿ ನೋಸ್!

Share this Story:

Follow Webdunia kannada