Select Your Language

Notifications

webdunia
webdunia
webdunia
webdunia

ಅಭಿಮಾನಿಗಳನ್ನು ಭಯಪಡಿಸಲು ನಯನತಾರ ಸಿದ್ಧತೆ

ಅಭಿಮಾನಿಗಳನ್ನು ಭಯಪಡಿಸಲು ನಯನತಾರ ಸಿದ್ಧತೆ
, ಗುರುವಾರ, 30 ಜುಲೈ 2015 (10:30 IST)
ಇಲ್ಲಿವರೆಗೂ ಗ್ಲಾಮರ್ ಪಾತ್ರದಲ್ಲಿ, ಪ್ರತಿಭೆಗೆ ಅವಕಾಶವಿರುವ ಪಾತ್ರಗಳ ಮೂಲಕ   ಹೆಸರು ಗಳಿಸಿದ್ದ ತಾರೆ ನಯನತಾರ. ಸಿನಿಮಾ ಅಲ್ಲದೆ ವೈಯುಕ್ತಿಕ ಬದುಕಲ್ಲೂ ಸಹಿತ ಆಕೆಯು  ಅನೇಕ ರೀತಿಯಲ್ಲಿ ಜನರಿಗೆ ಗೊತ್ತಾದ ಚೆಲುವೆ. ಎರಡು ಬಾರಿ ಪ್ರಣಯದಲ್ಲಿ ಸೋಲು, ಮದುವೆ ವಿಷಯದಲ್ಲಿ ನೋವು ಹೀಗೆ ಹಲವಾರು ಸಂಗತಿಗಳು ಅಲ್ಲದೆ ಆಕೆ ತನ್ನ ನಟನೆ, ಗೆಲುವಿನ ಮೂಲಕವೂ ಸಹಿತ ಹೆಚ್ಚು ಹೆಚ್ಚು ಗೊತ್ತಾದ ನಟಿ. ಈಗ ಆಕೆ ಭಯ ಪಡಿಸುವ ಹಾದಿಯಲ್ಲಿ ನಡೆಯುತ್ತಿದ್ದಾರೆ. ಅಂದರೆ ಆಕೆ ಹಾರರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಾಯಾ ಎನ್ನುವ ಹೆಸರಿನ ಹಾರರ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಅಶ್ವಿನಿ ಶರವಣನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ತೆಲುಗು ಭಾಷೆಯಲ್ಲಿ ಮಯೂರಿ ಹೆಸರಲ್ಲಿ ಆ ಚಿತ್ರವನ್ನು ಕೆ. ಕಲ್ಯಾಣ್ ಅವರು ಬಿಡುಗಡೆ ಮಾಡುತ್ತಿದ್ದಾರೆ.  
ಹಾರರ್ ಕಥೆ ಹೊಂದಿರುವ ಈ ಚಿತ್ರದಲ್ಲಿ ಆಕೆ  ಮಗುವಿನ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ ಬಿಡುಗಡೆಯಾದ  ಟ್ರೈಲರ್ ಸಾಕಷ್ಟು ಹೆಸರು ಗಳಿಸಿದೆ. ಈ ಚಿತ್ರವನ್ನು ತಮಿಳು ಮತ್ತು ತೆಲುಗು  ಭಾಷೆಗಳಲ್ಲಿ ಏಕಕಾಲಕ್ಕೆ  ನಿರ್ಮಾಣ ಮಾಡುತ್ತಿದ್ದಾರೆ. ಎಲ್ಲಾ ಕಾರ್ಯಕ್ರಮಗಳು ಪೂರ್ಣವಾಗಿ ಈ ಚಿತ್ರ ಆಗಸ್ಟ್ ಮೂರನೇ ವಾರದಲ್ಲಿ ಬಿಡುಗಡೆ ಮಾಡುವ ಉದ್ದೇಶವನ್ನು ಚಿತ್ರತಂಡದವರು ಹೊಂದಿದ್ದಾರೆ. 

Share this Story:

Follow Webdunia kannada