Select Your Language

Notifications

webdunia
webdunia
webdunia
webdunia

'ಸುಲ್ತಾನ್'ನಲ್ಲಿ ನವಾಜುದ್ದೀನ್ ಸಿದ್ದೀಕಿ ಅಭಿನಯಿಸುತ್ತಿಲ್ಲ

'ಸುಲ್ತಾನ್'ನಲ್ಲಿ ನವಾಜುದ್ದೀನ್ ಸಿದ್ದೀಕಿ ಅಭಿನಯಿಸುತ್ತಿಲ್ಲ
, ಬುಧವಾರ, 1 ಜುಲೈ 2015 (10:56 IST)
ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಅದ್ದೂರಿ ಸಿನಿಮಾ ಸುಲ್ತಾನ್. ಸಲ್ಮಾನ್ ಖಾನ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾದಲ್ಲಿ ನವಾಜುದ್ದೀನ್ ಸಿದ್ಧಿಕಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು. ಆದ್ರೀಗ ಆ ಸುದ್ದಿಗೆ ತೆರೆ ಬಿದ್ದಿದೆ. ನವಾಜುದ್ದೀನ್ ಸಿದ್ದಿಕಿ ಈ ಸಿನಿಮಾದಲ್ಲಿ ನಟಿಸುತ್ತಿಲ್ಲ ಅಂತಾ ಯಶ್ ರಾಜ್ ಫಿಲ್ಮ್ಸ್ ನಿಂದಲೇ ಮಾಹಿತಿ ಹೊರ ಬಂದಿದೆ.
ಸಿನಿಮಾದಲ್ಲಿ ನವಾಜುದ್ದೀನ್ ಸಿದ್ದಿಕಿ ಅಭಿನಯಿಸುವುದರ ಬಗ್ಗೆ ಮಾಹಿತಿ ನೀಡಿರುವ ಯಶ್ ರಾಜ್ ಫಿಲ್ಮ್ಸ್ ಮೂಲಗಳು ನವಾಜುದ್ದೀನ್ ಸಿದ್ದಿಕಿ ಸುಲ್ತಾನ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ನಮ್ಮ ಸಿನಿಮಾದ ನಟ-ನಟಿಯರ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಆದಷ್ಟು ಬೇಗ ಈ ಬಗ್ಗೆ ಮಾಹಿತಿ ನೀಡುತ್ತೇವೆ ಎಂದಿದ್ದಾರೆ. ಆ ಮೂಲಕ ಬಹುದಿನಗಳಿಂದ ಹರಿದಾಡುತ್ತಿದ್ದ ಗಾಸಿಪ್ ಒಂದಕ್ಕೆ ಪೂರ್ಣ ವಿರಾಮವಿಟ್ಟಿದ್ದಾರೆ.
 
ಇನ್ನು ಸಿನಿಮಾದಲ್ಲಿ ನವಾಜುದ್ದೀನ್ ಸಿದ್ಧಿಕಿ ಬಾಕ್ಸಿಂಗ್ ಸ್ಪರ್ಧೆಯ ವೀಕ್ಷಣಾ ವರದಿಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿತ್ತು. ಇನ್ನು ಈ ಹಿಂದೆಯೂ ನವಾಜುದ್ದೀನ್ ಸಿದ್ದಿಕಿ ಸಲ್ಮಾನ್ ಖಾನ್ ರ ಕಿಕ್ ಸಿನಿಮಾದಲ್ಲೂ ಕಾಣಿಸಿಕೊಂಡಿದ್ರು. ಅಲ್ಲದೇ ಬಿಡುಗಡೆಗೆ ಸಿದ್ಧವಾಗಿರುವ ಭಜರಂಗಿ ಭಾಯ್ ಜಾನ್ ಸಿನಿಮಾದಲ್ಲೂ ಪತ್ರಕರ್ತನಾಗಿ ಕಾಣಿಸಿಕೊಂಡಿದ್ದಾರೆ.

Share this Story:

Follow Webdunia kannada