Webdunia - Bharat's app for daily news and videos

Install App

ಪುನೀತ್ ಜನ್ಮಕ್ಕೆ ಅನ್ನದಾನ ಮಾಡಿದ ನಮ್ರತಾ ಗೌಡ: ಬಿಗ್ಬಾಸ್‌ ಸ್ಪರ್ಧಿಯ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ

Sampriya
ಸೋಮವಾರ, 18 ಮಾರ್ಚ್ 2024 (18:31 IST)
Photo Courtesy Facebook
ಬೆಂಗಳೂರು: ದಿವಂಗತ ಪುನೀತ್ ಹುಟ್ಟಿದ ಹಬ್ಬದ ಹಿನ್ನೆಲೆ ಅವರ ಅಭಿಮಾನಿಯಾಗಿರುವ ನಟಿ, ಬಿಗ್‌ಬಾಸ್ ಸ್ಪರ್ಧಿ ನಮ್ರತಾ ಗೌಡ ಅವರು ಅನ್ನದಾನ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 
 
ಮಾರ್ಚ್ 17ರಂದು ದಿ.ಪುನೀತ್ ರಾಜಕುಮಾರ್ ಅವರ ಬರ್ತಡೇಯನ್ನು ರಾಜ್ಯದಾದ್ಯಂತ ಸ್ಫೂರ್ತಿ ದಿನವನ್ನಾಗಿ ಅವರ ಅಭಿಮಾನಿಗಳು ಆಚರಿಸಿದ್ದರು.
 
ಅದರಂತೆಯೇ ‌ಅಪ್ಪು ಅಭಿಮಾನಿಯಾಗಿರುವ ಬಿಗ್‌ಬಾಸ್‌ ಸ್ಪರ್ಧಿ ನಮ್ರತಾ ಅವರು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು, ಟು ಡೇ ಈಸ್ ಮಾರ್ಚ್ 17, ಎಸ್ ಮೈ ಬಾಸ್ ಪುನೀತ್ ರಾಜಕುಮಾರ್ ಅವರ ಹುಟ್ಟಿದ ಹಬ್ಬ, ಇವತ್ತು ನಾನು ನನ್ನ ಕೈಲಾದಷ್ಟು ಸಹಾಯವನ್ನು ಮಾಡ್ತ ಇದ್ದೀನಿ. ಹಾಗೂ ಇದನ್ನೇ ನಾನು ಪ್ರತಿ ತಿಂಗಳ 17ರಂದು ಮಾಡುತ್ತೇನೆಂದು ವಿಡಿಯೋವನ್ನು ಹಂಚಿಕೊಂಡಿದ್ದರು. 
 
ಇವರ ಮಾನವೀಯ ಕೆಲಸವನ್ನು ನೋಡಿ ಹಲವು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಇದೊಂದು ಪಬ್ಲಿಸಿಟಿ ಗಿಮಿಕ್ ಎಂದಿದ್ದಾರೆ. 
 
ಕೆಮೆಂಟ್ ಹೀಗಿದೆ: 
 
ಸಹಾಯ ಮಾಡೋದು ಒಂದು ಕೈಯಲ್ಲಿ ಮಾಡಿದ್ದೂ ಇನ್ನೊಂದು ಕೈ ಗೆ ಗೊತಾಗಬಾರ್ದು ಅಂತಾರಲ್ಲ ನೀವು ಪಬ್ಲಿಸಿಟಿ ಗೋಸ್ಕರ ಮಾಡೋದ ಅಕ್ಕ
 
ಸೂಪರ್ ಮ್ಯಾಮ್ ನೀವು ಪುನೀತ್ ಇಷ್ಟು ಸರ್ ನ ಇಷ್ಟು ದೊಡ್ಡ ಅಭಿಮಾನಿ ಅಂತ ಗೊತ್ತಿರ್ಲಿಲ್ಲ. ಕೈಯಲ್ಲೂ ಸರ್ ನೇಮ್ ಟ್ಯಾಟೂ ಆಕುಸ್ಕೊಂಡಿದಿರ. ಕೆಲವೊಬ್ಬರು ಬಿಗ್ ಬಾಸ್ ಮನೇಲಿ ವೋಟ್ ಗೋಸ್ಕರ ನಾನ್ ಅವ್ರ ಫ್ಯಾನ್ ಹೊರ್ಗಡೆ ಬಂದಮೇಲೆ ಇನ್ನೊಬ್ರ ಫ್ಯಾನ್ ಬರೀ ವೋಟ್ ಗೋಸ್ಕರ ಬಕೆಟ್ ಇಡಿತಿದ್ರು. ಆದ್ರೂ ನೀವು ನಿಮ್ಮ ಸ್ವಂತಿಕೆ ಇಂದ ಆಟ ಆಡಿದ್ರೆ ನೀವು ನಮ್ ದೇವ್ರ ಅಭಿಮಾನಿ ಅಂಥ ಗೊತ್ತಿದ್ರೆ ನಿಮಗೆ ಇನ್ನ ತುಂಬಾ ವೊಟ್ಸ್ ಬರೋವು. ಈ ಬಿಗ್ ಬಾಸ್ ನವ್ರು ಆ ಟ್ಯಾಟೂ ನ ಎಲ್ಲೂ ಝೂಮ್ ಮಾಡಿ ತೋರಿಸಲಿಲ್ಲ. 
ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments