Select Your Language

Notifications

webdunia
webdunia
webdunia
webdunia

ಸೋನಾಕ್ಷಿ ಚಿತ್ರಕ್ಕೆ ಹೆಸರು ಸಿಕ್ತು ?!

ಸೋನಾಕ್ಷಿ ಚಿತ್ರಕ್ಕೆ ಹೆಸರು ಸಿಕ್ತು ?!
, ಗುರುವಾರ, 19 ಮಾರ್ಚ್ 2015 (11:48 IST)
ಬಾಲಿವುಡ್‌ನ ಮುದ್ದು ಮುದ್ದಾದ ಚೆಲುವೆ ಸೋನಾಕ್ಷಿ ಸಿನ್ಹ. ಆಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆ ಲಿಂಗಾ ಚಿತ್ರದಲ್ಲಿ ಅಭಿನಯಿಸಿದ ಬಳಿಕ ಈಗ ದಕ್ಷಿಣದ ನಿರ್ದೇಶಕರ ಕಣ್ಣಿಗೆ ಬಿದ್ದಿದ್ದಾಳೆ. ಆಕೆಯು ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ನಟಿಸುವ ಬಗ್ಗೆ ಸುದ್ದಿ ಅತ್ತಿತ್ತ ಓಡಾಡುತ್ತಿದ್ದರೂ ಸಹಿತ ಯಾವುದು ನಿಖರ ಹಾಗೂ ನಿಚ್ಚಳವಾದ ಸುದ್ದಿ ಆಗಿಲ್ಲ. ಆದರೆ ಒಂದಂತೂ ಸತ್ಯ ದಕ್ಷಿಣ ಭಾರತ ಪ್ರಸಿದ್ಧ ನಿರ್ದೇಶಕ ಮುರುಗದಾಸ್ ಅವರ ತಮಿಳು ರೀಮೇಕ್ ಹಿಂದಿ ಚಿತ್ರದಲ್ಲಿ ಈಕೆಗೆ ಅವಕಾಶ ಸಿಕ್ಕಿದೆ. 
ಮುರುಗದಾಸ್ ಅವರ ನಿರ್ದೇಶನದ ಈ ಚಿತ್ರದಲಿ ಫಾಕ್ಸ್ ಸ್ಟುಡಿಯೋ ಪ್ರೊಡಕ್ಷನ್ ನೇತೃತ್ವದಲ್ಲಿ ತಯಾರಾಗುತ್ತಿರುವ ಈ ಚಿತ್ರದ ಹೆಸರು ಅಕಿರಾ ಎಂದು ನಿಕ್ಕಿ ಆಗಿದೆ ಎನ್ನುವಂತಹ ಸಂಗತಿಯನ್ನು  ಸೋನಾಕ್ಷಿ ಟ್ವೀಟ್ ಮಾಡಿ ಹೇಳಿದ್ದಾಳೆ. ಈ ಚಿತ್ರದಲ್ಲಿ ಬಾಲಿವುಡ್ ಪ್ರಸಿದ್ಧ ನಟ ಶತ್ರುಘ್ನ ಸಿನ್ಹ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ತಂದೆ ಮಗಳು ಒಂದೇ  ಚಿತ್ರದಲ್ಲಿ ನಟಿಸುವ ಅವಕಾಶ ಪಡೆದು ಕೊಂಡಿದ್ದಾರೆ. ಈ ಚಿತ್ರ ಮುರುಗದಾಸ್ ಅವರ ನಿರ್ದೇಶನದ ಮೂರನೇ ಹಿಂದಿ ಚಿತ್ರವಾಗಿದೆ ಎನ್ನುವುದು ಇಲ್ಲಿ ಗಮನಿಸ ಬೇಕಾದ ಸಂಗತಿಯಾಗಿದೆ. ತಮಿಳು ಸೂಪರ್ ಹಿಟ್ ಸಿನಿಮಾ ಮೌನಗುರು  ರೀಮೇಕ್ ಆಗಿದೆ ಅಕಿರಾ. 

Share this Story:

Follow Webdunia kannada