Select Your Language

Notifications

webdunia
webdunia
webdunia
webdunia

ನಾಗಾರ್ಜುನ್ ನನ್ನ ಮುಂದಿನ ಜನ್ಮಕ್ಕೂ ಪತಿಯಾಗಲಿ: ಅಮಲಾ

ನಾಗಾರ್ಜುನ್ ನನ್ನ ಮುಂದಿನ ಜನ್ಮಕ್ಕೂ ಪತಿಯಾಗಲಿ: ಅಮಲಾ
, ಸೋಮವಾರ, 29 ಜೂನ್ 2015 (10:23 IST)
ಅಕ್ಕಿನೇನಿ  ಕುಟುಂಬದ ಸೊಸೆ ಅಮಲ  ಹಾಗೂ ನಾಗಾರ್ಜುನ್ ಮದುವೆ ಆಗಿ 23  ವರ್ಷಗಳು ಪೂರ್ಣವಾಗಿದೆ. ನಾಗಾರ್ಜುನ್ ಅವರ ಮೊದಲ ಪತ್ನಿಯ ಮಗ ನಾಗ ಚೈತನ್ಯ. ಅಮಲ ಅವರನ್ನು ಮದುವೆ ಆಗುವ ಮುನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಿ ಆ ಬಳಿಕ ಈ ಸುಂದರಿಯನ್ನು ತಮ್ಮ ಮನೆಯ ಸದಸ್ಯೆಯನ್ನಾಗಿ, ಬಾಳ ಸಂಗಾತಿಯನ್ನಾಗಿ ಮಾಡಿಕೊಂಡಿದ್ದರು ನಾಗ್. ಅವರು ಈ ದಾಂಪತ್ಯದ ಬಗ್ಗೆ ಅಮಲ ಪತ್ರಿಕೆ ಒಂದಕ್ಕೆ ನೀಡಿದ ಸಂದರ್ಶನ ಹೀಗಿದೆ. ನೀವು ನಾಗ ಚೈತನ್ಯ ಅವರ ಬದುಕಲ್ಲಿ ತಾಯಿ ಸ್ಥಾನ ತುಂಬಿದ್ದೀರಾ ಎಂದಾಗ, ಆಕೆ ಆತನಿಗೆ ತಾಯಿ ಇದ್ದಾರೆ. ಆದ ಕಾರಣ ಆ ಸ್ಥಾನಕ್ಕೆ ನಾನು ಏರಲಾರೆ. ಆತ ಅದ್ಭುತವಾದ ಹುಡುಗ ಮತ್ತು ನಮ್ಮ ಮನೆಯ ಸದಸ್ಯ. ಅವನೆಂದರೆ ನನಗೆ ತುಂಬಾ ಇಷ್ಟ ಎಂದಿದ್ದಾರೆ. 
ಮುಂದೆ ಒಂದು ಜನ್ಮ ಇದ್ದರೆ ನಾನು ನಾಗ್ ಅವರ ಪತ್ನಿಯಾಗಲು ಇಷ್ಟ ಪಡುತ್ತೇನೆ. ನಾಗಾರ್ಜುನ 23  ವರ್ಷಗಳ ಹಿಂದೆ ತನ್ನ ಮೇಲೆ ಯಾವ ರೀತಿ ಪ್ರೀತಿ ತೋರಿದ್ದರೋ ಅದೇರೀತಿಯಲ್ಲಿ ಈಗಲೂ ಸಹಿತ ತಮ್ಮ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಅವರ ಜೊತೆಯ ಬದುಕು ತನ್ನ ಅದೃಷ್ಟ ಎಂದು ಹೇಳಿದ್ದಾರೆ ಅಮಲ. 
 
ಆಕೆ ಬೆಲೆಬಾಳುವ ಸೀರೆಗಿಂತ ಕೈ ಮಗ್ಗದ ಸೀರೆಗಳನ್ನು ಉಡುವ ಕಾರಣ ಹೇಳುತ್ತಾ, ಇದನ್ನೇ ನಂಬಿರುವ ಕುಟುಂಬಕ್ಕೆ ಅಲ್ಪ ಮಟ್ಟಿನ ಸಹಾಯ ಮಾಡಿದ ನೆಮ್ಮದಿ ನನಗೆ ದೊರಕಿದೆ. ನಾನು ತಿಂಗಳಿಗೆ ಎರಡು ಸೀರೆಗಳನ್ನು ಕೊಳ್ಳುವುದು ಸಹ ಇದೆ ಕಾರಣಕ್ಕೆ ಎಂದಿದ್ದಾರೆ. ನನ್ನ ಬದುಕಿನಲ್ಲಿ ಮರೆಯಲಾಗದ ಅಪರೂಪದ ಒಡವೆ ನಾಗ್ ಎಂದು ಈ ಸಮಯದಲ್ಲಿ ಅವರು ಪ್ರೀತಿ ವ್ಯಕ್ತ ಪಡಿಸಿದ್ದಾರೆ.

Share this Story:

Follow Webdunia kannada