Select Your Language

Notifications

webdunia
webdunia
webdunia
webdunia

ಮೈತ್ರೇಯಾ ಗೌಡ ವಿವಾದಿತ ಕಥೆಯನ್ನು ಲವ್ ಅನ್ ಎನ್ಹೆಚ್4 ತೆರೆಯ ಮೇಲೆ ತರುವ ಪ್ರಯತ್ನ?

ಮೈತ್ರೇಯಾ ಗೌಡ ವಿವಾದಿತ ಕಥೆಯನ್ನು ಲವ್ ಅನ್ ಎನ್ಹೆಚ್4 ತೆರೆಯ ಮೇಲೆ ತರುವ ಪ್ರಯತ್ನ?
, ಮಂಗಳವಾರ, 16 ಡಿಸೆಂಬರ್ 2014 (11:40 IST)
ಕರ್ನಾಟಕ ಮಾಜಿ ಮುಖ್ಯಮಂತ್ರಿ ಹಾಲಿ ಕೇಂದ್ರ ಮಂತ್ರಿ ಡಿವಿ ಸದಾನದ ಗೌಡ ಅವರ ಕುಟುಂಬವನ್ನೇ ಅಲ್ಲೋಲ ಕಲ್ಲೋಲ ಮಾಡಿದ ನಟಿ ಮೈತ್ರೇಯ ಗೌಡ. ಈಗ ಆ ನಟಿ ತನ್ನ ಅಭಿನಯ ಚಾತುರ್ಯವನ್ನು ನಿರ್ದೇಶಕ ಶ್ರೀನಾಥ್ ಅವರ ಹೊಚ್ಚ ಹೊಸ ಚಿತ್ರ ಲವ್ ಅನ್ ಎನ್ಹೆಚ್4 ನಲ್ಲಿ ಪ್ರಕಟ ಮಾಡುತ್ತಿದ್ದಾಳೆ. ಆ ಚಿತ್ರದಲ್ಲಿ ಈಕೆಯ ಪಾತ್ರದ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿದೆ ಎಂದೇ ಹೇಳ ಬಹುದಾಗಿದೆ. 
ಈ ಚಿತ್ರದಲ್ಲಿ  ಆಕೆ ಮಂಗಳ ಸೂತ್ರ  ಧರಿಸಿ ನಟಿಸುತ್ತಿದ್ದಾಳೆ. ಮಾಧ್ಯಮಿಗಳ ಪ್ರಕಾರ ಅದು   ಡಿ ವಿ ಸದಾನದ ಗೌಡ ರ ಮಗ  ರಾಹುಲ್ ಗೌಡ ಕಟ್ಟಿದ್ದರು ಎನ್ನಲಾದ ಮಂಗಳಸೂತ್ರ ವಾಗಿದೆಯಂತೆ  . ಅದನ್ನೇ ಧರಿಸಿ ಆಕೆ ಈಗ ಈ ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಿ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದ್ದಾಳೆ.
 
ರಾಹುಲ್ ಮತ್ತು ಆಕೆಯ ವಿವಾದಿತ ಕಥೆಯನ್ನು ತೆರೆಯ ಮೇಲೆ ಕಾಣಿಸಲು ಸಿದ್ಧತೆ ನಡೆಸಿದೆಯಾ? ಇದರ ಬಗ್ಗೆ ನಿರ್ದೇಶಕ ಯಾವುದೇ ಬಗೆಯ ಗುಟ್ಟು ಬಿಡುತ್ತಿಲ್ಲ. ಆದರು ಸಹ ವಿವಾದಿತರೇ ತುಂಬಿರುವ ಈ ಚಿತ್ರ ಖಂಡಿತ ದೊಡ್ಡ ವಿವಾದ ನಿರ್ಮಿಸುತ್ತದೆ ಎನ್ನುವ ಸಂಶಯ ಸಾಕಷ್ಟು ಮಂದಿಯನ್ನು ಕಾಡುತ್ತಿದೆ. ಅದಕ್ಕೆ ಕಾಲವೇ ಉತ್ತರ ಹೇಳುತ್ತದೆ. 

Share this Story:

Follow Webdunia kannada