Select Your Language

Notifications

webdunia
webdunia
webdunia
webdunia

ರಾಜ್ಯಾದ್ಯಂತ ಇಂದು ತೆರೆಗೆ ಬರಲಿರುವ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ

ರಾಜ್ಯಾದ್ಯಂತ ಇಂದು ತೆರೆಗೆ ಬರಲಿರುವ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ
, ಶುಕ್ರವಾರ, 26 ಡಿಸೆಂಬರ್ 2014 (09:36 IST)
ಯಶ್ ಮತ್ತು ರಾಧಿಕ ಪಂಡಿತ್ ಅವರು ನಟಿಸಿರುವ ಬಹು ನಿರೀಕ್ಷಿತ ಚಿತ್ರ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಚಿತ್ರ ಇಂದು ತೆರ ಕಾಣುತ್ತಿದೆ. ಜಯಣ್ಣ ಕಂಬೈನ್ಸ್ ಅಡಿಯಲ್ಲಿ ತಯಾರಾದ ಈ ಚಿತ್ರಕ್ಕೆ ಜಯಣ್ಣ ಮತ್ತು ಭೋಗೇಂದ್ರ ಹಣಕಾಸನ್ನು ಹೂಡಿದ್ದಾರೆ. ಈ ಚಿತ್ರ ಇಂದು ಅಂದರೆ ಕ್ರಿಸ್ಮಸ್ ಹಬ್ಬದಂದು ಬಿಡುಗಡೆ ಆಗುತ್ತಿದೆ. ಈ ರೀತಿ ಕ್ರಿಸ್ಮಸ್ ಸಮಯಕ್ಕೆ ಸರಿಯಾಗಿ ಯಶ್ ಚಿತ್ರಗಳ ಬಿಡುಗಡೆಯ ಸಂಖ್ಯೆಯತ್ತ ಗಮನ ನೀಡಿದರೆ ಅದು ಈಗ ಐದಾಗುತ್ತಿದೆ. 
ಇದು ಹಿಂದಿನ ಬೆಂಚಿನ ಹುಡುಗನ ಕಥೆ ಆಗಿದ್ದು, ಈ ಚಿತ್ರಕಥೆಗೂ ಹಾಗೂ 1972 ರಲ್ಲಿ ಬಿಡುಗಡೆ ಆದ ಡಾ. ವಿಷ್ಣುವರ್ಧನ್ ಅವರ ನಾಗರಹಾವು ಚಿತ್ರದ ಕಥೆಗೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ ನಿರ್ಮಾಪಕರು. ಈ ಚಿತ್ರವನ್ನು ಆನಂದ್ ರಾಮ್ ನಿರ್ದೇಶನ ಮಾಡಿದ್ದಾರೆ. ಇದು ಮುಂದಿನ ವಾರ ವಿದೇಶಗಳಲ್ಲೂ ಸಹಿತ ಪ್ರದರ್ಶನ ಕಾಣಲಿದೆ.  ಕರ್ನಾಟಕ ರಾಜ್ಯಾದ್ಯಂತ 250  ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ.ಹಿರಿಯರನ್ನು ನಿರ್ಲಕ್ಷಿಸಿದರೆ ಆಗುವ ಅನಾಹುತದ ಬಗ್ಗೆ  ತಿಳಿಸಲಾಗುತ್ತದೆಯಂತೆ. 
 
ಬೆಂಗಳೂರು, ಮೈಸೂರು, ಚಿತ್ರದುರ್ಗ, ಗೋವಾ ಹಾಗು ಸ್ವಿಜರ್ ಲ್ಯಾಂಡ್ ನಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ವಿ.ಹರಿಕೃಷ್ಣ ಸಂಗೀತ, ವಿ  ಮುರಳಿ ಕೊರಿಯಾಗ್ರಫಿ, ರವಿ ವರ್ಮ ಸಾಹಸ ಚಿತ್ರದಲ್ಲಿದೆ. .
ಯಶ್, ರಾಧಿಕ ಪಂಡಿತ್ ಜೊತೆ ಸಾಧು ಕೋಕಿಲ, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್, ಹೊನ್ನವಳ್ಳಿ ಕೃಷ್ಣ  ಮುಂತಾದವರು ಅಭಿನಯಿಸಿದ್ದಾರೆ. 

Share this Story:

Follow Webdunia kannada