Webdunia - Bharat's app for daily news and videos

Install App

ರಿಂಗ್ ಮಾಸ್ಟರ್ ಮಾತಾಡಲು ಆರಂಭ ಮಾಡಿದ್ದಾರೆ...

Webdunia
ಶನಿವಾರ, 22 ನವೆಂಬರ್ 2014 (12:32 IST)
ರಿಂಗ್ ಮಾಸ್ಟರ್  ಇದು ಉಪ್ಪಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ  ಸಿದ್ಧ ಆಗುತ್ತಿರುವ ಚಿತ್ರ. ಇದನ್ನು ಎ.ಜಿ.ಮಂಜುನಾಥ್, ನರಸಿಂಹಮೂರ್ತಿ, ಬಸವರಾಜು ಹಾಗೂ ಸತ್ಯನಾರಾಯಣ ಅವರು ನಿರ್ಮಿಸುತ್ತಿದ್ದಾರೆ.

ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ  ರಿಂಗ್ ಮಾಸ್ಟರ್ ಮಾತಿನ ಜೋಡಣೆ ನಡೆಯುತ್ತಿದೆ. ಆರಂಭದಲ್ಲಿ ಇದಕ್ಕೆ  ರಿಂಗ್ ಮಾಸ್ಟರ್ ಎನ್ನುವ ಹೆಸರಿಟ್ಟರೂ ಸಹ ಹೆಚ್ಚು ಚಾರ್ಮ್ ಇರಲಿ ಎಂದು ಭಂಗಿರಂಗ ಎಂದು ಕರೆದರು.  ಆದರೆ ಈ ಹೆಸರು ಸರಿ ಆಗಲಿಲ್ಲ ಎಂದು ಕಾಣುತ್ತದೆ. ಅವರು ಪುನಃ ರಿಂಗ್  ಮಾಸ್ಟರ್ ಎಂದೇ ಕರೆದಿದ್ದಾರೆ.
 
ಅರುಣ್  ಸಾಗರ್  ಅವರು ನಾಯಕರಾಗಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವುದು  ವಿಶೃತ್ ನಾಯಕ್. ಕಿರುತೆರೆಯ ನಟಿ ಅನುಶ್ರೀ, ಶೃಂಗ, ಶ್ವೇತ ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ.

ರವಿ ಬಸ್ರೂರು ಸಂಗೀತ ನಿರ್ದೇಶನ,ಸಿನಿಟೆಕ್ ಸೂರಿ  ಛಾಯಾಗ್ರಹಣ, ಹರೀಶ್ ಸಂಕಲನ, ಅರುಣ್ ಸಾಗರ್ ಕಲಾ ನಿರ್ದೇಶನ, ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಈ ಚಿತ್ರದ ಮುಖ್ಯ ಸಂಗತಿಗಳು.ವಿಶೃತ್ ನಾಯಕ್  ರಿಂಗ್ ಮಾಸ್ಟರ್ ಚಿತ್ರಕ್ಕೆ ಹಾಡುಗಳನ್ನು ಬರೆದು ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ.  
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments