Select Your Language

Notifications

webdunia
webdunia
webdunia
webdunia

ತ್ರಿಷಾ ಇನ್ನುಮುಂದೆ ಅಂತಹ ಪಾತ್ರಗಳಲ್ಲಿ ನಟಿಸಲ್ಲವಂತೆ.. ಅದಕ್ಕೆ ಕಾರಣ ಇದಂತೆ...

ತ್ರಿಷಾ ಇನ್ನುಮುಂದೆ ಅಂತಹ ಪಾತ್ರಗಳಲ್ಲಿ ನಟಿಸಲ್ಲವಂತೆ.. ಅದಕ್ಕೆ ಕಾರಣ ಇದಂತೆ...
ಬೆಂಗಳೂರು , ಬುಧವಾರ, 19 ನವೆಂಬರ್ 2014 (10:13 IST)
ಕನ್ನಡ ಚಿತ್ರ ಪವರ್ *** ನಲ್ಲಿ ತ್ರಿಷ ನಟಿಸಿದ್ದಾಳೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲೂ ನಟಿಸಿರುವ ತ್ರಿಷ ಎನ್ನುವ ಗ್ಲಾಮರ್ ಬೊಂಬೆ ತನ್ನನ್ನು ಕ್ಯಾಮರಾ ಮುಂದೆ ಮಾದಕವಾಗಿ ತೋರಿಸುವತ್ತ  ಗಮನ ನೆಟ್ಟಿದ್ದಳು. ಅಲ್ಲದೆ ಹೀರೋಯಿನ್ ಪಾತ್ರಧಾರಿಯಾಗಿ ಸದಾ ಹೀರೋನ್ನ ಓಲೈಸುವ ಕೆಲಸದಲ್ಲಿ ಆಕೆ ಮುಂದೆ ಇದ್ದು, ಈಗ ಪ್ರಾಯಶಃ  ಅಂತಹ ಪಾತ್ರಗಳು ಬೋರ್  ಉಂಟು ಮಾಡಿರ ಬೇಕು.

ಕೆಂದರೆ ಈಗ ಆಕೆ ತನ್ನ ಹೊಸ ಚಿತ್ರಗಳ ವಿಷಯದಲ್ಲಿ ಸಾಕಷ್ಟು ಚೂಸಿ ಆಗಿದ್ದಾಳೆ ಎಂದೇ ಹೇಳ ಬಹುದು. ಈಗ ಹೀರೋ ಜೊತೆ ನಟಿಸುತ್ತಿರುವ ಮೂರು ಚಿತ್ರಗಳು ಆಕೆಯ ಕೈಲಿದೆ. ಆದರೆ ಆ ಚಿತ್ರಗಳನ್ನು ಹೊರೆತು ಪಡಿಸಿ ಪ್ರಯೋಗಾತ್ಮಕ ಚಿತ್ರಗಳಲ್ಲಿ ನಟಿಸುವುದಕ್ಕೆ ಆಕೆ ಆದ್ಯತೆ ನೀಡುತ್ತಿದ್ದಾಳೆ. ಈ ಬಗ್ಗೆ ಹೇಳುವುದಾದರೆ ತ್ರಿಷಾಳ ಈ ವರ್ತನೆಗೆ ಕಾರಣ ಅನುಷ್ಕ ಶೆಟ್ಟಿ ಅಂತೆ.

webdunia
ಎಲ್ಲರಿಗೂ ಗೊತ್ತಿದೆ ಅನುಷ್ಕ ತನ್ನನ್ನು ಕೇವಲ ಗ್ಲಾಮರ್ ಪಾತ್ರಗಳಿಗೆ ಮಾತ್ರವಲ್ಲದೆ ಸಾಹಸ ಪ್ರಧಾನ ಪಾತ್ರಗಳಲ್ಲೂ ತೊಡಗಿಸಿ ಕೊಳ್ಳುತ್ತಿದ್ದಾಳೆ. ಅಂತಹ ನಟಿ ಈಗ ತನ್ನದೇ ಆದ  ಒಂದು ವಿಶೇಷ ಸ್ಥಾನ ಪಡೆದು ಎಲ್ಲರ ಗಮನ ಸೆಳೆದಿದ್ದಾಳೆ, ತ್ರಿಷ ಮಾಜಿ ಪ್ರೇಮಿ ರಾಣ ಸಹ ಅನುಷ್ಕಳ ಈ ಸಾಹಸ ಹೊಗಳಿದ ಮೇಲೆ ತ್ರಿಷಾಗೆ  ಇನ್ನು ತಾನು ಸುಮ್ಮನೆ ಇದ್ದರೆ ಸರಿಯಾಗದು ಎಂದು ಅನ್ನಿಸಿರ ಬೇಕು.

ತ್ರಿಷಾ ಹೊಸ ಸಾಹಸ ಪ್ರೇಕ್ಷಕರಿಗೆ ಇಷ್ಟವಾದಿತಾ ಎನ್ನುವ ಪ್ರಶ್ನೆ ಮಾಧ್ಯಮಿಗಳಿಗೆ ಕಾಡಿದೆ.. ಆದರೆ ಅದರ ಫಲಿತಾಂಶಕ್ಕೆ ಸಾಕಷ್ಟು ವೇಳೆ ಇದೆ!  
 

Share this Story:

Follow Webdunia kannada