Webdunia - Bharat's app for daily news and videos

Install App

ರುದ್ರಮದೇವಿಗೆಂದು 150 ಅಡಿ ಎತ್ತರದಿಂದ ಜಿಗಿದ ಅನುಷ್ಕ

Webdunia
ಮಂಗಳವಾರ, 18 ನವೆಂಬರ್ 2014 (11:32 IST)
ಅನುಷ್ಕ ಶೆಟ್ಟಿ ದಕ್ಷಿಣ ಭಾರತದ ಟಾಪ್ ಹೀರೋಯಿನ್. ಕನ್ನಡತಿಯಾಗಿರುವ ಈಕೆ   ಉಜ್ವಲ ಆಗಿರುವುದು ಟಾಲಿವುಡ್ ಮತ್ತು ಕಾಲಿವುಡ್ ಚಿತ್ರರಂಗಳಲ್ಲಿ. ಈಗ ಆಕೆ ಹೆಚ್ಚು ಮಹಿಳಾಪ್ರಧಾನ  ಚಿತ್ರಗಳನ್ನು ಮಾಡದೆ ಇದ್ದರು ಸಹಿತ ಆಕೆಯ ಪಾತ್ರವು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿರುತ್ತದೆ.

ಆಕೆ ನಟಿಸಿರುವ ಚಿತ್ರಗಳಾದ ರುದ್ರಮದೇವಿ, ಬಾಹುಬಲಿ ಮತ್ತು ಲಿಂಗಾ ಈಗ ಬಿಡುಗಡೆಯ   ಹಾದಿಯಲ್ಲಿದೆ. ರಾಜ ಮನೆತನದ ಕಥೆಯನ್ನು ಹೊಂದಿರುವ ರಾಣಿ ರುದ್ರಮದೇವಿ ಅನುಷ್ಕ ತಾರ ಬದುಕಿನಲ್ಲಿ ಅನೇಕ ತಿರುವುಗಳನ್ನು ನೀಡಿದ್ದು, ಆಕೆಯು ತನ್ನನ್ನು ಸಂಪೂರ್ಣವಾಗಿ ಸಾಹಸದಲ್ಲಿ ತೊಡಗಿಸಿಕೊಳ್ಳಲು ಪ್ರೇರಕವಾಗಿದೆ ಎಂದೇ ಹೇಳ ಬಹುದಾಗಿದೆ. ಕೇವಲ ಹೀರೋಯಿನ್ ಆಗಿರುವುದಕ್ಕೆ ಇಷ್ಟ ಪಡದೆ ತನ್ನ ಪಾತ್ರಕ್ಕೆ ಎಂತಹ  ಸಾಹಸ ಅಗತ್ಯ ಇದೆಯೋ ಅವೆಲ್ಲವನ್ನು ಸಹಿತ ಆಕೆ ಸ್ವೀಕರಿಸಿ ಗೆದ್ದಿದ್ದಾಳೆ. 
 
ರುದ್ರಮ ದೇವಿ ಚಿತ್ರದ ಶೂಟಿಂಗ್ ಈಗ ಮುಗಿದಿದೆ. ಈ ಚಿತ್ರಕ್ಕೆಂದು ಅನುಷ್ಕ ಯುದ್ಧ ಯೋಧೆಯಾಗಿ ಕಾಣಿಸಿಕೊಂಡಿದ್ದು, ಅದಕ್ಕೆಂದು ಅನೇಕ ಸಾಹಸ ದೃಶ್ಯಗಳಲ್ಲಿ ಸಹ ಭಾಗವಹಿಸಿದ್ದಾಳೆ. ಇದಕ್ಕೆಂದು ಕತ್ತಿ ಗುರಾಣಿ, ಅಲ್ಲದೆ ಕುದುರೆ ಸವಾರಿಯನ್ನು ಸಹ ಕಲಿತು  ಪಾತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ ಈ ಚೆಲುವೆ.

ಕೇವಲ ಇಷ್ಟಕ್ಕೆ  ಸುಮ್ಮನಾಗದೆ ಆಕೆ ಆ ಚಿತ್ರದಲ್ಲಿ ಯಾವ ಡ್ಯೂಪ್ ಸಹಾಯ ಇಲ್ಲದೆ 150  ಅಡಿ ಎತ್ತರದಿಂದ ಜಿಗಿದು ತಾನು ಭಿನ್ನ ಎನ್ನುವುದನ್ನು ಸಾಬೀತು ಮಾಡಿದ್ದಾಳೆ ಎಂದು ಚಿತ್ರಮಂದಿ ಹೇಳಿದ್ದಾರೆ. ಒಟ್ಟಾರೆ ರುದ್ರಮದೇವಿಗಾಗಿ ಅನುಷ್ಕ ಹೀರೋಗಳಿಗಿಂತ ತಾನೇನು  ಕಡಿಮೆ ಇಲ್ಲ ಎಂದು ತಿಳಿಸಿದ್ದಾಳೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments