Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ತಮಿಳು ಚಿತ್ರಾರಂಭ.. ವಿಜಯ್ ಅಣ್ಣನಾಗಿ ಕಿಚ್ಚ ಅಭಿನಯ ?

ಕಿಚ್ಚ ಸುದೀಪ್ ತಮಿಳು ಚಿತ್ರಾರಂಭ.. ವಿಜಯ್ ಅಣ್ಣನಾಗಿ ಕಿಚ್ಚ ಅಭಿನಯ ?
ಬೆಂಗಳೂರು , ಶನಿವಾರ, 15 ನವೆಂಬರ್ 2014 (11:07 IST)
ಸ್ಯಾಂಡಲ್ ವುಡ್ ನ ಸ್ಟಾರ್ ಹೀರೋ ಕಿಚ್ಚ ಸುದೀಪ್  ಅವರು ತಮ್ಮನ್ನು ಕೇವಲ ಕನ್ನಡ ಸಿನಿಮಾಗಳಲ್ಲಿ ಮಾತ್ರವಲ್ಲದೆ ರಿಯಾಲಿಟಿ ಷೋ, ಬೇರೆ ಭಾಷೆಯ ಚಿತ್ರಗಳ ನಟನೆಯಲ್ಲೂ ಸಹಿತ ತೊಡಗಿಸಿ ಕೊಂಡಿದ್ದಾರೆ. ಈ ಮುಖಾಂತರ ಅವರು ಹೆಚ್ಚಿನ ಜನಪ್ರಿಯತೆ ಪಡೆದಿದ್ದಾರೆ. ಅದರಲ್ಲೂ ರಾಜಮೌಳಿ ಅವರ ನಿರ್ದೇಶನ ಈಗ ಚಿತ್ರ ನೇಮ್ ಮತ್ತು ಫೇಂ ಎರಡನ್ನು ನೀಡಿತು. ಇದರಿಂದ ಇವರ ತಾರಾ ಬದುಕಲ್ಲಿ ಹೊಸ ತಿರುವು ಸಿಕ್ಕಿದ್ದು ಸತ್ಯ.

ಹಾಗೆಂದು ಅವರಿಗೆ ಫೇಮ್ ಇರಲಿಲ್ಲ ಎಂದಲ್ಲ. ಆ ನಟನ ಅಭಿನಯ ಕಂಡೆ ಬೇರೆ ಚಿತ್ರದವರು ಅವಕಾಶ ನೀಡಿದ್ದು. ಹೀಗೆ ಹುಡುಕಿಕೊಂಡು ಬಂದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡ ನಟ ಯಶಸ್ಸು ಗಳಿಸಿದ್ದಾರೆ. ಅವರು ಈಗ ತಮಿಳು ಚಿತ್ರ ಒಂದರಲ್ಲಿ  ನಟಿಸುತ್ತಿದ್ದಾರೆ. ಈ ಚಿತ್ರದ ನಾಯಕರಾಗಿ  ವಿಜಯ್  ಅಭಿನಯಿಸುತ್ತಿದ್ದಾರೆ. ಒಂದು ಮೂಲದ ಪ್ರಕಾರ ಇದರಲ್ಲಿ ಕಿಚ್ಚ ವಿಜಯ್  ಅಣ್ಣನ ಪಾತ್ರಧಾರಿಯಾಗಿದ್ದಾರೆ.

ಇದು ರಾಜವಂಶದ ಕಥೆಯಾಗಿದ್ದು, ಶ್ರೀದೇವಿ  ರಾಜಮಾತೆಯಾಗಿ ನಟಿಸುತ್ತಿದ್ದಾರೆ. ಹನ್ಸಿಕ ಹಾಗೂ ಶ್ರುತಿ ಹಾಸನ್ ಇದರ ನಾಯಕಿಯರಾಗಿದ್ದಾರೆ. ಕಿಚ್ಚ ಅವರ ಬಹುದಿನದ ಆಸೆ ನೆರವೇರುತ್ತಿದೆ ಎಂದೇ ಹೇಳ ಬಹುದಾಗಿದೆ. ಅಂದರೆ  ಅವರು ಈ ಚಿತ್ರದಲ್ಲಿ ಶ್ರೀದೇವಿ ಅವರ ಜೊತೆ ನಟಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸೂಪರ್ ಸ್ಟಾರ್ ರಜನಿ ಕಾಂತ್ ಅವರ ಜೊತೆ ಅಭಿನಯಿಸುವ ಸಾಧ್ಯತೆ ಹೇರಳವಾಗಿದೆ. ಒಟ್ಟಾರೆ ಕಿಚ್ಚ ಕನ್ನಡ ಕಣ್ಮಣಿಯಾಗದೆ  ಎಲ್ಲರ ಪ್ರೀತಿಯ ನಟನಾಗಲು ಸಿದ್ಧತೆ ನಡೆಸಿದ್ದಾರೆ. 
 

Share this Story:

Follow Webdunia kannada