Select Your Language

Notifications

webdunia
webdunia
webdunia
webdunia

ಲಿಂಗಾ ಹಾಗೂ ಕತ್ತಿ ಚಿತ್ರಕಥೆ ಸಂಪೂರ್ಣ ಭಿನ್ನ, ಹೋಲಿಕೆ ಇಲ್ಲ-ರಾಕ್ಲೈನ್

ಲಿಂಗಾ ಹಾಗೂ ಕತ್ತಿ ಚಿತ್ರಕಥೆ ಸಂಪೂರ್ಣ ಭಿನ್ನ, ಹೋಲಿಕೆ ಇಲ್ಲ-ರಾಕ್ಲೈನ್
ಬೆಂಗಳೂರು , ಸೋಮವಾರ, 10 ನವೆಂಬರ್ 2014 (12:34 IST)
ಸಾಮಾನ್ಯವಾಗಿ ಕೆಲವೊಂದು ಚಿತ್ರಗಳು ಬಿಡುಗಡೆಗೆ ಮುನ್ನ ಸಾಕಷ್ಟು ಸುದ್ದಿ ಮಾಡುತ್ತಿರುತ್ತದೆ. ಅದಕ್ಕೆ ಕಾರಣಗಳು ಹಲವಾರು. ಈಗ ರಾಕ್ಲೈನ್ ವೆಂಕಟೇಶ್ ಅವರು ನಿರ್ಮಾಣ ಮಾಡುತ್ತಿರುವ , ಕೆ ಎಸ್ ರವಿಕುಮಾರ್ ಅವರ ನಿರ್ದೇಶನದ ಲಿಂಗಾ ಚಿತ್ರವೂ ಸಹ ಅಂತ ಒಂದು ಸುದ್ದಿಯಿಂದ ಎಲ್ಲರ ಗಮನ  ಸೆಳೆದಿದೆ. ಸುಪರ್ ಸ್ಟಾರ್ ರಜನಿಕಾಂತ್ ಅವರ ಅಭಿನಯದ ಬಹುನಿರೀಕ್ಷಿತ ಚಿತ್ರ ಲಿಂಗಾ ದಲ್ಲಿ ಅನುಷ್ಕ ಶೆಟ್ಟಿ ಹಾಗೂ ಸೋನಾಕ್ಷಿ  ಸಿನ್ಹ ಮುಖ್ಯ ಪಾತ್ರಧಾರಿಯಾಗಿದ್ದಾರೆ.

ಈ ಚಿತ್ರದ ಬಗ್ಗೆ ಹರಡಿರುವ ಸುದ್ದಿ ಏನೆಂದರೆ  ಇದು  ತಮಿಳು ಸ್ಟಾರ್ ವಿಜಯ್ ಅವರ ಕತ್ತಿ ಚಿತ್ರವನ್ನು ಹೋಲುತ್ತಿದೆ. ಕತ್ತಿ ವಿಜಯ್ ಅಭಿನಯದ ಇತ್ತೀಚಿನ ಯಶಸ್ವಿ ಚಿತ್ರವಾಗಿದೆ. 
ಆದರೆ ಈ ವದಂತಿಯನ್ನು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅಲ್ಲಗಳೆದಿದ್ದಾರೆ. ಇದು ಸಂಪೂರ್ಣವಾಗಿ ಭಿನ್ನ ಕಥಾಹಂದರ ಹೊಂದಿರುವ ಚಿತ್ರವಾಗಿದೆ  ಎಂದು ಹೇಳಿದ್ದಲ್ಲದೆ ಆ ಚಿತ್ರದ ಕಥೆಗೂ ಈ ಚಿತ್ರಕಥೆಗೂ ಯಾವ ರೀತಿಯಲ್ಲೂ ಹೋಲಿಕೆ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ ರಾಕ್ಲೈನ್.

ಲಿಂಗಾ ಚಿತ್ರದ ಟೀಜರ್ ವೀಕ್ಷಿಸಿದ ಬಳಿಕ ಇಂತಹ ಒಂದು ಗೊಂದಲ ಉಂಟಾಗಿದ್ದು, ಈ ಬಗ್ಗೆ ಸ್ಪಷ್ಟವಾದ ಅಭಿಪ್ರಾಯ ಹೇಳಿದ್ದಾರೆ ರಾಕ್ಲೈನ್. ಅಭಿಮಾನಿಗಳ ಮತ್ತು ಸುದ್ದಿ ಹರಡಿಸಿರುವವರು ಉತ್ತರ ಪಡೆಯಲು ಬಿಡುಗಡೆಯ ತನಕ ಕಾಯ ಬೇಕಿದೆ. 
 

Share this Story:

Follow Webdunia kannada