Select Your Language

Notifications

webdunia
webdunia
webdunia
webdunia

ಪ್ರೀತಿಯ ಹುಡುಗ ಧ್ಯಾನ್ ಇಂದ್ರಜಿತ್ ಆಸ್ಥಾನಕ್ಕೆ ಸೇರ್ಪಡೆ

ಪ್ರೀತಿಯ ಹುಡುಗ ಧ್ಯಾನ್ ಇಂದ್ರಜಿತ್ ಆಸ್ಥಾನಕ್ಕೆ ಸೇರ್ಪಡೆ
ಬೆಂಗಳೂರು , ಶುಕ್ರವಾರ, 7 ನವೆಂಬರ್ 2014 (11:51 IST)
ಕನ್ನಡ ಚಿತ್ರ ಲವ್ ಯು ಆಲಿಯಾದಲ್ಲಿ ಧ್ಯಾನ್ ಸಹ ನಟಿಸುತ್ತಿದ್ದಾರೆ. ಕನ್ನಡ  ಚಿತ್ರರಂಗದ ಮೂಲಕ ತನ್ನ ತಾರಾ ಬದುಕನ್ನು ಉಜ್ವಲ ಮಾಡಿಕೊಂಡ ಧ್ಯಾನ್ ಈಗ ಕನ್ನಡ ಅಲ್ಲದೆ ಹಿಂದಿ ಚಿತ್ರರಂಗದಲ್ಲೂ ಸಹಿತ ಬ್ಯುಸಿ ಆಗಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಬ್ಯುಸಿನೆಸ್ ನಲ್ಲೂ ಸಹಿತ ತುಂಬಾ ಬ್ಯುಸಿ. ಇಷ್ಟೆಲ್ಲಾ ಬ್ಯುಸಿಯ ನಡುವೆ ಅವರು ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇನ್ನು ಸ್ಪಷ್ಟವಾಗಿ ಹೇಳ ಬೇಕೆಂದರೆ ಈತ ಈಗಾಗಲೇ ಇಂದ್ರಜಿತ್  ಲಂಕೇಶ್  ಅವರ ನಿರ್ದೇಶನದ, ರವಿಚಂದ್ರನ್ ಮತ್ತು ಭೂಮಿಕ ಚಾವ್ಲ ನಟನೆಯ ಲವ್ ಯು ಆಲಿಯಾದ ಒಂದು ಸುತ್ತಿನ ಚಿತ್ರೀಕರಣ ಪೂರ್ಣ ಮಾಡಿದ್ದಾರೆ. ಮೈಸೂರಿನಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗವಹಿಸಿ ಅವರು ಮುಂಬೈಗೆ ಹೊರಟಿದ್ದಾರೆ. ಇದರಲ್ಲೂ ಸಹಿತ ಧ್ಯಾನ್ ಮುಂಬೈನಿಂದ ಬರುವ ಹುಡುಗ. ಈ ಚಿತ್ರದ  ಪಾತ್ರದ ಬಗ್ಗೆ ಸಧ್ಯಕ್ಕೆ ಗುಟ್ಟು ಬಿಟ್ಟು ಕೊಡದಿರುವ ಈ ನಟ ತನ್ನ ಮುಂದಿನ ಶೆಡ್ಯೂಲ್ ನ್ನು ಪೂರೈಸಲು  ಜನವರಿಯಲ್ಲಿ ಬರುವುದಾಗಿ ಹೇಳಿದ್ದಾರೆ.

ಭೂಮಿಕ ಚಾವ್ಲ ಜೊತೆ ನಟಿಸಿದ್ದು ಸಾಕಷ್ಟು ಖುಷಿ ಕೊಟ್ಟಿದೆಯಂತೆ ಧ್ಯಾನ್‌ಗೆ. ಅವರು ಈ ಮೊದಲು ಅಂದರೆ ಕಾಲೇಜಿನ ದಿನಗಳಲ್ಲಿ   ಜಾಹೀರಾತುಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರಂತೆ. ಕನ್ನಡ ಚಿತ್ರದ ಮುಖಾಂತರ ಮತ್ತೆ ಒಟ್ಟಾಗಿ ಕೆಲಸ ಮಾಡುತ್ತಿರುವುದಕ್ಕೆ ಅವರಿಗೆ ಸಕತ್ ಖುಷಿಯಾಗಿದೆಯಂತೆ. ಬೆಂಗಳೂರಿನ ನಿಕೋನ್ ಎನ್ನುವ ಹುಡುಗಿ ಧ್ಯಾನ್ ಜೊತೆಯಾಗಿದ್ದಾಳೆ ಈ ಚಿತ್ರದಲ್ಲಿ . ಮುಂಬೈ ನಲ್ಲಿ ಟೆಕ್ಸ್‌ಟೈಲ್  ಉದ್ಯಮಿಯಾಗಿರುವ ಧ್ಯಾನ್ ಒಳ್ಳೆಯ ಅವಕಾಶಗಳು ಸಿಕ್ಕರೆ ಮಾತ್ರ   ನಟಿಸುವುದಾಗಿ ಹೇಳಿದ್ದಾರೆ.
 

Share this Story:

Follow Webdunia kannada