Select Your Language

Notifications

webdunia
webdunia
webdunia
webdunia

ಅವಿನಾಶ್ ನಟನೆಯ ಈ ದಿಲ್ ಹೇಳಿದೆ ನೀ ಬೇಕಂತ ಇಂದು ರಾಜ್ಯಾದ್ಯಂತ ಬಿಡುಗಡೆ

ಅವಿನಾಶ್ ನಟನೆಯ ಈ ದಿಲ್ ಹೇಳಿದೆ ನೀ ಬೇಕಂತ  ಇಂದು ರಾಜ್ಯಾದ್ಯಂತ ಬಿಡುಗಡೆ
ಬೆಂಗಳೂರು , ಶುಕ್ರವಾರ, 31 ಅಕ್ಟೋಬರ್ 2014 (11:02 IST)
ನಿನ್ನ ನಾನು ನೋಡೋವರೆಗೂ ಕಣ್ಣು ಕಣ್ಣು ಕೂಡೋವರೆಗೂ ಎಂದು ಹರ್ಷಿಕ ಪೂಣಚ್ಚ ಅವರ ಜೊತೆ ಹಾಡುತ್ತ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕನ್ನಡದ ಮೇರು ಹಾಸ್ಯ ನಟ ದಿ. ನರಸಿಂಹರಾಜು ಅವರ ಮೊಮ್ಮಗ ಅವಿನಾಶ್ ಅವರ ಬಹು ನಿರೀಕ್ಷೆಯ ಚೊಚ್ಚಲ ಚಿತ್ರ ಜುಗಾರಿ. ಅದಾದ ಬಳಿಕ ಅವಿನಾಶ್ ಜುಗಾರಿ ಅವಿನಾಶ್ ಎಂದೇ ಗುರುತಿಸಿಕೊಂಡರು. ಹೇಳಿಕೊಳ್ಳುವಂತಹ ಅವಕಾಶಗಳು ದೊರಕದೆ  ಇದ್ದರೂ  ಸಹಿತ  ಚಿತ್ರರಂಗ ಅವರನ್ನು ಕೈ ಬಿಟ್ಟಿಲ್ಲ. ಅವಿನಾಶ್ ಅವರ ನಟನೆಯ ಈ ದಿಲ್ ಹೇಳಿದೆ ನೀ ಬೇಕಂತ ಎನ್ನುವ ಚಿತ್ರ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ.

ಏಕೆಂದರೆ ಈ ಚಿತ್ರದ ಹಾಡುಗಳು ಎಲ್ಲರ ಗಮನ ಸೆಳೆದಿದೆ. ಈ ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಸಂಪೂರ್ಣವಾಗಿ ಪ್ರೇಮ ಕಥೆಯನ್ನು ಹೊಂದಿರುವ ಈ ದಿಲ್ ನಲ್ಲಿ ಹೃದಯದ ಮಾತನ್ನು ಕೇಳಿದರೆ ಏನಾಗುತ್ತದೆ ಎನ್ನುವುದನ್ನು ಚಿತ್ರದ ಮೂಲಕ ಅನಾವರಣ ಮಾಡಿದ್ದಾರೆ ನಿರ್ದೇಶಕರು. ಯುವ ಜನಾಂಗಕ್ಕೆ ಇಷ್ಟ ಆಗುವ ರೀತಿಯಲ್ಲಿ ಚಿತ್ರ ಸಿದ್ಧವಾಗಿದ್ದು, ಹೊಸ ಪ್ರಯೋಗಗಳನ್ನು ಗಮನದಲ್ಲಿ ಇಟ್ಟುಕೊಂಡ ಕಾರಣ ಹಾಡಿನಲ್ಲಿ ಭಿನ್ನತೆಯನ್ನು ತೋರಿದ್ದೇವೆ ಎನ್ನುವ ಮಾತನ್ನು  ಗೀತರಚನೆ ಮಾಡಿರುವ  ಶ್ರೀಧರ್ ಹೇಳಿದ್ದಾರೆ.

ಚಿತ್ರದಲ್ಲಿ ಅವಿನಾಶ್ ಜೊತೆಯಾಗಿದ್ದಾರೆ ಶ್ರೀಶ್ರುತಿ. ಇದರಲ್ಲಿ ರಿಷಿ ಕುಮಾರ್ ಮಿಸ್ಟರ್ ರಿಷಿ ಕುಮಾರ್ ಆಗಿ ಕಾವಿ ಕಳಚಿ ಡ್ಯಾನ್ಸ್ ಮಾಡಿದ್ದಾರೆ ಪ್ಯಾಂಟ್ ಧರಿಸಿ!! ಅದೂ ಜೀನ್ಸ್ ಧರಿಸಿ ಕುಡುಕರ ಹಾಡಿಗೆ ಕುಣಿದಿದ್ದಾರೆ. ಕೆ ಟಿ ಎಂ ಶ್ರೀನಿವಾಸ್ ಅವರ ನಿದೇಶನದ ಈ ಚಿತ್ರವನ್ನು ಶ್ರೀಧರ್ ಮತ್ತು ಹೆಚ್ ಸಿ ಪ್ರಭಾಕರ್ ನಿರ್ಮಾಣ ಮಾಡಿದ್ದಾರೆ. ಇಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿರುವ ಈ ಚಿತ್ರ ಗೆಲ್ಲಲಿ ಎನ್ನುವುದು ನಮ್ಮ ಹಾರೈಕೆ. 
 

Share this Story:

Follow Webdunia kannada