ಕನ್ನಡ ಚಿತ್ರರಂಗದಲ್ಲಿ ಕೆಲವು ಚಿತ್ರಗಳು ನಿಲ್ಲದೆ ಮುನ್ನುಗ್ಗುತ್ತಿದ್ದಾರೆ, ಒಂದಷ್ಟು ಸಿನಿಮಾಗಳು ಮುಗ್ಗರಿಸಿ ಬಿದ್ದು ಬಿಡುತ್ತದೆ. ಈ ರೀತಿ ನಿಲ್ಲದೆ ಓಡುತ್ತಿರುವ ಚಿತ್ರಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಪವರ್ ***ಚಿತ್ರ ಸಹಿತ ಸೇರ್ಪಡೆ ಆಗಿದೆ. ಈ ಚಿತ್ರ ಕಳೆದ 50 ದಿನಗಳಿಂದ ನಿರಂತವಾಗಿ ಪ್ರದರ್ಶನ ಕಾಣುತ್ತಿದೆ. ಇದು 14 ರೀಲ್ ಎಂಟರ್ಟೇನ್ ಮೆಂಟ್ ಫಿಲಿಮ್ಸ್ ನಿಂದ ನಿರ್ಮಾಣ ಆಗಿದೆ. ಪವರ್ *** ಚಿತ್ರ ಈಗ 25ಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ಪ್ರದರ್ಶಿತವಾಗುತ್ತಿದೆ.
ಪುನೀತ್ ರಾಜ್ ಕುಮಾರ್ ಅವರ ಚಿತ್ರಗಳು 50 , 75 ಹಾಗೂ 100 ದಿನಗಳನ್ನು ಕಾಣುವುದು ಸಾಮಾನ್ಯ ಸಂಗತಿ. ಈ ರೀತಿ ಯಶಸ್ಸು ಪಡೆಯಲು ಅಪ್ಪು ಆಯ್ಕೆ ಮುಖ್ಯ ಕಾರಣವಾಗಿದೆ ಎಂದೇ ಹೇಳ ಬಹುದಾಗಿದೆ.
ಪವರ್ *** ಚಿತ್ರವನ್ನು ರಾಮ್ ಅಚಂತ, ಗೋಪಿಚಂದ್ ಅಚಂತ ಮತ್ತು ಅನಿಲ್ ಸಂಕುರ ಅವರು ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಕೆ ಮಾದೇಶ್ ನಿರ್ದೇಶನ ಮಾಡಿದ್ದಾರೆ. ಎಸ್ ಎಸ್ ತಮನ್ ಸಂಗೀತ ನೀಡಿರುವ ಈ ಚಿತ್ರದ ಗುರುವಾರ ಸಂಜೆ ನಾ ಹೊರಟಿದ್ದೆ ಹಾಡುಗಳು ಇನ್ನು ಜನಪ್ರಿಯತೆಯ ಉತ್ತುಂಗದಲ್ಲಿದೆ. ಇದರಲ್ಲಿ ತಮಿಳು ನಟಿ ತ್ರಿಷ ನಟಿಸಿದ್ದಾಳೆ.
ಪವರ್ *** ಚಿತ್ರಕ್ಕೆ ಕೊಲ್ಲ ಪ್ರವೀಣ್ ಅವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಒಟ್ಟಾರೆ ಪವರ್ *** ನಿಲ್ಲದೆ ಮುನ್ನುಗ್ಗುತ್ತಾ ಪುನೀತ್ ಅಭಿಮಾನಿಗಳ ಖುಷಿ ಹೆಚ್ಚಿಸುತ್ತಿದ್ದಾರೆ. ಅವರ ನಿನ್ನಿಂದಲೇ ಸಾಕಷ್ಟು ನಿರೀಕ್ಷೆ ಹೊಂದಿದ್ದರೆ ಸೋತು ಮಕಾಡೆ ಮಲಗಿತ್ತು.