Select Your Language

Notifications

webdunia
webdunia
webdunia
webdunia

ಸೆಕ್ಸಿ ರಾಗಿಣಿ ಮಲೇಸಿಯಾದಲ್ಲಿ ದೀಪಾವಳಿ ಹಬ್ಬದ ಆಚರಣೆ

ಸೆಕ್ಸಿ ರಾಗಿಣಿ ಮಲೇಸಿಯಾದಲ್ಲಿ ದೀಪಾವಳಿ ಹಬ್ಬದ ಆಚರಣೆ
ಬೆಂಗಳೂರು , ಬುಧವಾರ, 22 ಅಕ್ಟೋಬರ್ 2014 (10:36 IST)
ಇಂದಿನಿಂದ ಮೂರು ದಿನಗಳ ಕಾಲ ದೀಪಾವಳಿ ಹಬ್ಬ.  ಈ ವರ್ಷದ ದೀಪಾವಳಿ ಹಬ್ಬವನ್ನು ಮಲೇಸಿಯಾ  ದೇಶದಲ್ಲಿ ರಾಗಿಣಿ ದ್ವಿವೇದಿ  ಆಚರಿಸಿಕೊಳ್ಳುತ್ತಿದ್ದಾರೆ. ಯಾಕೆ ಅಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ ಅಂದ್ರೆ ಅವರ ದ್ವಿಭಾಷ ಚಿತ್ರವು ಆ ದೇಶದಲ್ಲಿ ಚಿತ್ರೀಕರಣ ಆಗುವತ್ತ ಸಿದ್ಧತೆ ನಡೆಸಿದೆ. ರಾಗಿಣಿ  ಅವರ ಬಹು ನಿರೀಕ್ಷಿತ ಚಿತ್ರ ಈ ವಾರ ಬಿಡುಗಡೆ ಭಾಗ್ಯ ಕಾಣುತ್ತಿದೆ. ನಮಸ್ತೆ ಮೇಡಮ್ ಸಿನೆಮಾ ಕರ್ನಾಟಕದಲ್ಲಿ ಬಿಡುಗಡೆ ಆಗುತ್ತಿದೆ.
 
ಜನಪ್ರಿಯ ನಟಿ ರಾಗಿಣಿ ದ್ವಿವೇದಿ ಅಭಿನಯದ ಊಜ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಮಲೇಸಿಯಾ  ದೇಶದಲ್ಲಿ ಇದೆ ತಿಂಗಳ 24ರಂದು ದೀಪಾವಳಿ ಹಬ್ಬದಂದು ಪ್ರಾರಂಭವಾಗಲಿದೆ. 30 ದಿವಸಗಳ ಕಾಲ ತಲಾ 15 ದಿವಸ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ  ಚಿತ್ರೀಕರಣ ಆದ ಬಳಿಕ ಚಿತ್ರತಂಡ ಭಾರತಕ್ಕೆ ಮರಳಲಿದ್ದಾರೆ.  ಇದು ಹಾರರ್ ಅಂಶವನ್ನು ಒಳಗೊಂಡ ಚಿತ್ರವಾಗಿದೆ. ಮೊದಲ ಬಾರಿಗೆ ಇಂತಹ ಕಥೆಯನ್ನು ಹೊಂದಿರುವ ಚಿತ್ರದಲ್ಲಿ ರಾಗಿಣಿ ನಟಿಸುತ್ತಿದ್ದಾರೆ. 
 
ಇದರ ನಿರ್ಮಾಪಕ ವಿಕ್ರಮ್ ರಾಜು.  ರಾಜ್ ಕುಮಾರ್  ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ರವಿಕುಮಾರ್ ಛಾಯಾಗ್ರಹಣ, ಹರಿ   ಸಂಗೀತ,ಎಸ್ ಬಿ ಶೇಖರ್  ಸಂಕಲನ  ಚಿತ್ರಕ್ಕಿದೆ.  ಬಹು ಅದ್ಧೂರಿಯ ಈ ಚಿತ್ರವು  ಅತ್ಯುತ್ತಮ ತಂತ್ರಜ್ಞಾನವನ್ನು ಹೊಂದಿದೆ. 

Share this Story:

Follow Webdunia kannada