Select Your Language

Notifications

webdunia
webdunia
webdunia
webdunia

ನನ್ನ ಹೆಣ್ಣುಮಕ್ಕಳ ಬಳಿ ನಾನು ಸಲಹೆ ಪಡೆಯುತ್ತೇನೆ!:ಮಹೇಶ್ ಭಟ್

ನನ್ನ ಹೆಣ್ಣುಮಕ್ಕಳ  ಬಳಿ ನಾನು ಸಲಹೆ ಪಡೆಯುತ್ತೇನೆ!:ಮಹೇಶ್ ಭಟ್
ಬೆಂಗಳೂರು , ಮಂಗಳವಾರ, 7 ಅಕ್ಟೋಬರ್ 2014 (11:45 IST)
ತಪ್ಪು ಉತ್ತರಗಳನ್ನು ಹೇಳಿ ಎಲ್ಲರ ಗಮನ ಮತ್ತು ಅನೇಕ ಜೋಕ್ ಗಳ ಹುಟ್ಟಿಗೆ ಕಾರಣ ಆಗಿರುವ ಅಭಿನೇತ್ರಿ ಆಲಿಯ ಭಟ್. ಆದರೆ ಅವರಪ್ಪನಿಗೆ ಮಾತ್ರ ಮಕ್ಕಳು ಸದಾ ಮುದ್ದು!  ಬಾಲಿವುಡ್ ನ ಪ್ರಸಿದ್ಧ ನಿರ್ದೇಶಕ ಮಹೇಶ್ ಭಟ್ ಮೂರು ಹೆಣ್ಣುಮಕ್ಕಳ ತಂದೆ.

ತನಗಿಂತಲೂ ತನ್ನ ಹೆಣ್ಣು ಮಕ್ಕಳು ತುಂಬಾ ಬುದ್ಧಿವಂತರು ಎಂದು  ಹೇಳಿದ್ದಾರೆ ಮಹೇಶ್ ಭಟ್. ಪ್ರಾಕ್ಟಿಕಲ್ ಆಗಿಯೂ ಸಹಿತ ಅವರಿಗೆ ಹೆಚ್ಚಿನ ತಿಳುವಳಿಕೆ ಇದೆ , ಅವರ ಬಳಿ ತಾನು ಸಲಹೆಗಳನ್ನು ಪಡೆಯುತ್ತೇನೆ ಎಂದು ಹೇಳಿದ್ದಾರೆ. 
 
ಮಹೇಶ್ ಭಟ್ ಮೂರು ಪುತ್ರಿಯರು ಪೂಜಾ ಭಟ್,  ಶಹಿನ್, ಆಲಿಯ ಭಟ್.  ಅವರಲ್ಲಿ ಪೂಜಾ ಆರಂಭಿಕ ಹಂತದಲ್ಲಿ ನಟಿಸಲು ಆದ್ಯತೆ ನೀಡಿದರು ಸಹಿತ ಆ ಬಳಿಕ ಗಮನ ನೀಡಿದ್ದು ನಿರ್ಮಾಣದ ಕಡೆಗೆ. ಶಹಿನ್ ಬರಹಗಾರ್ತಿ. ಆಲಿಯ ಈಗ ಬಾಲಿವುಡ್ ನ ಮುದ್ದು ಯಂಗ್ ಹೀರೋಯಿನ್.ತನ್ನ ಹೆಣ್ಣುಮಕ್ಕಳು ಯಾವುದೇ ರೀತಿಯಲ್ಲೂ ತನ್ನ ಸಹಾಯ ಇಲ್ಲದೆ ಅವರವರ ಕ್ಷೇತ್ರದಲ್ಲಿ ಬೆಳೆದಿದ್ದಾರೆ ಎಂದು ಮಹೇಶ್ ಭಟ್ ಹೇಳಿದ್ದಾರೆ. ಈ ಬಗ್ಗೆ ತಂದೆಯಾಗಿ ತನಗೆ ಹೆಚ್ಚು ಹೆಮ್ಮೆ ಇದೆ ಎಂದು ಸಹಿತ ಹೇಳಿದ್ದಾರೆ ಭಟ್ .  

Share this Story:

Follow Webdunia kannada