Select Your Language

Notifications

webdunia
webdunia
webdunia
webdunia

ನಾನು ನನ್ನ ಬಾಡಿಗಾರ್ಡ್ ಬಿಟ್ಟು ಒಂದು ಹೆಜ್ಜೇನು ಇಡಲ್ಲ.. ಇವರು ಇಲ್ಲದೆ ಮನೆಯಿಂದ ಹೊರಗೆ ಹೋಗಲ್ಲ!!

ನಾನು ನನ್ನ ಬಾಡಿಗಾರ್ಡ್ ಬಿಟ್ಟು ಒಂದು ಹೆಜ್ಜೇನು ಇಡಲ್ಲ.. ಇವರು ಇಲ್ಲದೆ ಮನೆಯಿಂದ ಹೊರಗೆ ಹೋಗಲ್ಲ!!
ಬೆಂಗಳೂರು , ಬುಧವಾರ, 1 ಅಕ್ಟೋಬರ್ 2014 (10:41 IST)
ಇತ್ತೀಚಿಗೆ ರಿಂಗ್ ರೋಡ್ ಶುಭ ಚಿತ್ರದ ಆಡಿಯೋ ಬಿಡುಗಡೆ ಆಯ್ತು. ಆ ಕಾರ್ಯಕ್ರಮಕ್ಕೆ ನಟ ದುನಿಯಾ ವಿಜಯ್ ಅವರು ಸಹಿತ ಭಾಗವಹಿಸಿದ್ದರು. ಆ ಚಿತ್ರದಲ್ಲಿ ವಿಜಯ್ ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಮಹಿಳಾ  ನಿರ್ದೇಶಕಿ ಮಾತ್ರವಲ್ಲ ಮಹಿಳೆಯರೇ ಹೆಚ್ಚು ತೆರೆ ಹಿಂದೆಯೂ ಸಹಿತ ಕೆಲಸ ಮಾಡಿರುವ ಈ ಚಿತ್ರವು ಅನೇಕ ಕುತೂಹಲಗಳನ್ನು ಈ ಚಿತ್ರಕ್ಕೆ ದುನಿಯಾ ವಿಜಯ್ ಪಡೆದ ಸಂಭಾವನೆ ಕೇವಲ ಒಂದು ರೂಪಾಯಿ.

ಈ ಸಂಗತಿ ಸಹಿತ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ  ಈ ಕಾರ್ಯಕ್ರಮದಲ್ಲಿ ಹೆಚ್ಚು ಗಮನ ಸೆಳೆದ ಸಂಗತಿ ಮತ್ತೊಂದಿದೆ.. ನಾನು ಎಂದಿಗೂ ನನ್ನ ಬಾಡಿಗಾರ್ಡ್ ಬಿಟ್ಟು ಎಲ್ಲಿಗೋ ಹೋಗುವುದಿಲ್ಲ ಎಂದು ಹೇಳಿದರು ಆಕಾರ್ಯಕ್ರಮದಲ್ಲಿ  ವಿಜಯ್. 
 
ಮನೆಯ ಹೊರಗೆ ಒಂದು ಹೆಜ್ಜೆ ಇಡಬೇಕಾದರೂ ಅವರು ಇರಲೇ ಬೇಕು ಎಂದು ಹೇಳಿದರು ವಿಜಿ.. ಆ ಮಾತು ಕೇಳಿ ಎಲ್ಲರುಆ ಬಾಡಿಗಾರ್ಡ್   ನ್ನು ನೋಡಲು ಹಿಂದೆ ತಿರುಗಿದಾಗ ಅಲ್ಲಿ ಕಂಡದ್ದು   ಕಟ್ಟಾಳುಗಳಲ್ಲ!

ಅವರ ಮಕ್ಕಳಾದ ಮೋನಿಕ ಮತ್ತು ಸಾಮ್ರಾಟ್. ತನ್ನ ಬಾಡಿಗಾರ್ಡ್ ಗಳೆಂದು ಹೇಳಿದ್ದು ಈ ಎರಡು ಮಕ್ಕಳ ಬಗ್ಗೆ. ತನ್ನ ಮಕ್ಕಳ ಜೊತೆ ಹೆಚ್ಚು ಕಾಲ ಕಲಿಯಲು ಆತ ಇಚ್ಚಿಸಿ ಅದರಂತೆ ನಡೆಯುತ್ತಿರುವುದು ಈಗ ಸಾಮಾನ್ಯ ಸಂಗತಿ. ಪತ್ನಿಯಿಂದ ಬೇರ್ಪಟ್ಟಿರುವ ವಿಜಯ್ ಈಗ ಹೆಚ್ಚು ಗಮನ ನೀಡಿರುವುದು ತನ್ನ ಮಕ್ಕಳ ಕಡೆಗೆ. ಈಗ ಮಕ್ಕಳೇ ಆತನ ಸರ್ವಸ್ವ ಆಗಿದೆ!

Share this Story:

Follow Webdunia kannada