Select Your Language

Notifications

webdunia
webdunia
webdunia
webdunia

ನೀವು ನನಗೆ ಗಂಡು ಹುಡುಕಿ ನಾನು ನಿಮಗೆ ಕಿಸ್ ಕೊಡ್ತೀನಿ

ನೀವು ನನಗೆ ಗಂಡು ಹುಡುಕಿ ನಾನು ನಿಮಗೆ ಕಿಸ್ ಕೊಡ್ತೀನಿ
ಹೈದ್ರಾಬಾದ್ , ಮಂಗಳವಾರ, 30 ಸೆಪ್ಟಂಬರ್ 2014 (10:54 IST)
ಟಾಲಿವುಡ್ ಮಾತ್ರವಲ್ಲ ಕಾಲಿವುಡ್ ನಲ್ಲೂ ಸಹಿತ ಬೇಡಿಕೆಯ ನಟಿಯಾಗಿದ್ದಾಳೆ ಅನುಷ್ಕ ಶೆಟ್ಟಿ.. ಈಗ ಆಕೆ ಕೈಲಿ ಅದ್ಧೂರಿ ಚಿತ್ರಗಳಿವೆ. ಲಿಂಗಾ, ಬಾಹುಬಲಿ, ರುದ್ರಮದೇವಿ ಮತ್ತು ಅಜಿತ್ ಜೊತೆಯ ಚಿತ್ರ. ಸ್ವೀಟಿ ಚಿತ್ರರಂಗಕ್ಕೆ ಬಂದು ಹಲವಾರು ವರ್ಷಗಳು ಉರುಳಿದರೂ ಸಹಿತ ಆಕೆಯ ದೇಹಾಕೃತಿಯಲ್ಲಿ ಯಾವುದೇ ಮಾರ್ಪಾಟು ಆಗಿಲ್ಲ, ಹಾಗೆ ಆಗೋದಕ್ಕೆ ಬಿಟ್ಟಿಲ್ಲ ಈ ಯೋಗಾ ಸುಂದರಿ. ಈಗ ಹೇಳೊ ವಿಷಯ ಅದಲ್ಲ ಬಿಡಿ! ಈ ಚೆಲುವೆ ಇತ್ತೀಚಿಗೆ ತನ್ನ ಮದುವೆಗೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ವ್ಯಕ್ತ ಪಡಿಸಿದ ಬಗ್ಗೆ ಈಗ  ಸುದ್ದಿ ಬಂದಿದೆ ಕಾಲಿವುಡ್ ಮಾಧ್ಯಮಲೋಕದಿಂದ. 
 
ಅನುಷ್ಕ ಮದುವೆ ಆಗ್ತಾ ಇದ್ದಾಳೆ.. ಖಂಡಿತಾ ಆಗ್ತಾಳೆ.. ಆಗೇ ಆಗ್ತಾ ಇದ್ದಾಳೆ ಎನ್ನುವುದಾಗಿ ಹರಡಿದ ಸುದ್ದಿಯನ್ನು ಆಕೆಯ ಅಭಿಮಾನಿಗಳು ಹಾಗೂ  ಚಿತ್ರರಂಗದವರು ಓದಿದ್ದೇ ಓದಿದ್ದು. ಈ ಬಗ್ಗೆ ಏನು ಹೇಳದೆ ಮೌನವಾದ ಈ ಚೆಲುವೆ ನಿಜಕ್ಕೂ ಮದುವೆ ಆಗ್ತಾ ಇದ್ದಾಳೆ ಎಂದು ನಂಬಿದರು ಮಂದಿ !! ಆದರೆ ವಿಷಯ ಹಾಗಿಲ್ಲ, ಈ ಬಗ್ಗೆ ಆಕೆ ಪ್ರತಿಕ್ರಯಿಸಿದ್ದಾಳೆ. ನಾನು ಮದುವೆ ಆಗ್ತಾ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾಳೆ ಅನುಷ್ಕ..ಯಾರೋ ನನ್ನ ಮದುವೆ ಬಗ್ಗೆ ಸುದ್ದಿ ಹಬ್ಬಿಸಿದರೆ ನಂಬದಿರಿ.. ಯಾಕೆಂದ್ರೆ ನನಗೆ ಸಧ್ಯಕ್ಕೆ ಮದುವೆ ಆಗುವ ಉದ್ದೇಶವಿಲ್ಲ ಎಂದು ಹೇಳಿದ್ದಾಳೆ.
 
ನನಗೆ ಒಂದು ಹುಡುಗನನ್ನು ತೋರಿಸಿ ನಾನು ಮದುವೆ ಆಗ್ತೀನಿ. ನನಗೆ ಟೈಮ್ ವೆಸ್ಟ್ ಮಾಡೋಷ್ಟು ಇರಲ್ಲ ಹುಡುಗನನ್ನು ಹುಡುಕುವ ವಿಷಯದಲ್ಲಿ ಎಂದು ಹೇಳಿದ್ದಾಳೆ. ನನಗೆ ಸರಿಯಾದ ಮ್ಯಾಚ್ ಹುಡುಕಿ ತಂದರೆ ಅವರಿಗೆ ಪ್ರೀತಿಯಿಂದ  ಮುತ್ತನ್ನು ಸಹಿತ ನೀಡ್ತೀನಿ ಎಂದು ಹೇಳಿದ್ದಾಳೆ.. ಟ್ರೈ ಮಾಡಿ ಮ್ಯಾಚ್ಮೇಕರ್ಸ್ !!! 

Share this Story:

Follow Webdunia kannada