Webdunia - Bharat's app for daily news and videos

Install App

ಇರುವುದೊಂದು ಹೃದಯ ಯಾರಿಗಂತ ಕೊಡಲಿ.. ನಾ ಯಾರಿಗಂತ ಕೊಡಲಿ ??

Webdunia
ಶನಿವಾರ, 20 ಸೆಪ್ಟಂಬರ್ 2014 (10:34 IST)
ಕನ್ನಡತಿ ಪ್ರಿಯಾಮಣಿ ತನ್ನ ಸಿನಿ ಕೆರಿಯರ್ ಬೆಳೆಸಿಕೊಂಡಿದ್ದು ಟಾಲಿವುಡ್ ಮತ್ತು ಕಾಲಿವುಡ್ ಚಿತ್ರಗಳಲ್ಲಿ. ಆ ಸಿನಿಮ ರಂಗದಲ್ಲಿ ಅನೇಕಾನೇಕ ಚಿತ್ರಗಳಲ್ಲಿ ತನ್ನ ಪ್ರತಿಭೆ ತೋರಿದ ಈ ಚೆಲುವೆ ಕನ್ನಡ ಚಿತ್ರ ರಂಗದಲ್ಲೂ ಸಹಿತ ತನ್ನ ಗಮನ ಕೇಂದ್ರೀಕರಿಸಿ ಪುನೀತ್ ರಾಜ್ ಕುಮಾರ್  , ದರ್ಶನ್ ಅವರ ಜೊತೆಗೂ ಸಹಿತ ನಟಿಸಿದ್ದಾಳೆ. ಆರಂಭಿಕ ಹಂತದಲ್ಲಿ ಸ್ಟಾರ್ ನಟರ ಜೊತೆ ನಟಿಸುವ ಅವಕಾಶಗಳು ಆಕೆಯನ್ನು ಹುಡುಕಿಕೊಂಡು ಬಂತು. ತಾನು ಹೀರೋಯಿನ್ ಓರಿಯೆಂಟೆಡ್ ಚಿತ್ರಗಳಲ್ಲಿ ಮಾತ್ರ ನಟಿಸೋದು ಎಂದು ತೆಗೆದುಕೊಂಡ ನಿರ್ಧಾರದಿಂದ ಆಕೆಗೆ ಬಂದ ಅವಕಾಶಗಳು  ಬೇರೆಯವರ ಪಾಲಾಯಿತು. ಅಲ್ಲದೇ ಈಕೆ ನಟಿಸಿದ ಮಹಿಳಾ ಪ್ರಧಾನ ಚಿತ್ರಗಳು ಮಕಾಡೆ ಮಲಗಿತು.   ಈಗ ಹೆಚ್ಚೇನೂ ಅವಕಾಶಗಳು ಇಲ್ಲದ ಕಾರಣ ಈಗ ಆಕೆ ತಮಿಳು ಟೀವಿ ಷೋ ನಲ್ಲಿ ತನ್ನನ್ನು ತೊಡಗಿಸಿ ಕೊಂಡಿದ್ದಾಳೆ. ಇದೆಲ್ಲ ಆಕೆಯ ವೃತ್ತಿ ಬದುಕಿನ ಕಥೆ. ಆದರೆ  ವೈಯಕ್ತಿಕ   ಬದುಕಿನ ಸಂಗತಿ ವಿಷಯದಲ್ಲಿ ಹೇಳ ಬೇಕಾದ ಸಂಗತಿ ಒಂದಿದೆ.. 
 
ಈಕೆಯ  ಬಳಿ  ಕಾಲಿವುಡ್  ಪ್ರಸಿದ್ಧ ಕ್ಯಾಮರ ಮನ್ ಬಂದು ಮದುವೆ ಆಗುವ ಪ್ರಪೋಸಲ್ ಇಟ್ಟರಂತೆ. ಇದು ಎರಡು ವರ್ಷಗಳ ಹಿಂದಿನ ಕಥೆ. ಇದಕ್ಕೆ ಪೂರಕ  ಆಕೆ ತಕ್ಷಣ ಏನು ಹೇಳದೆ ಹಾಗೆ ಅದನ್ನು ಪಕ್ಕದಲ್ಲಿ ಇಟ್ಟಳಂತೆ. ಈಗ ಹೆಚ್ಚೇನೂ ಅವಕಾಶಗಳು ಇಲ್ಲದ ಪ್ರಿಯಾಗೆ ಮದುವೆ ಆಗುವ ಮನಸ್ಸು ಆರಂಭ ಆಗಿದೆ ಎಂದು ಕಾಣುತ್ತದೆ. ಆಕೆ ಆ ಕ್ಯಾಮರ ಮನ್  ಕಡೆಗೆ ತನ್ನ ಚಿತ್ತ ನೆಟ್ಟಿರುವಂತೆ ಕಾಣುತ್ತದೆ, ಏಕೆಂದರೆ ಪ್ರಿಯಾಮಣಿ ಮದುವೆಗೆ ಆಕೆಯ ಮನೆಯವರಿಂದ ಸಮ್ಮತಿ ಮುದ್ರೆ ಸಿಕ್ಕಿದೆ, ಆದರೆ ತಾನು ಈಗ ಮದುವೆ ಮಾಡಿಕೊಳ್ಳ ಬೇಕೋ ಬೇಡವೋ ಎನ್ನುವ ಗೊಂದಲದಲ್ಲಿ ಇದ್ದಾಳೆ ಈ ಚೆಲುವೆ. ಅಕಸ್ಮಾತ್ ತಾನು ಮದುವೆಯಾದಲ್ಲಿ ಆ ಕ್ಯಾಮರ ಮನ್‌ನನ್ನೇ ಆಗ್ತೀನಿ ಎಂದು ಹೇಳಿದ್ದಾಳೆ.. ಆದ್ರೆ ಮುಂದೇನಾಗುತ್ತೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾದಿದೆ.. ಅದಕ್ಕೆ ಪ್ರಿಯಮಣಿ ಉತ್ತರ ನೀಡ ಬೇಕು..
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments