Select Your Language

Notifications

webdunia
webdunia
webdunia
webdunia

ಶ್ರುತಿಯನ್ನು ಹೋಂ ಸ್ಟೇ ಮಾಡಿದೆ ಪಂಚಭಾಷ ತಾರೆ..

ಶ್ರುತಿಯನ್ನು  ಹೋಂ ಸ್ಟೇ ಮಾಡಿದೆ  ಪಂಚಭಾಷ ತಾರೆ..
ಬೆಂಗಳೂರು , ಶನಿವಾರ, 20 ಸೆಪ್ಟಂಬರ್ 2014 (10:32 IST)
ಕನ್ನಡ ಚಿತ್ರರಂಗದ ಅಪರೂಪದ ನಟಿ ಶ್ರುತಿ. ತನ್ನ ಅಳುಮುಂಜಿ ಪಾತ್ರಗಳ ಮೂಲಕ ಹಾಗು ಅತ್ಯುತ್ತಮ ಅಭಿನಯದ ಮುಖಾಂತರ ಜನರ ಮನದಲ್ಲಿ ಅಚ್ಚಳಿಯದೆ ಉಳಿದ ನಟಿ ಶ್ರುತಿ. ಆಕೆಯ ದಾಂಪತ್ಯ ಬದುಕಲ್ಲಿ ಏರುಪೇರಾದರೂ ಸಹಿತ ರಾಜಕೀಯ ಮತ್ತು ಚಿತ್ರರಂಗ ಆಕೆಯನ್ನು ಕೈ ಹಿಡಿಯ ಕಾರಣ ಶ್ರುತಿ ಜನರ ಮಧ್ಯೆ ಇನ್ನು ಇದ್ದಾರೆ. ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂ  ಭಾಷೆಗಳಲ್ಲಿ ನಟಿಸಿರುವ ಶ್ರುತಿ ಚತುರ್ಭಾಷ ತಾರೆ ಆಗಿದ್ದರು ಆದರೆ ಬಹುನಿರೀಕ್ಷಿತ ಚಿತ್ರ ಹೋಂ ಸ್ಟೇ ಅವರನ್ನು ಪಂಚಭಾಷಾತಾರೆಯನ್ನಾಗಿ ಮಾಡುತ್ತಿದೆ. ಈ ಚಿತ್ರ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲದಲ್ಲಿ ನಿರ್ಮಾಣವಾಗುತ್ತಿದೆ. 
 
ಈ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ ಶ್ರುತಿ. ಇತ್ತೀಚಿಗೆ ಅದ ಅವರ ಜನ್ಮದಿಂದ ಸಮಯದಲ್ಲಿ ಈ ಸಂಗತಿಯನ್ನು ಹೇಳಿದ್ದಾರೆ ಶ್ರುತಿ. ಈಗಾಗಲೇ 125  ಚಿತ್ರಗಳಲ್ಲಿ ನಟಿಸಿರುವ ಶ್ರುತಿ ಈಗ ಪಂಚ ಭಾಷಾ ತಾರೆ ಆಗಿರುವುದು ಕನ್ನಡಿಗರಿಗೆ ಹೆಮ್ಮೆ. ಮಗಳು ಗೌರಿಯೊಂದಿಗೆ  ಆರಾಮವಾದ ಬದುಕನ್ನು ನಡೆಸುತ್ತಿರುವ ಶ್ರುತಿ ಭಾಷೆ  ಯಾವುದೇ ಇರಲಿ ತನ್ನ ಅಭಿನಯದ ಮೂಲಕ ಅಪಾರ ಸಂಖ್ಯೆಯ ಜನಮನ ಗೆದ್ದಿರುವ ಅಭಿನೇತ್ರಿ . ಈಗ  ಹಿಂದಿ ಜನರನ್ನು ಸಹಿತ  ಅಭಿನಯದಿಂದ ತನ್ನತ್ತ ಸೆಳೆಯಲಿ.

Share this Story:

Follow Webdunia kannada