Webdunia - Bharat's app for daily news and videos

Install App

ವಾಲೂ ಸಿನಿಮಾಕ್ಕೆ ಅಡ್ಡಿಯಾದ ಹನ್ಸಿಕ...ದೂರು ದಾಖಲಿನತ್ತ ಶಿಂಬು

Webdunia
ಶುಕ್ರವಾರ, 19 ಸೆಪ್ಟಂಬರ್ 2014 (10:47 IST)
ಕಾಲಿವುಡ್ ನಲ್ಲಿ  ಹೆಸರು ಮಾಡಿರುವ ಹನ್ಸಿಕ ನೆನಪು ಬಂದಾಗ ಜೊತೆಯಲ್ಲಿ ಮನದಲ್ಲಿ ಮೂಡುವ ಹೆಸರು ಶಿಂಬು. ಈ ಜೋಡಿ ತಮ್ಮ ಪ್ರೀತಿ, ಪ್ರಣಯ ಮದುವೆ ಆಗಿಯೇ ಬಿಡ್ತಾರೆ ಎನ್ನುವ ಸುದ್ದಿ ಹೀಗೆ ಪ್ರತಿಯೊಂದು ಮನದ ಪಟಲದಲ್ಲಿ ಬರುತ್ತದೆ. ಅದೇರೀತಿ ಈ ಎರಡು ತಿಂಗಳಲ್ಲಿ ನಡೆದಂತಹ ಪ್ರತಿಯೊಂದು ಸಂಗತಿಯು ಸಹ ಕಾಲಿವುಡ್ ಪಟ್ಟಣದಲ್ಲಿ ಸಾಕಷ್ಟು ಹಾಟ್ ನ್ಯೂಸ್ ಆಗಿದ್ದು ಸತ್ಯ ಸಂಗತಿ.  ಈಗ ಈ ಜೋಡಿ ಮತ್ತೆ ಒಂದಾಗುವ ಪರಿಸ್ಥಿತಿ ಉಂಟಾಗಿದೆ, ಆದರೆ ಸಿನಿಮಾದಲ್ಲಿ  ನಟಿಸಲು ಎನ್ನುವ ಸಂಗತಿ ನೆನಪಲ್ಲಿ ಇರಲಿ. ಶಿಂಬು  ಮತ್ತು ಹನ್ಸಿಕ ನಟನೆಯ ವಾಲೂ ಚಿತ್ರದ ಶೂಟಿಂಗ್ ಮುಗ್ಸಿ ತೆರೆ ಕಾಣ ಬೇಕಿತ್ತು ಆದರೆ ಈ ಜೋಡಿ ಕಾಲ್‌ಶೀಟ್ ನೀಡಿದರು ಸಹಿತ ಯಾವುದ್ಯಾವುದೋ ಕಾರಣಗಳಿಂದ  ಚಿತ್ರದ ಶೂಟಿಂಗ್ ಗೆ ಹೋಗಿರಲಿಲ್ಲ. ಹೀಗೆ ಅನೇಕ ಕಾರಣಗಳಿಂದ ಸಮಯ ಹಾಳು ಮಾಡಿದ್ದರು. 
 
ಈ ಕಾರಣದಿಂದ ಶೂಟಿಂಗ್ ಕುಂಟುತ್ತಾ ಸಾಗಿದ್ದು ಎಲ್ಲರಿಗು ಗೊತ್ತಿರುವ ಸತ್ಯ. ಈ ಚಿತ್ರಕ್ಕೆಂದು ಹನ್ಸಿಕ 60  ದಿನಗಳ ಕಾಲ್‌ಶೀಟ್ ನೀಡಿದ್ದಾಳೆ. ಅದಲ್ಲದೆ ಮತ್ತೂ 20  ದಿನಗಳ ಕಾಲ್‌ಶೀಟ್ ಸಹಿತ ನೀಡಿದ್ದಾಳೆ. ಅದಲ್ಲ ಈಗ ಮತ್ತೆ ಮೂರು ದಿನಗಳ ಕಾಲ್‌ಶೀಟ್ ಬೇಕು ಎನ್ನುವ ಮಾತನ್ನು ಚಿತ್ರತಂಡ ತಿಳಿಸಿದೆ. ಆದರೆ ಆ ಮೂರು ದಿನಕ್ಕೆ ಈಕೆ ಕಡೆಯಿಂದ ನೋ ಅನ್ನುವ ಉತ್ತರ ಸಿಕ್ಕಿದೆ  . ಹನ್ಸಿಕ ನಿರ್ಧಾರಕ್ಕೆ ಚಿತ್ರತಂಡ ಗಾಬರಿಯಾಗಿದೆ. 
 
ಹೀರೋಯಿನ್ ಕಾರಣದಿಂದ ಚಿತ್ರದ ಬಿಡುಗಡೆಗೆ ಕಷ್ಟ ಆಗಿದೆ ಎಂದು ಹನ್ಸಿಕ ಮೇಲೆ ತಪ್ಪು ಹೊರೆಸಿರುವ ಶಿಂಬು ನಿರ್ಮಾಪಕರ ಮಂಡಳಿಗೆ ದೂರು  ನೀಡಲು ಸಿದ್ಧವಾಗಿದ್ದಾರೆ ಎನ್ನುವ ಸುದ್ದಿ ಹರಡಿದೆ. ಈ ಚಿತ್ರದ ಬಗ್ಗೆ ಶಿಂಬು ಯಾಕಿಷ್ಟು ಚಿಂತೆ ಮಾಡ್ತಾ ಇರೋದು ಅಂದ್ರೆ ಆತ ಸಹ ಇದರ ನಿರ್ಮಾಣದಲ್ಲಿ ಪಾಲುಗಾರಿಕೆ ಹೊಂದಿದ್ದಾರೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments