Select Your Language

Notifications

webdunia
webdunia
webdunia
webdunia

ಚಿರಂಜೀವಿ 150 ನೇ ಚಿತ್ರಕ್ಕೆ ಹೀರೋಯಿನ್ ನಿಕ್ಕಿ...ಇನ್ನು ಮುಹೂರ್ತವಷ್ಟೇ ಬಾಕಿ ಇರೋದು..

ಚಿರಂಜೀವಿ 150  ನೇ ಚಿತ್ರಕ್ಕೆ ಹೀರೋಯಿನ್  ನಿಕ್ಕಿ...ಇನ್ನು ಮುಹೂರ್ತವಷ್ಟೇ ಬಾಕಿ ಇರೋದು..
ಹೈದ್ರಾಬಾದ್ , ಗುರುವಾರ, 18 ಸೆಪ್ಟಂಬರ್ 2014 (10:33 IST)
ಟಾಲಿವುಡ್ ಪಟ್ಟಣದಲ್ಲಿ ಈಗ ಹೆಚ್ಚು ಸಂಚಲನ ಉಂಟಾಗಿದೆ, ಅದಕ್ಕೆ ಕಾರಣ ಮೆಗಾಸ್ಟಾರ್  ಚಿರಂಜೀವಿ ನಟನೆಯ 150 ನೇ ಚಿತ್ರದ ಕೆಲಗಳು ಈಗ ವೇಗವಾಗಿ ಆರಂಭ ಆಗಿದೆ. ಮುಖ್ಯವಾಗಿ ಈ ವರೆಗೂ ಚಿರು ಅವರ ಬಹುನಿರೀಕ್ಷಿತ ಚಿತ್ರಕ್ಕೆ ನಿರ್ದೇಶನ ಮಾಡುವವರು ಯಾರು ಎನ್ನುವ ಪ್ರಶ್ನೆ ಮೂಡಿತ್ತು, ಆದರೆ ವಿ ವಿನಾಯಕ್ ನಿರ್ದೇಶಿಸುತ್ತಾರೆ ಎನ್ನುವುದು ಕನ್ಫರ್ಮ್ ಆಗಿದೆ. ಅದಾದ ಬಳಿಕ ಕಥೆ ಬರೆದವರಿಗೆ ಅದರಲ್ಲೂ ತಮ್ಮ ಮನ ಸೆಳೆಯುವಂತಹ ಕಥೆ ಬರೆದವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ಎಂದು ಹೇಳಿದ್ದ ಚಿರು ಮಾತಿಗೆ ಬೆಲೆ ಕೊಟ್ಟು ಅನೇಕರು ಬಂದರು ಸಹಿತ ಯಾರ ಕಥೆಯು ಸಹ ಅವರ ಮನ ಗೆಲ್ಲಲಿಲ್ಲ. ಆದರೆ ಈಗ ಪೆರುಚೂರಿ ಬ್ರದರ್ಸ್ ಕಥೆಗೆ ಅಂತಿಮವಾಗಿ ಓಕೆ ಎಂದಿದ್ದಾರೆ ಚಿರಂಜೀವಿ. ಇಷ್ಟೆಲ್ಲಾ ಆದ ಬಳಿಕ ಚಿರಂಜೀವಿ ಅವರ ಜೊತೆ ಡ್ಯುಯೆಟ್ ಹಾಡೋದು ಯಾರು ಎನ್ನುವ ಪ್ರಶ್ನೆ ಮೂಡುತ್ತದೆ. 
 
ಆಗ ಯಾರು ಇರ ಬಹುದು ಎನ್ನುವ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಈ ಚಿತ್ರಕ್ಕೆ ಅನುಷ್ಕ ಶೆಟ್ಟಿ ನಾಯಕಿಯಾಗಿದ್ದಾಳೆ. ಆಕೆಯೊಂದಿಗೆ ಮಾತುಕತೆ ನಡೆಸಿದೆ ಮೆಗಾ  ಫ್ಯಾಮಿಲಿ ಎಂಬುದಾಗಿ ತೆಲುಗು ಫಿಲಿಂ ನಗರವಾಸಿಗಳು ತಿಳಿಸಿದ್ದಾರೆ. ಈ ಚಿತ್ರದಲ್ಲಿ ಇಬ್ಬರು ಹೀರೋಯಿನ್ ಗಳು ಇದ್ದಾರೆ, ಅದರಲ್ಲಿ ಅನುಷ್ಕ ಗೂ ಅವಕಾಶ ಸಿಕ್ಕಿದೆ.ಈಗ ಮತ್ತೊಂದು ಹೀರೋಯಿನ್ ಯಾರಾಗ ಬಹುದು ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ, ಜೊತೆಗೆ ಮೆಗಸ್ಟಾರ್ ಚಿರಂಜೀವಿ ಜೊತೆ ನಟಿಸುವ ಅವಕಾಶ ಪಡೆಯುತ್ತಿರುವ ಅನುಷ್ಕ ಅದೃಷ್ಟ ಕೊಂಡಾಡುತ್ತಿದ್ದಾರೆ  ಟಾಲಿವುಡ್  ಮಂದಿ . 

Share this Story:

Follow Webdunia kannada